ಪಕ್ಷದ ವ್ಯವಹಾರಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸಿಲಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ವಜಾಗೊಳಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಆದೇಶಿಸಿದ್ದಾರೆ.
ಈ ಬಗ್ಗೆ ಧರ್ಮಪಾಲ ಕೊಯಿಂಗಾಜೆ ಅವರನ್ನು ಸಂಪರ್ಕಿಸಿದಾಗ ನಿನ್ನೆ ದಿನ ಎ.ಐ.ಸಿ.ಸಿ. ಹಾಗು ಕೆ.ಪಿ.ಸಿ.ಸಿ. ಯ ನಿರ್ದೇಶನದಂತೆ ಕೇಂದ್ರ ಸರಕಾರದ ರೈತ , ಕಾರ್ಮಿಕ , ದಲಿತ ವಿರೋದಿ ನೀತಿಯನ್ನು ಖಂಡಿಸಿ ರೈತ ಹೋರಾಟಗಾರರ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿತ್ತು . ಆದರಂತೆ ಬ್ಲಾಕ್ ಕಾಂಗ್ರೆಸ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ರೈತ ಪರ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಾಟ್ಸಪ್ ಮೆಸೇಜ್ ಹಾಕಿರುತ್ತೇನೆ. ಆದರಂತೆ ನಿನ್ನೆ ದಿನ ಸುಳ್ಯದಲ್ಲಿ ಎಲ್ಲರು ಸೇರಿಕೊಂಡು ಪ್ರತಿಭಟನ ಮೆರವಣಿಗೆ , ಸಭೆ ಬಹಳ ಯಶಸ್ವಿಯಾಗಿ ನಡೆಯಿತು . ಇದರಲ್ಲಿ ಕಾಂಗ್ರೆಸ್ ನ ಹಲವಾರು ಪ್ರಮುಖ ರೈತ ನಾಯಕರು ಹಾಗು ರೈತ ಕಾರ್ಯಕರ್ತರು ಭಾಗವಹಿಸಿದ್ದರು . ಅವರಂತೆ ನಾನುಕೂಡಾ ಭಾಗವಹಿಸಿದ್ದೆ . ಹಾಗೆ ಭಾಗವಹಿಸಿರುವುದು ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಪೂರಕ ಎಂಬುದು ನನ್ನ ವೆಯಕ್ತಿಕ ಅಭಿಪ್ರಾಯವಾಗಿದೆ .
ಹೈಕಮಾಂಡ್ ನಿರ್ದೆಶನದ ಮೇರೆಗೆ ರೈತ ಹೋರಾಟದಲ್ಲಿ ಭಾಗವಹಿಸಬೇಕಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗೈರು ಆಗಿರುವುದು ಮಾತ್ರವಲ್ಲದೆ ಭಾಗವಹಿಸಿದ ನನ್ನನ್ನು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸಿರುವುದು ಸದಾ ಪಕ್ಷದ ಚಿಂತನೆಯಲ್ಲಿ ತೊಡಗಿಕೊಳ್ಳುತ್ತಿದ್ದ ಯುವಕನಾದ ನನಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ನಡೆ ಆಶ್ಚರ್ಯ ಉಂಟುಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಅವರನ್ನು ಸಂಪರ್ಕಿಸಿದಾಗ ನಿನ್ನೆ ನಡೆದ ಪ್ರತಿಭಟನೆಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಹುದ್ದೆಯಿಂದ ಇವರನ್ನು ತೆರವುಗೊಳಿಸಿದಕ್ಕೂ ಯಾವುದೇ ಸಂಬಂಧವಿಲ್ಲ. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ಸಿನ ಹಿರಿಯ ಮುಖಂಡರುಗಳು ,ನಗರ ಪಂಚಾಯತ್ ಸದಸ್ಯರುಗಳು, ಅನೇಕ ಕಾರ್ಯಕರ್ತರುಗಳು ಭಾಗವಹಿಸಿದ್ದರು. ಅವರನ್ನು ಯಾರನ್ನೂ ಸಮಿತಿಯಿಂದ ಕೈಬಿಡದೆ ಇವರನ್ನು ಮಾತ್ರ ಕೈಬಿಟ್ಟಿರುವುದು ಎಂದಿರುವುದಕ್ಕೆ ಯಾವುದೇ ಸ್ಪಷ್ಟತೆಯಿಲ್ಲ. ಪಕ್ಷದ ಅವರ ಕಾರ್ಯವೈಖರಿಯಲ್ಲಿ ಆಂತರಿಕ ಸಮಸ್ಯೆಗಳಿಂದ ಹಿನ್ನೆಲೆಯಲ್ಲಿ ಅವರನ್ನು ಕಾರ್ಯದರ್ಶಿ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಅದಲ್ಲದೆ ಬೇರೆ ಏನು ಇಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ