ಸುಳ್ಯ ನಗರ ಮತ್ತು ತಾಲೂಕಿನಾದ್ಯಂತ ಈಗಾಗಲೇ ಹಲವಾರು ಸಮಾಜ ಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡು ಸಮಾಜದ ವಿವಿಧ ಮೂಲಭೂತ ಸಮಸ್ಯೆಗಳ ಕುರಿತು ಸ್ಪಂದಿಸುತ್ತಿದ್ದ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದೀಗ ನೂತನವಾಗಿ ಅಂಬುಲೆನ್ಸ್ ವಾಹನವನ್ನು ಸಾರ್ವಜನಿಕರ ಸೇವೆಗೆ ನೀಡಲು ಮುಂದಾಗಿದೆ.
ಇದರ ಅಂಗವಾಗಿ ಈಗಾಗಲೇ ನೂತನ ಆಂಬುಲೆನ್ಸ್ ಕಾರನ್ನು ಖರೀದಿ ಮಾಡಲಾಗಿದ್ದು ಅತೀ ಶೀಘ್ರದಲ್ಲಿ ಬಡರೋಗಿಗಳ ಸೇವೆಗೆ ನೀಡಲಾಗುವುದೆಂದು ಟ್ರಸ್ಟಿನ ಅಧ್ಯಕ್ಷ ಆರ್.ಬಿ. ಬಶೀರ್ ತಿಳಿಸಿದ್ದಾರೆ.