Ad Widget

ಬೆಳ್ಳಾರೆ ಬಲಿಗಾಗಿ ಕಾದು ಕುಳಿತಿದೆ ತೆಂಗಿನ ಮರ


          ಬೆಳ್ಳಾರೆ – ಸುಳ್ಯ ಮುಖ್ಯರಸ್ತೆಯಲ್ಲಿ ಬೆಳ್ಳಾರೆ ಪೇಟೆಯಿಂದ ಅಣತಿ ದೂರದಲ್ಲಿರುವ ಬೂಡು ಎಂಬಲ್ಲಿ ತೆಂಗಿನ ಮರವೊಂದರ ಕಾಂಡ ಮಣ್ಣಿನಿಂದ ಶಿಥಿಲಗೊಂಡು ಅಡಿಕೆ ಮರಗಳ ನಡುವೆ ಸಿಲುಕಿಕೊಂಡು ರಸ್ತೆ ಮೇಲೆ ವಾಲಿ ನಿಂತುಕೊಂಡಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಆತಂಕದಲ್ಲಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ತೆಂಗಿನ ಮರ ಬಿದ್ದರೆ ಅದರ ಕೆಳಗಡೆ ಹಾದು ಹೋಗಿರುವ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆ ಮೇಲೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!