ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಹಾಗೂ ಮುಂಬರುವ ಗ್ರಾಮ ಪಂಚಾಯತ್ ಗೆ ಯುವಕರನ್ನು ಸಂಘಟಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಸೆಪ್ಟಂಬರ್ 20 ರಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಎನ್ ಎಸ್ ಯು ಐ ಸಮಿತಿಯ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು ಯುವ ಕಾಂಗ್ರೆಸ್ ರಾಷ್ಟ್ರಕ್ಕೆ ಹಲವಾರು ಉನ್ನತ ನಾಯಕರನ್ನು ನೀಡಿದೆ.ತಳಮಟ್ಟದಿಂದ ಬೆಳೆದು ಬಂದಂತಹ ನಾಯಕರು ಯುವ ಕಾಂಗ್ರೆಸ್ ಮೂಲಕ ಮುಂಚೂಣಿಗೆ ಬಂದಿದ್ದಾರೆ.ಕರ್ನಾಟಕದಲ್ಲಿ ಯುವ ಕಾಂಗ್ರೆಸ್ ಆನ್ ಲೈನ್ ಸದಸ್ಯತ್ವಕ್ಕೆ ಚಾಲನೆಯನ್ನು ನೀಡಲಾಗಿದ್ದು, ಸಂಪಾಜೆಯಲ್ಲಿ ಅತ್ಯಧಿಕ ಸಂಖ್ಯೆಯ ಯುವ ಕಾಂಗ್ರೆಸ್ ಸದಸ್ಯರನ್ನು ನೋಂದಾವಣಿ ಮಾಡುವ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ.ಆ ಮೂಲಕ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಜ್ಜಾಗಲಿದ್ದೇವೆಂದು ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಸಂಕಲ್ಪವನ್ನು ನಾವು ಇಟ್ಟುಕೊಂಡಿದ್ದು, ಬೂತ್ ನಲ್ಲಿ ಕೆಲಸ ಮಾಡುವ ಕಾರ್ಯಕರ್ತರು ನಮ್ಮ ನಿಜವಾದ ಸೇನಾನಿಗಳು, ಎಷ್ಟೇ ದೊಡ್ಡ ನಾಯಕರಾದರೂ ಕೂಡ ಬೂತ್ ಮಟ್ಚದಲ್ಲಿ ಕೆಲಸ ಮಾಡದಿದ್ದಲ್ಲಿ ಅಂತಹವರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲವೆಂದವರು ಇದೇ ವೇಳೆ ಹೇಳಿದರು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ರವರು ಮಾತನಾಡಿ ನಾನು ಕೂಡ ಯುವ ಕಾಂಗ್ರೆಸ್ ಮೂಲಕ ಬೆಳೆದು ಬಂದಂತಹ ನಾಯಕ, ಕಾಂಗ್ರೆಸ್ ಪಕ್ಷವು ನನಗೆ ಜನಸೇವೆ ಮಾಡಲು ಎಲ್ಲಾ ಅವಕಾಶಗಳನ್ನು ಮಾಡಿಕೊಟ್ಟಿದೆ ಎಂದು ಹೇಳಿದರು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿ.ಕೆ.ಅಬೂಸಾಲಿಯವರು ಮಾತನಾಡಿ ಸಂಪಾಜೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವು ಬಲಿಷ್ಠವಾಗಿದೆ.ಇಲ್ಲಿ ಕೋಮುವಾದಿಗಳ ಯಾವುದೇ ಅಪಪ್ರಚಾರಗಳಿಗೆ ಜನರು ಆಸ್ಪದವನ್ನು ನೀಡುವುದಿಲ್ಲ.ಅತೀ ಹೆಚ್ಚಿನ ಯುವ ಕಾಂಗ್ರೆಸ್ ಸದಸ್ಯರನ್ನು ಸಂಪಾಜೆಯಲ್ಲಿ ನೋಂದಾಯಿಸುವ ಮೂಲಕ ಕಾಂಗ್ರೆಸ್ ಪಕ್ಷವೇ ಇಲ್ಲಿ ಬಲಿಷ್ಠವಾಗಿದೆ ಎಂದು ತೋರಿಸಬೇಕಾಗಿದೆ ಎಂದವರು ಹೇಳಿದರು.
ಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಬಾಲಚಂದ್ರ, ಎಸ್.ಕೆ.ಹನೀಫ್, ರಕ್ಷಿತ್, ತಾಜುದ್ದೀನ್, ಕಿಶೋರ್ ಕುಮಾರ್, ಅಜರುದ್ದೀನ್, ಜಯಚಂದ್ರ, ಮುನೀರ್ ಪ್ರಗತಿ, ನಾರಾಯಣ, ಮುನೀರ್ ದಾರಿಮಿ, ತಾಜುದ್ದೀನ್ ಅರಂತೋಡು, ನವೀನ, ಉನೈಸ್, ಪ್ರಸನ್ನ ಕುಮಾರ್, ಹಾರಿಸ್ ಝಂ ಝಂ, ಅವಿನಾಶ್, ಶಿಹಾಬ್, ಹರ್ಷಿತ್, ರಿಯಾಜ್, ಅಶ್ರಫ್ ಝಂ ಝಂ, ಕಾಂಗ್ರೆಸ್ ಕಾರ್ಯಕರ್ತರಾದ ಅಬ್ದುಲ್ಲ ಜಿ.ಎಂ, ಕುಂಞಕಣ್ಣ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
- Monday
- November 25th, 2024