ಕೃಷಿ ಮಸೂದೆ ವಿವಿಧ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಸುಮಾರು ೨೬೫ಕ್ಕೂ ಸಂಘಟನೆಗಳು ಬೀದಿಗಿಳಿದಿದ್ದು, ಸುಳ್ಯದಲ್ಲಿ ೧೦ಕ್ಕಿಂತ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದೆ.
ಹೊಸ ಕೃಷಿ ಕಾನೂನುಗಳು ಅನ್ನದಾತರನ್ನು ಜೀತದಾಳುಗಳನ್ನಾಗಿ ಮಾಡಿ ಮತ್ತು ಅವರಿಂದ ಕನಿಷ್ಟ ಬೆಂಬಲ ಬೆಲೆಯನ್ನು ಕಸಿದು ಕಸಿದುಕೊಳ್ಳಲಿದೆ. ಕೃಷಿ ಕಾನೂನಿಂದಾಗಿ ರೈತರಿಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ. ತಾವೇ ಕೂಲಿಯಾಳುಗಳಾಗ ಬೇಕಾಗುತ್ತದೆ. ಕೋಟ್ಯಾಧಿಪತಿಗಳ ಜೀತದಾಳುಗಳಾಗಿ ದುಡಿಯಬೇಕಾಗಿದೆ.ಇದರ ವಿರುದ್ಧ ಸುಳ್ಯದಲ್ಲಿ
ಜ್ಯೋತಿ ಸರ್ಕಲ್ ಬಳಿಯಿಂದ ಮೆರೆವಣಿಗೆ ಮೂಲಕ ಹೊರಟು ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ.
ಕೇಂದ್ರ ಸರಕಾರವು ಜೂ.೩ರಂದು ಇಡೀ ದೇಶಕ್ಕೆ ದೇಶವೇ ಲಾಕ್‌ಡೌನ್‌ನಲ್ಲಿರುವಾಗ ದೇಶಕ್ಕೆ ಅನ್ನ ನೀಡೋ ರೈತ ಹಾಗೂ ದೇಶದ ಸಂಪತ್ತು ಹೆಚ್ಚಿಸಲು ದುಡಿಯುವ ಕಾರ್ಮಿಕರ ಮರಣ ಶಾಸನವೆಂದೇ ವ್ಯಾಖ್ಯಾನಿಸಬಹುದಾದ ಭೂಸುಧಾರಣಾ ಕಾಯ್ದೆ ಎ.ಪಿ.ಎಂ.ಸಿ ಕಾಯ್ದೆ,ವಿದ್ಯುತ್ ಖಾಸಗೀಕರಣ, ಅಗತ್ಯ ಸರಕುಗಳ ಕಾಯ್ದೆಗಳ ತಿದ್ದುಪಡಿ ಮಾಡಿದ್ದು, ಮಾತ್ರವಲ್ಲ ಇದು ೭೦ ವರ್ಷಗಳ ರೈತರ ಬಂಧನವನ್ನು ಬಿಡಿಸೋ ಐತಿಹಾಸಿಕ ಕಾಯ್ದೆ ಎನ್ನುತ್ತಿದ್ದಾರೆ. ಎ.ಪಿ.ಎಂ.ಸಿ ಕಾಯ್ದೆಯ ಎ.ಪಿ.ಎಂ.ಸಿಯಲ್ಲಿ ರೈತರನ್ನು ದಲ್ಲಾಳಿಗಳಿಂದ ರಕ್ಷಿಸಲು ಎನ್ನುತ್ತಿದ್ದಾರೆ. ಆದರೆ ಈ ಸರಕಾರ ಅಧಿಕಾರಕ್ಕೆ ಬರುವ ಮೊದಲು ಗೋಹತ್ಯೆ ನಿಷೇಧ ಕಾಯ್ದೆ ಎನ್ನುತ್ತಿದ್ದರು ಮತ್ತೆ ಏನು ಮಾಡಿದರು. ಎಫ್.ಡಿ.ಐ ಕಾಯ್ದೆಯನ್ನು ವಿದೇಶಿಗಳಿಗೆ, ಭಾರತವನ್ನು ಮತ್ತೆ ಒತ್ತೆಯಿಡೋ ಕಾಯ್ದೆ ಎನ್ನುತ್ತಿದ್ದವರು ಮತ್ತೆ ಏನು ಮಾಡಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದವರು ಏನು ಮಾಡಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಡೆಯುತ್ತೇವೆ ಎಂದವರು ಏನು ಮಾಡಿದರು. ಜಿ.ಎಸ್.ಟಿ ಜಾರಿಯಾಲು ಬಿಡಲಾರೆವು ಎಂದವರು ಮತ್ತೆ ಏನು ಮಾಡಿದರು. ಆಧಾರ್ ಭ್ರಷ್ಟಾಚಾರದ ಯೋಜನೆ ಎಂದೋರು ಮತ್ತೆ ಏನು ಮಾಡಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಪಾತಾಳಕ್ಕಿಳಿದಾಗಲೂ ಭಾರತದಲ್ಲಿ ಹೆಚ್ಚಿಸಿಲ್ಲವೇ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯುತ್ತೇವೆಂದೋರು ಮತ್ತೇನು ಮಾಡಿದರು. ಈ ಎಲ್ಲ ವಿಚಾರಗಳು ಇವರ ಮಾತಿಗೂ ನಡುವಳಿಗೂ ಯಾವುದೇ ಸಂಬಂಧವಿಲ್ಲ ಎನ್ನೋದನ್ನು ಖಚಿತ ಪಡಿಸುತ್ತದೆ .ಆದ್ದರಿಂದ ಸಂವಿಧಾನದ ಅನುಸಾರ ಜನಪ್ರತಿನಿಧಿಗಳ ಸಭೆಗಳಲ್ಲಿ ಚರ್ಚಿಸಿ ಈ ಮೇಲಿನ ಕಾಯ್ದೆಗಳನ್ನು ಜಾರಿ ಮಾಡಲು ಅವಕಾಶವಿದ್ದರೂ ಕೂಡ ಅದನ್ನು ಮಾಡದೆ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರೋ ಕಾಯ್ದೆಗಳು ರೈತ ಸ್ನೇಹಿ ಎಂದು ಇವರ ಮಾತು ಯಾವ ಆಧಾರದಲ್ಲಿ ನಂಬೋದು, ಹಿಂದೆ ಭೂಮಿ ಇಲ್ಲದೆ ಜೀತದಾಳುಗಳಾಗಿ ದುಡಿಯುತ್ತಿದ್ದ ಇಂದಿನ ರೈತರಿಗೆ ಸ್ವಂತ ಭೂಮಿ ದೊರಕಿದ್ದು ಉಳುವವನೇ ಹೊಲದೊಡೆಯ ಎನ್ನೋ ಘೋಷಣೆಯೊಂದಿಗೆ ಜಾರಿಯಾದ ಭೂಸುಧಾರಣಾ ಮಸೂದೆಯಿಂದಾಗಿದೆ. ಇಂದು ಈ ಕಾಯ್ದೆಗೆ ತಿದ್ದುಪಡಿ ತಂದು ರೈತರಿಂದ ಮತ್ತೆ ಭೂಮಿ ಕಸಿದುಕೊಳ್ಳಲು ಕಾರ್ಪೋರೇಟ್ ಕಂಪೆನಿಗಳಿಗಾಗಿ ಭೂ ಮಸೂದೆಗೆ ತಿದ್ದುಪಡಿ ತಂದಿದ್ದಾರೆ. ಎ.ಪಿ.ಎಂ.ಸಿ ಕಾಯ್ದೆಯನ್ನು ದಲ್ಲಾಳಿಗಳ ಕಾಟ ತಪ್ಪಿಸಲು ಮತ್ತು ಕಂಪೆನಿಗಳೊಂದಿಗೆ ನೇರವಾಗಿ ವ್ಯವಹಾರ ಕುದುರಿಸಿಕೊಳ್ಳಲು ಬೇಕಾಗಿ ಮಾಡಿದ್ದು ಎನ್ನುತ್ತಿದ್ದಾರೆ. ಆದರೆ ರೈತ ತನ್ನ ಬೆಳೆಗಳನ್ನು ಅಂಬಾನಿ ಮತ್ತು ಅದಾನಿಗಳಂತಹಾ ಕಾರ್ಪೋರೇಟ್ ದೊರೆಗಳಿಗೆ ಸೇಲ್ ಮಾಡಿದರೆ ಅಂಬಾನಿ ಆದಾನಿಯಂತೋರು ನೇರವಾಗಿ ರೈತನಲ್ಲಿಗೆ ಬರುತ್ತಾರೆಯೇ, ಇಲ್ಲ. ಅಲ್ಲೂ ಯಾವುದೋ ಒಬ್ಬ ದಲ್ಲಾಳಿಯೇ ರೈತರನ್ನು ಭೇಟಿ ಮಾಡೋದು. ಆದ್ದರಿಂದ ಇವೆಲ್ಲವೂ ರೈತರ ಮತ್ತು ದೇಶದ ಜನರ ಕಣ್ಣಿಗೆ ಮಣ್ಣೆರಚೋ ನಾಟಕಗಳು ಮಾತ್ರ ಎನ್ನೋದು ಸ್ಪಷ್ಟ. ಹಾಗೇ ಈ ಹಿಂದೆ ೮ ಗಂಟೆ ದುಡಿಯುತ್ತಿದ್ದ ಕಾರ್ಮಿಕರ ಪರವಾಗಿದೆಯೇ, ೨೦೧೪ಕ್ಕೆ ೨೩.೬ ಬಿಲಿಯನ್ ಅಮೇರಿಕನ್ ಡಾಲರ್ ಇದ್ದ ಮುಖೇಶ್ ಅಂಬಾನಿಯ ಆಸ್ತಿ ಈಗ ೨೦೨೦ಕ್ಕೆ ೮೮.೯ ಬಿಲಿಯನ್ ಅಮೇರಿಕಾ ಡಾಲರ್ ಹೇಗೆ ಹೆಚ್ಚಾಯಿತು. ಅಂಬಾನಿಯ ಜೀಯೋ ದೇಶದಲ್ಲಿ ಆರಂಭಗೊಂಡಾಗ ಅದರ ಪ್ರಚಾರಕರಾಗಿದ್ದವರು ಯಾರು ಎಂದು ಅರ್ಥ ಮಾಡಿಕೊಂಡರೆ ಸಾಕು. ನಮ್ಮ ರೈತರನ್ನು ರಕ್ಷಿಸಲು ಹೋರಾಟದ ಮೂಲಕ ಈ ಕಾರ್ಮಿಕರ ,ರೈತ ವಿರೋಧಿ,
ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಲು ೨೮ರಂದು ಸುಳ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಪತ್ರಿಕಾ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಪಿ ಜಾನಿ, ಲೋಲಜಾಕ್ಷ ಭೂತಕಲ್ಲು, ಕೆ.ಕೆ ಶ್ರೀಧರ, ತೀರ್ಥರಾಮ ಉಳುವಾರು, ಜಯಪ್ರಕಾಶ್ ನೆಕ್ರಪ್ಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
- Friday
- November 22nd, 2024