ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ ಪ್ರಥಮ ಸಭೆಯು ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಎ.2ರಂದು ಜರಗಿತು.
ಸಾಂಸ್ಕೃತಿಕ ಕಲಾ ವೇದಿಕೆಯ ಸಂಚಾಲಕ ಚಂದ್ರಾಕೋಲ್ಚಾರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವರ್ಷದ ಲೆಕ್ಕಪತ್ರವನ್ನು ಚಂದ್ರಾ ಕೋಲ್ಚಾರು ಮಂಡಿಸಿದರು. ಬಳಿಕ ಮುಂದಿನ ವರ್ಷದ ಯೋಜನೆಗಳು ಹಾಗೂ ಸದಸ್ಯರುಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ ವತಿಯಿಂದ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡುವುದು ,ಒಂದು ದಿವಸ ಗ್ರಾಮದ ಪ್ರತಿಭೆಗಳಿಗೆ ಅವಕಾಶ ಮಾಡುವುದು, ಐವರ್ನಾಡಿನಲ್ಲಿ ಸಾಂಸ್ಕೃತಿಕ ತಂಡ ರಚಿಸುವುದು ಹಾಗೂ ವಿವಿಧ ಕಲೆಗಳನ್ನು ಗ್ರಾಮದ ಯುವ ಜನತೆಗೆ ತರಬೇತಿ ನೀಡುವುದು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಚರ್ಚಿಸಲಾಯಿತು.ನಂತರ ಏಳು ಜನರ ಸಮಿತಿಯನ್ನು ರಚಿಸಲಾಯಿತು. ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ ಗೌರವಾಧ್ಯಕ್ಷರಾಗಿ ಚಂದ್ರಾ ಕೋಲ್ಚಾರು, ಅಧ್ಯಕ್ಷರಾಗಿ ರಾಮಚಂದ್ರ ಗೌಡ ಪಲ್ಲತ್ತಡ್ಕ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಚಾಕೋಟೆ, ಸದಸ್ಯರುಗಳಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಮಡ್ತಿಲ , ಶ್ರೀಮತಿ ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ, ನಾಗಪ್ಪ ಗೌಡ ಪಾಲೆಪ್ಪಾಡಿ, ಗಣಪತಿ ಭಟ್ ಖಂಡಿಗೆಮೂಲೆ, ಅಂಬಿಕಾ ಪ್ರಸಾದ್ ನೂಜಾಲು ನೇಮಕ ಮಾಡಲಾಯಿತು.
- Thursday
- November 21st, 2024