ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ, ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಸೆ.26 ರಂದು ಸುಳ್ಯದ ಅಂಚೆಕಛೇರಿ ಬಳಿ ಪತ್ರ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು. ‘ಡ್ರಗ್ಸ್ ಮುಕ್ತ ಕರ್ನಾಟಕ’ ದಿಸೆಯಲ್ಲಿ ಈ ಪತ್ರವನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಎ.ಬಿ.ವಿ.ಪಿ.ಯ ನಗರ ಕಾರ್ಯದರ್ಶಿ ಭವಿತೇಶ್ ಹಿರಿಯಡ್ಕ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಕು.ಭವ್ಯ ಹಾಗೂ ಕಾರ್ಯಕರ್ತರಾದ ಡಿವಿನ್ ನಿಡ್ಯಮಲೆ, ರಕ್ಷಿತ್ ಶೀರಡ್ಕ, ಭುವನ್, ಅನಿಲ್ ಗೂನಡ್ಕ ಉಪಸ್ಥಿತರಿದ್ದರು.