ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ಹಾಗೂ ವನಿತಾ ಸಮಾಜ (ರಿ.) ಪಂಜ ಇದರ ಜಂಟಿ ಆಶ್ರಯದಲ್ಲಿ ಸೆ.29 ರಂದು ಪಂಜ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನದಡಿಯಲ್ಲಿ ಪೌಷ್ಟಿಕ ಕೈ ತೋಟ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಹೇಮಲತಾ ಜನಾರ್ಧನ್ ಇವರು ವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿದ ಪೋಷಣ್ ಅಭಿಯಾನ ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ.ಕೆ, ಪೋಷಣ್ ಅಭಿಯಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಚಂದ್ರಾವತಿ ಚಿದ್ಗಲ್ಲು ಹಾಗೂ ಪುಷ್ಪಾ ಹರೀಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವನಿತಾ ಸಮಾಜ (ರಿ.) ಪಂಜ ಇದರ ವತಿಯಿಂದ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಕರಿಕ್ಕಳ, ಪಾಂಡಿಗದ್ದೆ, ಪಂಜ, ನಾಗತೀರ್ಥ ಹಾಗೂ ಅಡ್ಡತೋಡು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರತ್ನಾವತಿ, ಶ್ರೀಮತಿ ಪುಷ್ಪಾವತಿಯವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮವನ್ನು
ಪಂಜ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾಗೀರಥಿ ಸ್ವಾಗತಿಸಿ, ಚಂದ್ರಾವತಿ ಚಿದ್ಗಲ್ಲು ವಂದಿಸಿದರು.