ಸವಣೂರು : ಎಸ್ಕೆ ಎಸ್ ಎಸ್ ಎಫ್ ತ್ವಲಬ ವಿಂಗ್ ಸವಣೂರು ಕ್ಲಸ್ಟರ್ ಪ್ರತಿನಿಧಿ ಸಂಗಮ ಪರಣೆ ಮದ್ರಸ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಣೆ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಕುಂಬಮೂಲೆ ರವರು ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಚಾಪಲ್ಲ ದರ್ಸ್ ವಿದ್ಯಾರ್ಥಿ ಮನ್ಸೂರ್ ಖಿರಾಅತ್ ಪಠಿಸಿದರು. ಸ್ಥಳೀಯ ಖತೀಬ್ ಬಶೀರ್ ದಾರಿಮಿ ದುಆ ನೆರವೇರಿಸಿದರು. ಎಸ್ಕೆ ಎಸ್ ಎಸ್ ಎಫ್ ಸವಣೂರು ಶಾಖೆ ಕಾರ್ಯದರ್ಶಿ ರಿಯಾಝ್ ಫೈಝಿ ಸಭೆಯನ್ನದ್ದೇಶಿಸಿ ಸ್ವಾಗತಿಸಿದರು. ಬಶೀರ್ ದಾರಿಮಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಕೇಂದ್ರ ಬಿಂದು ದ. ಕ ತ್ವಲಬ ಉಸ್ತುವಾರಿ ರಶೀದ್ ರಹ್ಮಾನಿ ಮಾತನಾಡಿ ತ್ವಲಬ ವಿಂಗ್ ವಿದ್ಯಾರ್ಥಿಗಳನ್ನು ಸದೃಢ ವಾಗಿಸುವ ಶಕ್ತಿ. ಸಂಘಟನಾತ್ಮಕ ವಾಗಿ ಕ್ರಿಯಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು. ಎಂದು ಸಂಘಟನೆಯ ಕುರಿತು ವಿಷಯವನ್ನು ಮಂಡಿಸಿದರು. ಬಳಿಕ ರಶೀದ್ ರಹ್ಮಾನಿ ರವರ ನೇತೃತ್ವದಲ್ಲಿ ಕ್ಲಸ್ಟರ್ ನೂತನ ಸಮಿತಿ ರಚಿಸಲಾಯಿತು.ಶಾಖೆಯ ಅಧ್ಯಕ್ಷರಾದ ರಝಾಕ್ ಅಝ್ಹರಿ ಶುಭಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪರಣೆ ಶಾಖೆಯ ವತಿಯಿಂದ ಕ್ವಿಝ್ ಸ್ಪರ್ಧೆ ನಡೆಸಲಾಯಿತು. ವಿಜೇತರಾದ ಪ್ರಥಮ ಸ್ಥಾನ ಪಡೆದ ಸ್ವಾದಿಕ್ ಪಣೆಮಜಲು ದ್ವಿತೀಯ ಸ್ಥಾನ ಪಡೆದ ಅಝ್ಮಾನ್ ಪಣೆಮಜಲು ರವರಿಗೆ ಫಲಕ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಹಲವಾರು ಗಣ್ಯರು, ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು. ರಝಾಕ್ ಹಝ್ಹರಿ ಕಾರ್ಯಕ್ರಮ ವನ್ನು ನಿರೂಪಿಸಿ ವಂದಿಸಿದರು.
- Sunday
- November 24th, 2024