ರೈತ, ಕಾರ್ಮಿಕ ವಿರೋಧಿ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ ವಾಣಿಜ್ಯ ಮತ್ತು ಇತರ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ,ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯದ ರೈತ-ಕಾರ್ಮಿಕ ದಲಿತ ಸಂಘಗಳು ನೀಡಿದ್ದ ಕರ್ನಾಟಕ ಬಂದ್ ಪ್ರತಿಭಟನೆ ಅಂಗವಾಗಿ ಸುಳ್ಯದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಇಂದು ನಡೆಯಿತು.
ಸಭೆಗೂ ಮುನ್ನ ಸುಳ್ಯ ಜ್ಯೋತಿವೃತ್ತದಿಂದ ಪ್ರತಿಭಟನಾ ಮೆರವಣಿಗೆಯನ್ನು ಕಾಲ್ನಡಿಗೆ ಜಾಥಾ ಮೂಲಕ ಆರಂಭಿಸಿ ಗಾಂಧಿನಗರದ ವರೆಗೆ ತೆರಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಈ ಪ್ರತಿಭಟನಾ ಸಭೆಯಲ್ಲಿ ನೂರಾರು ರೈತ ಸಂಘದ ಕಾರ್ಯಕರ್ತರು, ಕಾರ್ಮಿಕ ಸಂಘದ ಕಾರ್ಯಕರ್ತರು, ಕಾಂಗ್ರೆಸ್ , ಜೆಡಿಎಸ್, ಎಸ್ಡಿಪಿಐ, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಸುಳ್ಯ ತಾಲೂಕಿನಾದ್ಯಂತ ಬಂದ್ ಗೆ ಯಾವುದೇ ಪ್ರತಿಕ್ರಿಯೆ ಕಂಡು ಬರಲಿಲ್ಲ.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಕೆ.ಪಿ. ಜಾನಿ, ರೈತ ಸಂಘದ ಮುಖಂಡ ಲೋಲಜಾಕ್ಷ ಭೂತಕಲ್ಲು, ಜೆಡಿಎಸ್ ಪಕ್ಷದ ಮುಖಂಡ ಎಂ.ಬಿ. ಸದಾಶಿವ, ರಾಕೇಶ್ ಕುಂಟಿಕಾನ, ದಯಾಕರ ಆಳ್ವ, ಇಕ್ಬಾಲ್ ಎಲಿಮಲೆ, ಹಸೈನಾರ್ ಕಲ್ಲುಗುಂಡಿ, ರೋಹನ್ ಪೀಟರ್, ರಾಮಚಂದ್ರ ಬಳ್ಳಡ್ಕ, ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿ.ಕೆ. ಹಮೀದ್, ಮಹಮ್ಮದ್ ಕುಂಞಿ ಗೂನಡ್ಕ,
ಇಬ್ರಾಹಿಂ ಹಾಜಿ ಕತ್ತರ್, ತಾಜ್ ಮಹಮ್ಮದ್ ಕಲ್ಲುಗುಂಡಿ, ಸತ್ಯ ಕುಮಾರ್ ಆಡಿಂಜ,
ಮುನೀರ್ ಪಾಜಪಳ್ಳ, ಸಿದ್ಧಿಕ್ ಕೋಕೋ, ಮಂಜುನಾಥ ಬಳ್ಳಾರಿ, ಧರ್ಮಪಾಲ ಕೊಯಿಂಗಾಜೆ, ಪಿಎಸ್ ಗಂಗಾಧರ್, ಗೀತಾ ಕೊಲ್ಚಾರ್, ಸೋಮಶೇಖರ ಕೊಂಯಿಗಾಜೆ, ನ.ಪಂ.ಸದಸ್ಯರಾದ ಕೆ.ಎಸ್.ಉಮ್ಮರ್, ರಿಯಾಜ್ ಕಟ್ಟೆಕಾರ್, ಧೀರ ಕ್ರಾಸ್ತಾ
ಸುಧೀರ್ ರೈ ಮೇನಾಲ, ಮುಸ್ತಫ ಹಾಜಿ ಜನತಾ, ತಾಜ್ ಮಹಮ್ಮದ್, ರಫೀಕ್ ಪಡು, ಶರೀಫ್ ಕಂಠಿ, ದಲಿತ ಸಮಿತಿಯ ನೇತಾರರಾದ ನಾರಾಯಣ ತೊಡಿಕಾನ ಆನಂದ ಬೆಳ್ಳಾರೆ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ದೀಕ್ಷಿತ್ ಜಯನಗರ, ಮೊದಲಾದವರು ಉಪಸ್ಥಿತರಿದ್ದರು.