ಸುಳ್ಯದ ಬಸ್ ನಿಲ್ದಾಣದ ಬಳಿ ಹಲವು ತಿಂಗಳುಗಳಿಂದ ಚರಂಡಿಯ ಸ್ಲಾಬ್ ಮುರಿದುಬಿದ್ದು ಅಪಾಯದ ಸ್ಥಿತಿಯಲ್ಲಿ ನಿಂತಿದ್ದವು. ಇದರ ಬಗ್ಗೆ ಕಳೆದ ಎರಡು ಬಾರಿ ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಗಳನ್ನು ಮಾಡಲಾಗಿತ್ತು.
ನಗರದ ಪುಟ್ ಪಾತ್ ಗಳ ಅವಸ್ಥೆ
ಆದರೆ ಇತ್ತ ಕಡೆ ಗಮನಹರಿಸದ ಇವರು ಇದಕ್ಕೂ ಮುನ್ನ ಹಲವು ವಾಹನಗಳು ಇದೇ ಸ್ಥಳದಲ್ಲಿ ಬೀಳಲು ಕಾರಣಕರ್ತರಾದರು. ಇದೀಗ ಮತ್ತೊಮ್ಮೆ ಕಾರೊಂದು ರಸ್ತೆ ಬದಿ ತಿರುಗುತ್ತಿದ್ದ ವೇಳೆ ಕಾರಿನ ಚಕ್ರ ಈ ಮೊದಲೇ ಮುರಿದುಬಿದ್ದ ಫುಟ್ ಪಾತ್ ಸ್ಲ್ಯಾಬ್ ಮೇಲೆ ಹೋದ ಪರಿಣಾಮ ಕಾರಿನ ಚಕ್ರ ಚರಂಡಿಗೆ ಇಳಿಯಿತು. ಬಳಿಕ ಸಾರ್ವಜನಿಕರ ಸಹಕಾರದಿಂದ ಕಾರನ್ನು ಮೇಲೆತ್ತಲಾಯಿತು. ಕಾರು ಐವರ್ನಾಡಿನ ಚಂದ್ರಲಿಂಗಂ ಅವರಿಗೆ ಸೇರಿದ್ದಾಗಿದ್ದು ಕಾರಲ್ಲಿದ್ದವರಿಗೆ ಯಾವುದೇ ಅಪಾಯ ಆಗಿಲ್ಲ ಎಂದು ತಿಳಿದುಬಂದಿದೆ. ಇನ್ನಾದರೂ ಸಂಬಂಧಪಟ್ಟವರು ಇದರ ಬಗ್ಗೆ ಕ್ರಮ ಕೈಗೊಳ್ಳಲಿ ಎಂಬುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ.