ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತ ದಲಿತ ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿರುವುದರ ವಿರುದ್ಧವಾಗಿ ಸೆ.28 ರಂದು ನಡೆಸುವಂತಹ ಭಾರತ ಬಂದ್ ನ ಭಾಗವಾಗಿ ಸುಳ್ಯದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಜ್ಯೋತಿ ವೃತ್ತದಿಂದ ನಡೆಯುವ ಹೋರಾಟಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ನೀಡಲಿದೆಯೆಂದು ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಪ್ರಕಟಣೆ ಯಲ್ಲಿ ಸುಳ್ಯ ತಿಳಿಸಿದ್ದಾರೆ.
ಈ ಹೋರಾಟಗಳಲ್ಲಿ ನಮ್ಮ ಕಾರ್ಯಕರ್ತರು ಹಿತೈಷಿಗಳು ಮತ್ತು ಬೆಂಬಲಿಗರು ಪಾಲ್ಗೊಂಡು ಫ್ಯಾಸಿಸ್ಟ್ ಸರ್ಕಾರದ ರೈತ,ದಲಿತ,ಕಾರ್ಮಿಕ ವಿರೋಧಿ ನಿಲುವುಗಳ ವಿರುದ್ಧ ಹೋರಾಟ ಮಾಡಬೇಕೆಂದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Friday
- November 22nd, 2024