ಸುಳ್ಯ ನಗರ ಪಂಚಾಯತ್ ಮೀಸಲಿಟ್ಟ ಗಾಂಧಿನಗರದ ವಾಣಿಜ್ಯ ಕಟ್ಟಡದಲ್ಲಿರುವ ಮಳಿಗೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲ್ಪಟ್ಟಿದ್ದು ಇದರ ಮಾಹಿತಿ ಸಂಗ್ರಹಕ್ಕಾಗಿ ಕಳೆದ ಎರಡು ದಿನಗಳ ಹಿಂದೆ ನಗರ ಪಂಚಾಯಿತಿಗೆ ಮನವಿಯನ್ನು ಮಾಡಿದ್ದೆ. ಈ ಘಟನೆಗೆ ಸಂಬಂಧಿಸಿದಂತೆ ನಗರ ಪಂಚಾಯತಿಯ ಮಾಜಿ ಅಧ್ಯಕ್ಷರು ದೂರವಾಣಿ ಮೂಲಕ ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗೊಂಡಿತ್ತು. ವಾಸ್ತವವಾಗಿ ಅವರು ನನಗೆ ಹಿರಿಯರಾಗಿದ್ದು ನನ್ನ ಮೇಲೆ ಪ್ರೀತಿಯಿಂದ ನನಗೆ ತಿಳುವಳಿಕೆಯ ಮಾತನ್ನು ಹೇಳಿಕೊಟ್ಟಿರುತ್ತಾರೆ. ಆದರೆ ಅದನ್ನು ತಪ್ಪು ಅರ್ಥೈಸಿಸಿ ಅವರು ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿದಿದ್ದೆ. ಈ ವಿಷಯದ ಕುರಿತು ಅವರು ಹಾಗೂ ನಾನು ಬಹಳ ದೀರ್ಘವಾಗಿ ಮಾತುಕತೆಯನ್ನು ನಡೆಸಿ ಪರಸ್ಪರ ನಮ್ಮ ವೈಮನಸ್ಸನ್ನು ಸರಿಪಡಿಸಿ ಕೊಂಡಿರುತ್ತೇವೆ. ಆದ್ದರಿಂದ ಅವರ ಮೇಲೆ ನನಗೆ ಯಾವುದೇ ರೀತಿಯ ಮನಸ್ತಾಪ ಇರುವುದಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇನೆ. ಎಂದು ಉದ್ಯಮಿ ರಂಜಿತ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- Thursday
- November 21st, 2024