Ad Widget

ಪುಣ್ಚತ್ತಾರು : ನೂತನ ಆಟೋರಿಕ್ಷಾ ತಂಗುದಾಣ ಉದ್ಘಾಟನೆ

ಶ್ರೀಹರಿ ಚಾಲಕ ಮಾಲಕರ ಸಂಘ ಪುಣ್ಚತ್ತಾರು ಇದರ ನೂತನ ಆಟೋರಿಕ್ಷಾ ತಂಗುದಾಣದ ಉದ್ಘಾಟನೆ ಹಾಗೂ ನಾಮಫಲಕ ಅಳವಡಿಕೆಯು ಸೆಪ್ಟೆಂಬರ್ 20 ರ ಆದಿತ್ಯವಾರದಂದು ಜರುಗಿತು. ನೂತನ ಆಟೋರಿಕ್ಷಾ ತಂಗುದಾಣವನ್ನು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ) ಪುಣ್ಚತ್ತಾರು ಇದರ ಅಧ್ಯಕ್ಷರಾದ
ಹರೀಶ್ ಪೈಕ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿದರು.
ನಾಮಫಲಕ ಅಳವಡಿಕೆಯ ಉದ್ಘಾಟನೆಯನ್ನು
ಸ್ಥಳೀಯಾರದ ಹುಕ್ರಪ್ಪ ಗೌಡ ಪುಣ್ಚತ್ತಾರು ಹಾಗೂ ಉದ್ಯಮಿಗಳಾದ ಸುಂದರ ಗೌಡ ನಿಡ್ಡಾಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಹರಿ ಅಟೋರಿಕ್ಷಾ ಚಾಲಕ- ಮಾಲಕರ ಸಂಘದ ಗೌರವಾಧ್ಯಕ್ಷರಾದ ದಿನೇಶ್ ಪೈಕ, ಅಧ್ಯಕ್ಷರಾದ ಶಿವರಾಮ ರೈ ಪಿಜಕ್ಕಳ, ಉಪಾಧ್ಯಕ್ಷರಾದ ಸೀತರಾಮ ಅಬ್ಬಡ, ಕಾರ್ಯದರ್ಶಿ ಉಮೇಶ್ ಬೀರುಕುಡಿಕೆ, ಜತೆಕಾರ್ಯದರ್ಶಿ ರಾಕೇಶ್ ಕರಿಮಜಲು,
ಕೋಶಾಧಿಕಾರಿ ಭಾಸ್ಕರ ಕೊಜಂಬೇಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿಗದಿತ ದರ ಪಟ್ಟಿ ಹಾಗೂ ಸಂಘದ ಲಾಂಛನ ಬಿಡುಗಡೆ ಮಾಡಲಾಯಿತು.

. . . . . .

ನಂತರ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಹರಿ ಭಜನಾಮಂಡಳಿಯ ಗೌರವಾಧ್ಯಕ್ಷರಾದ ನಾರಾಯಣ ಗೌಡ ಇಡ್ಯಡ್ಕ, ಕಣ್ವರ್ಷಿ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾದ ಗಣೇಶ್ ಉದನಡ್ಕ, ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಮಾಜಿ ಸದಸ್ಯರಾದ ಬಾಬು ದರ್ಖಾಸು, ಶ್ರೀಹರಿ ಭಜನಾ ಮಂಡಳಿಯ ಅಧ್ಯಕ್ಷರಾದ ಸುಂದರ ನಾಯ್ಕ ಉಪ್ಪಡ್ಕ, ಹಾಲು ಉತ್ಪಾದಕರ ಸಹಕಾರಿ ಸಂಘದ ಕಾಣಿಯೂರು ಒಕ್ಕೂಟದ ಅಧ್ಯಕ್ಷರಾದ ರಾಮಣ್ಣ ಗೌಡ ಮುಡಾಯಿಮಜಲು, ಗಣೇಶೋತ್ಸವ ಸಮಿತಿ ಪುಣ್ಚತ್ತಾರು ಇದರ ಅಧ್ಯಕ್ಷರಾದ ವಿಶ್ವನಾಥ ರೈ ಮಾಳ, ಕಾಣಿಯೂರು ಲಕ್ಷೀನರಸಿಂಹ ಭಜನಾಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಕಣ್ವರ್ಷಿ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವ ಸಲಹೆಗಾರರಾದ ಪರಮೇಶ್ವರ ಗೌಡ ಅನಿಲ, ಮತ್ತು ಕಣ್ವರ್ಷಿ ರಿಕ್ಷಾಚಾಲಕ ಮಾಲಕರ ಸಂಘ ಕಾಣಿಯೂರು ಇದರ ಸ್ಥಾಪಕಾಧ್ಯಕ್ಷರಾದ ರಚನ್ ಬರಮೇಲು, ಕಣ್ವರ್ಷಿ ಸಾಂಸ್ಕೃತಿಕಕಲಾಕೇಂದ್ರ ಕಾಣಿಯೂರು ಇದರ ಸಂಚಾಲಕರಾದ ಸದಾನಂದ ಆಚಾರ್ಯ ಅಬೀರ, ವರಮಹಾಲಕ್ಷಿ ಪೂಜಾ ಸಮಿತಿ ಅಧ್ಯಕ್ಷೆಯಾದ ರೇವತಿ ಮೂಡಾಯಿಮಜಲು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾಪ್ರತಿನಿಧಿಯಾದ ಮನೋರಮಾ ನಾವೂರು ಉಪಸ್ಥಿತರಿದ್ದರು.
ಕಣ್ವರ್ಷಿ ರಿಕ್ಷಾಚಾಲಕ ಮಾಲಕರ ಸಂಘದ ಉಪಾದ್ಯಕ್ಷರಾದ ದೇವಿಪ್ರಸಾದ್ ಕಲ್ಪಡ, ಖಜಾಂಜಿಯಾದ ಮನೋಜ್ ಎಣ್ಮೂರು, ಉದ್ಯಮಿಯಾದ ಪ್ರದೀಪ್ ಬೊಬ್ಬೆಕೇರಿ, ನೇಮಿರಾಜ್ ಕಡೀರ, ಶ್ರೀ ಹರಿ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಮೇದಪ್ಪ ಮಾನ್ಯಡ್ಕ, ರಾಮಣ್ಣ ನಾವೂರು, ಪ್ರವೀಣ್ ಚಂದ್ರ ರೈ ಕುಮೇರು, ತಿಮ್ಮಪ್ಪ ಬೀರುಕುಡಿಕೆ, ಭವಿಷ್ ಕರಿಮಜಲು, ಸುಲಕ್ಷಣ್ ರೈ ಪೈಕ , ರಾಧಾಕೃಷ್ಣ ಪೈಕ, ಪ್ರಶಾಂತ್ ಪೈಕ, ಅನಂತ ಬೈಲಂಗಡಿ ಬೆಳ್ಳಾರೆ ಆರಕ್ಷಕ ಠಾಣೆ ಸಿಬ್ಬಂದಿ ಕೇಶವ ಉಪ್ಪಡ್ಕ ಸಹಕರಿಸಿದರು. ಈ ಸಂದರ್ಭದಲ್ಲಿ ಕಾಣಿಯೂರು, ಪುಣ್ಚತ್ತಾರು, ಸಮಹಾದಿಯ ಎಲ್ಲಾ ರಿಕ್ಷಾಚಾಲಕ ಮಾಲಕರು ಹಾಗೂ ಊರವರು ಉಪಸ್ಥಿತರಿದ್ದರು. ದಿನೇಶ್ ಮಾಳ ಸ್ವಾಗತಿಸಿ, ರವಿಶಂಕರ್ ಎನ್ ಟಿ ನಾವೂರು ಕಾರ್ಯಕ್ರಮ ನಿರೂಪಿಸಿದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!