ರಾಷ್ಟ್ರೀಯ ಸೇವಾ ಯೋಜನೆಯು 1969 ಸೆಪ್ಟೆಂಬರ್ 24ರಂದು ಜನ್ಮ ತಾಳಿದ್ದು, ಇದನ್ನು ಭಾರತ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ನಡೆಸುತ್ತಿದ್ದು, ಇದು ಒಂದು ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಈ ಯೋಜನೆಯಲ್ಲಿ ಹಲವಾರು ಹೊಸ ಹೊಸ ವಿಚಾರಧಾರೆಗಳನ್ನು ಕಲಿಯಬಹುದಾಗಿದ್ದು, ಇದರೊಂದಿಗೆ ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವನೆಗಳನ್ನು ಬೆಳೆಸಬಹುದಾಗಿದೆ.
ನಾನು ಪ್ರಾಥಮಿಕ ಶಿಕ್ಷಣ ಪಡಿಯುತ್ತಿದ್ದ ಸಂದರ್ಭದಲ್ಲಿ ನಮ್ಮ ಊರಿನಲ್ಲಿಎನ್ ಎಸ್ ಎಸ್ ಶಿಬಿರ ನಡೆಯುತ್ತಿದೆ ಅಂತ ಯಾರೋ ಹೇಳಿದ್ದು ಕೇಳಿಸಿಕೊಂಡೆ, ಆಗ ನನ್ನ ಮನಸ್ಸಿನಲ್ಲಿ ಒಂದು ಹುಚ್ಚು ಕುತೂಹಲ ಮೂಡಿ ಬಂತು. ಅದೇನಪ್ಪ ಅಂದ್ರೆ ಎನ್ ಎಸ್ ಎಸ್ ಶಿಬಿರ ಅಂದ್ರೆ ಏನು? ಅನ್ನುವಂತ ಪ್ರಶ್ನೆ. ಒಂದು ದಿನ ಬೆಳಗ್ಗೆ ಶಿಬಿರ ನಡೆಯುತ್ತಿದ್ದ ಶಾಲೆ ಹತ್ತಿರ ಹೋಗಿ ಸ್ವಲ್ಪ ದೂರದಿಂದ ನಿಂತು ನೋಡಿದೆ ನೋಡುವಾಗ ಶಿಬಿರಾರ್ಥಿಗಳು ಮಣ್ಣಿನ ಕೆಲಸ ಹಾಗೂ ಶಾಲೆಯ ಸುತ್ತ ಮುತ್ತಲಿನ ಕಾಡು ತೆಗಿಯುತ್ತಾ ಇದ್ರು, ಆಗ ನನ್ನಲ್ಲಿ ನಾನೇ ಪ್ರಶ್ನೆ ಮಾಡಿಕೊಂಡೆ ಎನ್ ಎಸ್ ಎಸ್ ಅಂದ್ರೆ ಇಷ್ಟೇನಾ? ಅಂತ!. ಹಾಗೆಯೇ ಮುಂದೆ ಪ್ರೌಢ ಶಿಕ್ಷಣ ಪಡೆಯುತ್ತಿದ್ದ ವೇಳೆಗೆ ನ್ಯೂಸ್ ಪೇಪರ್ ಓದುವಾಗ ಹಲವು ಶಾಲೆಯಲ್ಲಿ ಎನ್ ಎಸ್ ಎಸ್ ಶಿಬಿರ ನಡೆಯುತ್ತಿದೆ ಅಂತ! ಮತ್ತೆಯು ಕೂಡಾ ನನ್ನಲ್ಲಿ ವಿಶೇಷವಾದ ಕುತೂಹಲ ಮೂಡಿತು.
ನಂತರ ನಾನು ಪಿಯುಸಿ ವ್ಯಾಸಂಗಕ್ಕಾಗಿ ಸರಕಾರಿ ಪದವಿ ಪೂರ್ವ ಕಾಲೇಜ್ ಕುಂಬ್ರದಲ್ಲಿ ಸೇರಿದ್ದು ಆ ಕಾಲೇಜಿನಲ್ಲಿ ಎನ್ ಎಸ್ ಎಸ್ ಸೇರುವ ಅವಕಾಶ ಸಿಕ್ಕಿತ್ತು. ನಮ್ಮ ಹಿರಿಯ ವಿದ್ಯಾರ್ಥಿಗಳು ಕ್ಲಾಸ್ ಗಳಿಗೆ ತೆರಳಿ ಎನ್ ಎಸ್ ಎಸ್ ಸೇರುವ ವಿದ್ಯಾರ್ಥಿಗಳು ಹೆಸರು ನೋಂದಾಯಿಸಬೇಕು ಅಂತ ಹೇಳಿದರು. ಆಗ ನಾನು ಬಹುದಿನಗಳಿಂದ ಸೆರೆಬೇಕು ಅನ್ನುವ ಮಹದಾಸೆಯಿಂದ ಇದ್ದಿದ್ದು, ನಂತರ ಎನ್ ಎಸ್ ಎಸ್ ಅಂದ್ರೆ ಏನು ಅಂತ ತಿಳಿದುಕೊಳ್ಳಬೇಕು ಅಂತ ಕುತೂಹಲ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿ ಬಿಟ್ಟಿತ್ತು. ನನ್ನ ಕೆಲವು ಸಹಪಾಠಿಗಳು ಹೇಳಿದ್ರು ಅದರಲ್ಲಿ ಕೆಲಸ ಎಲ್ಲಾ ಇದೆ ಅಂತ. ಆದರೂ ನಾನು ನನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಲೇ ಇಲ್ಲ. ನಂತರ ಕಾಲೆಜಿನಲ್ಲಿಯೇ ವಾರಕ್ಕೆ ಒಂದು ದಿನ ಕ್ಯಾಂಪ್ ನಡೆಸುತ್ತಿದ್ದರು. ಆ ಮೇಲೆ ಒಂದು ವಾರದ ಕ್ಯಾಂಪ್ ಕೂಡಾ ನಡೆಯುಲು ಇತ್ತು. ಆಗ ನನಗೆ ನನ್ನ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಮೂಡಿ ಬಂತು ನಾನು ಆಯ್ಕೆ ಆಗುತ್ತೇನೋ ಇಲ್ವೋ.. ಅಂತ. ಕ್ಯಾಂಪ್ ಗೆ ಆಯ್ಕೆ ಪ್ರಕ್ರಿಯೆಯು ನಡೆಯಿತು ಆಯ್ಕೆ ಕೂಡಾ ಆಗಿದ್ದೆ. ಒಂದು ವಾರದ ಕ್ಯಾಂಪ್ ಅಲ್ಲಿ ಕೂಡಾ ಹೋಗಿ ಶಿಬಿರ ಮುಗಿಸಿದ್ದು ಉತ್ತಮ ವಿಚಾರಗಳನ್ನು ತಿಳಿದಿದ್ದು ಆಯಿತು. ಹಾಗೆಯೇ ನಂತರ ದ್ವಿತೀಯ ವರ್ಷದ ಎರಡನೇ ಕ್ಯಾಂಪ್ ಗೆ ಕೂಡಾ ಹೋಗಿರುತ್ತೇನೆ. ಮತ್ತೆಯೂ ಕೂಡಾ ತುಂಬಾ ಖುಷಿ ನೀಡಿತು.
ನಂತರ ನಾನು ಉನ್ನತ ವ್ಯಾಸಂಗಕ್ಕಾಗಿ ಸುಳ್ಯದ ಪ್ರಥಮ ದರ್ಜೆ ಕಾಲೇಜ್ ಕೊಡಿಯಾಲಬೈಲಿನಲ್ಲಿ ಬಿ. ಕಾಂ. ಮಾಡಲು ಕಾಲೇಜು ಸೇರಿಕೊಂಡೆ. ಎಲ್ಲಾ ಕಾಲೇಜುಗಳಲ್ಲಿ ವಿಶ್ವ ವಿದ್ಯಾನಿಲಯದ ನಿಯಮದ ಪ್ರಕಾರ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕೆಲವು ಯೋಜನೆಗಳನ್ನು ವಿಶ್ವ ವಿದ್ಯಾನಿಲಯವು ಸೂಚಿರುತ್ತದೆ. ಇದ್ರಲ್ಲಿ ನಾನು ಎನ್ ಎಸ್ ಎಸ್ ಅನ್ನು ಆಯ್ಕೆ ಮಾಡಿಕೊಂಡೆ. ಅದ್ಕೆ ಸೇರಿದ ಮೇಲೆ ನಾವು ಯಾವ ರೀತಿ ಆ ಯೋಜನೆಯಡಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತೇವೆ ಅದರ ಮೇಲೆ ನಮಗೆ ಅಂಕ ಕೂಡ ದೊರೆಯುತ್ತಿತ್ತು. ಡಿಗ್ರಿಯಲ್ಲಿ ನಾನು ಮೊದಲ ಕ್ಯಾಂಪ್ ಕೈ ಬಿಟ್ಟಿದ್ದು ವಾರಕ್ಕೊಮ್ಮೆ ನಡೆಯುತ್ತಿದ್ದ ಕ್ಯಾಂಪ್ ಗೆ ಮಾತ್ರ ಹಾಜರಾಗುತ್ತಿದ್ದೆ. ನಂತರ ದ್ವಿತೀಯ ವರ್ಷದ ಕ್ಯಾಂಪ್ ಗೆ ಹೋಗಲೇ ಬೇಕು ಎನ್ನುವ ಛಲದಿಂದ ಹೋಗಿರುತ್ತೆನೆ ಯಾಕೆಂದ್ರೆ ಡಿಗ್ರಿ ಜೀವನದ ಕೊನೆಯ ಕ್ಯಾಂಪ್ ಅನ್ನುವ ದೃಷ್ಟಿಯಿಂದ, ಉತ್ತಮ ರೀತಿಯಲ್ಲಿ ಶಿಬಿರವು ಮೂಡಿಬಂತು. ಅದೇ ಕೊನೆಯ ಕ್ಯಾಂಪ್ ಅಂದುಕೊಂಡಿದ್ದು ಮತ್ತೆಯು ಒಂದು ಅವಕಾಶ ಲಭಿಸಿತ್ತು. ಅದು ಕೂಡ “ನಾಯಕತ್ವ” ಶಿಬಿರಕ್ಕೆ ನನ್ನನ್ನು ನಮ್ಮ ಕಾಲೇಜಿನ ಯೋಜನಾಧಿಕಾರಿಗಳು ಆಯ್ಕೆ ಮಾಡಿ ಕಲಿಸಿಕೊಟ್ಟರು. ಅದು ಕೇವಲ ಕಾಲೇಜಿನಿಂದ ಎಂಟು ಸ್ವಯಂಸೇವಕರಿಗೆ ಮಾತ್ರವಾಗಿದ್ದು ಅದರಲ್ಲೂ ನಾಲ್ಕು ಹುಡುಗರು ನಾಲ್ಕು ಹುಡುಗಿಯರು ಅಂತ ನಿಯಮವಿತ್ತು ನಾಲ್ಕು ಹುಡುಗರ ಪೈಕಿ ನಾನು ಒಬ್ಬನಾಗಿ ಆಯ್ಕೆಯಾದೆ.
ನಾವು ಸಮಾಜದ ಬಂಧು ಬಳಗದ ಹೇಗೆ ಇರ್ಬೇಕು, ಯಾರ ಜೊತೆ ಹೇಗೆ ನಡೆದುಕೊಳ್ಬೇಕು, ಒಬ್ಬ ವ್ಯಕ್ತಿಯ ಜೊತೆಗೆ ಮಾತಾಡ್ಬೇಕು, ಒಂದು ವೇದಿಕೆಯ ಮೇಲೆ ನಿಂತು ಹೇಗೆ ಮಾತಾಡ್ಬೇಕು, ವೇದಿಕೆ ಕಾರ್ಯಕ್ರಮದಲ್ಲಿ ನಿರೂಪಣೆ, ಸ್ವಾಗತ, ಧನ್ಯವಾದ, ಹೇಗೆ ಮಾಡ್ಬೇಕು, ಯಾವುದಾದರೂ ಜವಾಬ್ದಾರಿಯನ್ನು ಕೊಟ್ಟರೆ ಹೇಗೆ ನಿಭಾಯಿಸಬೇಕು, ಹೀಗೆ ಹಲವಾರು ವಿಷಯಗಳನ್ನು ಕಳಿತುಕೊಳ್ಳಬಹುದಾದ ಉತ್ತಮವಾದ ವೇದಿಕೆ ಅಂದ್ರೆ ಅದು ರಾಷ್ಟ್ರೀಯ ಸೇವಾ ಯೋಜನೆ ಮಾತ್ರ ಅಂತ ಹೇಳಿಕೆ ನಾನು ಇಚ್ಛಿಸುತ್ತೇನೆ.
ರಾಷ್ಟ್ರೀಯ ಸೇವಾ ಯೋಜನೆಯ ಘೋಷ ವಾಕ್ಯ ಏನಂದ್ರೆ ” ನನಗಲ್ಲ ನಿನಗೆ” ಎನ್ನುವ ಹಾಗೇ.. ನಾವು ಈ ಯೋಜನೆಗೆ ಸೇರಿದ ಮೇಲೆ ಏನಾದರೂ ಕೆಲಸ ಆಗಿರ್ಬಹುದು, ಜವಾಬ್ದಾರಿ ಗಳನ್ನು ಕೊಟ್ಟರೆ ನನ್ನಿಂದ ಆಗಲ್ಲ ಅನ್ನುವ ಪದನೇ ಬಾರ್ಬರ್ದು ಆ ರೀತಿ ಬೆಳೆಸಿ ಬಿಡುತ್ತದೆ ಈ ಎನ್ ಎಸ್ ಎಸ್. ನಾನು ಮುಂದಿನ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುವುದು ಏನೆಂದ್ರೆ ಕಾಲೇಜು ಜೀವನದಲ್ಲಿ ಎನ್ ಎಸ್ ಎಸ್ ಅನ್ನುವ ಆಯ್ಕೆಯನ್ನು ಮೊದಲು ಆರಿಸಿಕೊಳ್ಳಿ ನೀವುಗಳು ಅದರಲ್ಲಿ ಕೇವಲ ಕೆಲಸ ಅನ್ನುವ ದೂರಾಲೋಚನೆಯನ್ನು ಮೊದಲು ಬಿಟ್ಟು ಬಿಡಬೇಕು. ಎನ್ ಎಸ್ ಎಸ್ ನಲ್ಲಿ ನಾವು ನಮ್ಮನ್ನು ಎಷ್ಟು ತೊಡಗಿಸಿಕೊಳ್ಳುತ್ತೇವೆಯೋ ಅಷ್ಟು ನಮಗೆ ಹೊಸ ಹೊಸ ವಿಚಾರಧಾರೆಗಳನ್ನು ಕಳಿತುಕೊಳ್ಳಬಹುದು. ನಾನು ಎನ್ ಎಸ್ ಎಸ್ ನಿದ ಕಲಿತಂತ ವಿಷಯಗಳು ತುಂಬಾ ಇದೆ ಎನ್ ಎಸ್ ಎಸ್ ನಿಂದಾಗಿಯೇ ನಾನು ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ ಅಂತ ಹೇಳಲು ಹೆಮ್ಮೆ ಪಡುತ್ತೇನೆ. ಎಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಎನ್ ಎಸ್ ಎಸ್ ದಿನದ ಹಾರ್ದಿಕ ಶುಭಾಶಯಗಳು.
📝ಅಶ್ವಥ್ ಅಡ್ಕಾರ್, ಯುವಕ ಮಂಡಲ (ರಿ) ಕನಕಮಜಲು