ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ಬೆಳ್ತಂಗಡಿ ವತಿಯಿಂದ ಅನುಗ್ರಹ ಸಭಾಭವನ ಬೆಳ್ಳಾರೆ ಇಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಹಾಗೂ ಸಮಾಲೋಚನಾ ಸಭೆ ಸೆ.23 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರಾದ ಶಶಿಕುಮಾರ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಎಂಎಸ್ ಬೆಳ್ತಂಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರಬ್ಬರ್ ಟ್ಯಾಪರ್ಸ ಮಜ್ದೂರ್ ಸಂಘದ ಸಂಚಾಲಕರಾದ ಜಯರಾಜ್ ಸಾಲಿಯಾನ್ ಅವರು ಕಾರ್ಮಿಕರು ಸಂಘಟಿತರಾಗುವ ಮೂಲಕ ಸರಕಾರದ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯ ಹಾಗೂ ಸರಕಾರದಿಂದ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ತೆಗೆಸಿಕೊಡಲು ಜನಪ್ರತಿನಿಧಿಗಳಿಗೆ ಒತ್ತಡ ಹೇರಲು ಸಂಘಟನೆಗಳಿಂದ ಸಾಧ್ಯವಾಗುತ್ತದೆ ರಬ್ಬರ್ ಟ್ಯಾಪರ್ ಕಾರ್ಮಿಕರಿಗೆ ಕರ್ನಾಟಕ ರಾಜ್ಯದಲ್ಲಿ ಸೂಕ್ತ ಸೌಲಭ್ಯಗಳು ಇಲ್ಲ ಹೀಗಾಗಿ ಕಾರ್ಮಿಕರನ್ನು ಸಂಘಟಿತರನ್ನಾಗಿ ಮಾಡಿ ಸರಕಾರ ಗಮನಿಸುವ ಹಾಗೆ ಪ್ರಯತ್ನ ಅವಶ್ಯಕವಾಗಿದೆ ಎಂದು ತಿಳಿಸಿದರಲ್ಲದೆ ,ರಬ್ಬರ್ ಬೋರ್ಡ್ ನಿಂದ ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳಾದ ,ಸ್ಕಾಲರ್ ಶಿಪ್ ,ವೈದ್ಯಕೀಯ ಹಾಗೂ ಇತರ ಸಹಾಯಧನ, ಇನ್ಶೂರೆನ್ಸ್ ಯೋಜನೆಗಳು ಶ್ರಮ ಯೋಗಿ ಪ್ರಧಾನ ಮಂತ್ರಿ ಪಿಂಚಣಿ ವ್ಯವಸ್ಥೆ ಗಳ ವಿವರ ಮಾಹಿತಿ ನೀಡಿ ಶೀಘ್ರ ಈ ಯೋಜನೆಗಳ ನೊಂದಾಯಿಸಿ ಪ್ರಯೋಜನಗಳನ್ನು ಪ್ರಯೋಜನ ಪಡೆಯುವಂತೆ ಕರೆ ನೀಡಿದರು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟ್ಯಾಪರ್ ಮಜ್ದೂರ್ ಸಂಘದ ಜಿಲ್ಲಾಅಧ್ಯಕ್ಷರಾದ ಸುರೇಶ್ ದಯಾನಂದ್ ಅವರು ಸಂಘದ ಧ್ಯೇಯ ಉದ್ದೇಶಗಳು ಹಾಗೂ ಗುರಿಗಳನ್ನು ವಿವರಿಸಿದರು ಕಾರ್ಯಕ್ರಮದಲ್ಲಿ ಟ್ಯಾಪರ್ ಮಜ್ದೂರ್ ಸಂಘದ ಕಾರ್ಯದರ್ಶಿಗಳಾದ ನಾಗರಾಜ್ ಮಾಚಾರು, ಖಜಾಂಜಿ ರಾಜ ಮಾಚಾರು, ಬಿ.ಎಂ.ಎಸ್ ಕುಂಬ್ರದ ಪ್ರಮುಖರಾದ ಪುರಂದರ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಭುವನೇಶ್ವರ ಕಾರಿಂಜ ,ಪವನ್ ಕಲ್ಲೋಣಿ, ಟ್ಯಾಪರ್ಸ ಸಂಘದ ಜಿಲ್ಲಾ ಉಪಾಧ್ಯಕ್ಷ ಹರಿ ಶಂಕರ್ ಕೂಟೇಲು ಸೆಲ್ವರಾಜ್ ದರ್ಖಾಸ್ ಅವರು ಸ್ವಾಗತಿಸಿ ನಿರೂಪಿಸಿದರು
- Sunday
- November 24th, 2024