ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ತ್ವಲಬಾ ವಿಂಗ್ ವಿಧ್ಯಾರ್ಥಿ ಸಂಘಟನೆ ವತಿಯಿಂದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ಸೆ.20 ರಂದು ಸುಳ್ಯ ಸುಪ್ರೀಂ ಹಾಲ್ ನಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಮುಶಾವರ ಸದಸ್ಯ ಶೈಖನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ರವರು ನೆರವೇರಿಸಿದರು.ಅಧ್ಯಕ್ಷತೆಯನ್ನು ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜಮಾಲ್ ಬೆಳ್ಳಾರೆ ವಹಿಸಿದ್ದರು.ಬೆಳ್ಳಾರೆ ಜುಮಾ ಮಸೀದಿ ಮುದರೀಸ್ ಮಹಮ್ಮದ್ ತಾಜುದ್ದೀನ್ ರಹ್ಮಾನಿ ಮತ್ತು ಸುಳ್ಯ ಎಸ್ ಕೆ ಎಸ್ ಎಸ್ ಎಫ್ ವಲಯ ಉಪಾಧ್ಯಕ್ಷ ಬಹು ಇರ್ಷಾದ್ ಫೈಝಿ ಹಾಗೂ ಉವೈಸಿ ತೋಕೆ ಸಭೆಯನ್ನುದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಪ್ರಾಂಶುಪಾಲ ಬಹು ಹನೀಫ್ ಹುದವಿ ಮಾತನಾಡಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಮಾರು ಹೋಗದೇ ಅದನ್ನು ವಿರೋಧಿಸಿ ವಿಧ್ಯಾಭ್ಯಾಸಕ್ಕೆ ಒತ್ತು ನೀಡಿ ದೇಶದ ಐಕ್ಯತೆ ಸೌಹಾರ್ದತೆ ಕಾಪಾಡಲು ಸಹಕಾರಿಯಾಗಬೇಕು. ಸಮಾಜದಲ್ಲಿ ವಿಧ್ಯಾಭ್ಯಾಸ ವಿರುವ ವಿದ್ಯಾರ್ಥಿಗಳನ್ನು ಇವತ್ತು ಗೌರವಿಸುತ್ತಾರೆ.ವಿದ್ಯಾರ್ಥಿಗಳಿಗೆ ಚಲವಿದ್ದರೇ ವಿಜ್ಞಾನಿಗಳಗಬಹುದು ,ಇಂಜಿನಿಯರಿಂಗ್ ಅಗಬಹುದು ಉನ್ನತ ವ್ಯಕ್ತಿ ಗಳಗಬಹು ಸುಳ್ಯ ವಲಯ ವಿದ್ಯಾರ್ಥಿ ಸಂಘಟನೆಯಾದ ತ್ವಲಬಾ ವಿಂಗ್ ಕಾರ್ಯ ಪ್ರಶಂಸನೀಯ ಎ ಎಂದು ಹೇಳಿದರು.ಮುಖ್ಯ ತಿಥಿಯಾಗಿ ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಬೆಳ್ಳಾರೆ ಶಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ಮಂಗಳ,ಶಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ,ಸುಳ್ಯ ನಗರ ಪಂಚಾಯಿತ್ ಸದಸ್ಯ ಕೆ.ಎಸ್,ಉಮ್ಮರ್ ,ಸುಳ್ಯ ತಾಲ್ಲೂಕು ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ,ಸುಳ್ಯ ತಾಲ್ಲೂಕು ಎಸ್.ವೈ.ಎಸ್ ಅಧ್ಯಕ್ಷ ಹಮೀದ್ ಹಾಜಿ,ಅಹ್ಮದ್ ಸುಪ್ರೀಂ ,ಅಹಮದ್ ಪಾರೆ ಸುಳ್ಯ ,ಬಶೀರ್ ಯು.ಪಿ.ಬೆಳ್ಳಾರೆ,ಸುಳ್ಯ ವಲಯ ತ್ವಲಬಾ ವಿಂಗ್ ಅಧ್ಯಕ್ಷ ಅಹಮದ್ ಕಬೀರ್ ಅಜ್ಜಾವರ ಮುಂತಾದವರು ಉಪಸ್ಥಿತರಿದ್ದರು .ನಝೀರ್ ಶೂಬೀಝ್,ಅಶೀಕ್ ಸುಳ್ಯ, ರಾಶಿದ್ ಸುಳ್ಯ ಸಹಕರಿಸಿದರು. ಸಮಾರಂಭದಲ್ಲಿ ತ್ವಲಾಬಾ ವಿಂಗ್ ಸಮಿತಿ ವತಿಯಿಂದ ನಡೆಸಿದ ಕ್ವಿಜ್, ಭಾಷಣ,ಪ್ರಬಂಧ ಸ್ಪರ್ಧೆಯಲ್ಲಿ ವಿಜಯಿಯಾದವರಿಗೆ ಬಹುಮಾನ ವಿತರಿಸಲಾಯಿತು. ಶರೀಫ್ ಸಂಪಾಜೆ ಕಿರಾಅತ್ ಪಠಿಸಿ ತ್ವಲಬಾವಿಂಗ್ ಕಾರ್ಯದರ್ಶಿ ಇಸಾಖ್ ಕಳಂಜ ಸ್ವಾಗತಿಸಿ ಸಿನಾನ್ ಅಡ್ಕ ವಂದಿಸಿದರು.
- Friday
- November 22nd, 2024