ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. 2019 ರಲ್ಲಿ ಆಶಾ ತಿಮ್ಮಪ್ಪ ರವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿರುವಾಗ ಜಿ.ಪಂ.ನಿಂದ ನಿರ್ಣಯ ಮಾಡಿ ಕಳಿಸಲಾಗಿತ್ತು. ಸರಕಾರದ ಮಟ್ಟದಲ್ಲಿ ಬಾಕಿ ಉಳಿದಿರುವ ಬಗ್ಗೆ ಅಸಮಾಧಾನಕ್ಕೆ ಕಾರಣವಾಗಿದೆ. ತಾಲೂಕಿನ ಎರಡನೇ ಅತೀ ದೊಡ್ಡ ಪಟ್ಟಣವಾಗಿರುವ ಬೆಳ್ಳಾರೆಯಲ್ಲಿ 24×7 ಸೇವೆ ವ್ಯವಸ್ಥೆಯ ಆರೋಗ್ಯ ಕೇಂದ್ರವಿದ್ದರೂ , ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಇಲ್ಲದೇ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ . ಸಂಜೆಯ ಹೊತ್ತು ಪ್ರಾರಂಭವಾಗುವ ಕಾಯಿಲೆಗಳಿಂದಾಗಿ ಜನರು ಪರದಾಡಬೇಕಾಗಿದೆ .
ಸಂಜೆ 4 ಗಂಟೆಯ ನಂತರ ಯಾವುದೇ ಖಾಸಗಿ ವೈದ್ಯರುಗಳು ಹಾಗೂ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೇ ಸಮಸ್ಯೆಯಾಗುತ್ತಿರುವುದರಿಂದ ರಾತ್ರಿ ಪಾಳಿಗೆ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ನಿಯೋಜಿಸಿ ಗ್ರಾಮಸ್ಥರ ಬಹು ದೊಡ್ಡ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೆಳ್ಳಾರೆ ಪ್ರಾ.ಆ.ಕೇಂದ್ರವು 24×7 ಸೇವೆಗೆ ಲಭ್ಯವಾಗುವಂತೆ ತಾವುಗಳು ವೈದ್ಯರನ್ನು ನಿಯೋಜಿಸಿ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮಹಿಳಾ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗೀತಾ ಪ್ರೇಮ್, ಲೀಲಾವತಿ ಶೆಟ್ಟಿ ಮಂಡೆಪು, ಶಕೀಲಾ ವೈ ಶೆಟ್ಟಿ, ಗುಣವತಿ ಮಂಡೆಪು, ನಂದಿನಿ, ಹಾಗೂ ನಿವೃತ್ತ ಕಸ್ಟಮ್ಸ್ ಅಧಿಕಾರಿ ರಾಮಕೃಷ್ಣ ಭಟ್, ಸುರೇಶ್ ರೈ ಪನ್ನೆ, ಚಂದ್ರಶೇಖರ ಪನ್ನೆ, ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಮೋನಪ್ಪ ತಂಬಿನಮಕ್ಕಿ, ನವೀನ್, ಐತಪ್ಪ ಗೌಡ,ವಿನಯ ಭಾರದ್ವಾಜ್, ಉಲ್ಲಾಸ್ ಹೋಟೆಲ್ ವಸಂತ ಗೌಡ, ನವೀನ್ ರೈ, ಕೃಷ್ಣಪ್ಪ ಶೆಟ್ಟಿ, ತಿಮ್ಮಪ್ಪ ಪಾರೆಸ್ಟ್ ಕಾಯಾರ, ಭಾಸ್ಕರ್ ನೆಟ್ಟಾರು ಉಪಸ್ಥಿತರಿದ್ದರು.