ಬಾಳಿಲ ಗ್ರಾಮ ಪಂಚಾಯತ್ನಲ್ಲಿ ವಿಶೇಷ ಗ್ರಾಮಸಭೆಯು ಸೆ.19ರಂದು ಬಾಳಿಲ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ನಿರಂಜನ ಚಿದಾನಂದ ಹಿರೇಮಠ ವಹಿಸಿದ್ದರು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು. ಜೂನಿಯರ್ ಇಂಜಿನಿಯರ್ ಜನಾರ್ಧನರವರು ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರಿಗೂ ಶುದ್ಧಜಲ ಒದಗಿಸುವ ನಿಟ್ಟಿನಲ್ಲಿ ಗ್ರಾಮಪಂಚಾಯತ್ ವ್ಯಾಪ್ತಿಯ ಎಲ್ಲಾ ಕುಟುಂಬಗಳು ಜಲಜೀವನ್ ಮಿಷನ್ನ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಮಾಜಿ ಸದಸ್ಯ ರಾಧಾಕೃಷ್ಣ ರಾವ್ ಉಡುವೆಕೋಡಿ, ರವೀಂದ್ರ ರೈ, ವಾರಿಜ ಬೊಳಿಯಕಂಡ, ಕಾರ್ಯದರ್ಶಿ ಜಯಶೀಲ ರೈ, ಸರ್ವೇ ಸೂಪರ್ವೈಸರ್ ಸಿಂಗಾರ್ ಸೆಟ್ಟಿ, ಸರ್ವೇಯರ್ ರವೀಂದ್ರ ಹಾಗೂ ನೀರು ನೈರ್ಮಲ್ಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- Monday
- November 25th, 2024