ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡ ಇದರ ನೂತನ ವೀರಾಂಜನೇಯ ಶಾಖೆ ಶೆಟ್ಟಿಮಜಲು ಇದರ ಉದ್ಘಾಟನಾ ಕಾರ್ಯಕ್ರಮವು ಸೆ. 26 ರಂದು ಮಡಪ್ಪಾಡಿ ಯುವಕ ಮಂಡಲದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಸೋಮಶೇಖರ ಪೈಕ ವಹಿಸಿದ್ದರು. ಮಡಪ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎನ್.ಟಿ. ಹೊನ್ನಪ್ಪ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಭಜರಂಗದಳ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ದಿಕ್ಸೂಚಿ ಭಾಷಣಗೈದರು. ಪುತ್ತೂರು ವಿಹಿಂಪ ಅಧ್ಯಕ್ಷರಾದ
ಡಾ|ಕೃಷ್ಣಪ್ರಸನ್ನ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಸುಳ್ಯ ವಿಹಿಂಪ ಪ್ರಧಾನ ಕಾರ್ಯದರ್ಶಿ ರಂಜಿತ್ ಸುಳ್ಯ, ಭಜರಂಗದಳ ಜಿಲ್ಲಾ ಸಂಯೋಜಕ ಶ್ರೀಧರ ತೆಂಕಿಲ, ಭಜರಂಗದಳ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ, ಭಜರಂಗದಳ ಸಂಯೋಜಕ್ ನಿತೇಶ್ ಉಬರಡ್ಕ, ಸುಳ್ಯ ವಿಹಿಂಪ ಸಹ ಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಭಜರಂಗದಳ ಸುಳ್ಯದ ಸುರಕ್ಷಾ ಪ್ರಮುಖ್ ಸನತ್ ಪದವು ಚೊಕ್ಕಾಡಿ, ಸುಳ್ಯ ಭಜರಂಗದಳ ಸಾಪ್ತಾಹಿಕ ಮಿಲನ್ ರಕ್ಷಿತ್ ದೇರಾಜೆ, ಸುಳ್ಯ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ವಿನಯ್ ಮುಳುಗಾಡು ಹಾಗೂ ಶಕುಂತಳಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕರಸೇವಕರಾದ ಲೋಕಪ್ಪ ಶೀರಡ್ಕ, ಗಂಗಾಧರ ಮಾವಿನಗೊಡ್ಲು ಹಾಗೂ ವಿಶ್ವನಾಥ ನಂದಗೋಕುಲ ಇವರನ್ನು ಸನ್ಮಾನಿಸಲಾಯಿತು.
ವಿಶ್ವ ಹಿಂದೂ ಪರಿಷದ್ ವೀರಾಂಜನೇಯ ಶಾಖೆ ಶೆಟ್ಟಿಮಜಲು ಇದರ ಅಧ್ಯಕ್ಷರಾಗಿ ವಿನೋದ್ ಪೂಂಬಾಡಿ, ಕಾರ್ಯದರ್ಶಿಯಾಗಿ ಭಗತ್ ದೇರಾಜೆ, ಸತ್ಸಂಗ ಪ್ರಮುಖ್ ಆಗಿ ತೀರ್ಥರಾಮ ಪೈಲೂರು ಹಾಗೂ ದೇವಿಪ್ರಸಾದ್ ಎಸ್,
ಸಂಯೋಜಕರಾಗಿ ಶುಭಕರ ನರ್ಪ, ಸಹ ಸಂಯೋಜಕರಾಗಿ ಕಿರಣ್ ಕುಮಾರ್ ಕರಂಗಲಡ್ಕ, ಗೋ ರಕ್ಷಕ್ ಪ್ರಮುಖ್ ಆಗಿ ಅವಿನಾಶ್ ಬಲ್ಕಜೆ,
ಸಹ ಗೋ ರಕ್ಷಕ್ ಪ್ರಮುಖ್ ಆಗಿ ದೀಕ್ಷಿತ್ ಶೆಟ್ಟಿಮಜಲು,
ಸುರಕ್ಷಾ ಪ್ರಮುಖ್ ಆಗಿ ಚೆನ್ನಕೇಶವ ನರ್ಪ ಹಾಗೂ ಧನಂಜಯ ನರ್ಪ, ಸಾಪ್ತಾಹಿಕ ಮಿಲನ್ ಆಗಿ ಲಿಖಿತ್ ಕುದ್ವ, ವಿದ್ಯಾರ್ಥಿ ಪ್ರಮುಖ್ ಆಗಿ ಗಗನ್ ನಡುಬೆಟ್ಟು ಹಾಗೂ ಮೇಘನ್ ಮುಳುಗಾಡು ಆಯ್ಕೆಯಾದರು.