ಸುಳ್ಯ ಎನ್ನೆಂಪಿಯುಸಿಯಲ್ಲಿ ವಾರ್ಷಿಕ ಕ್ರೀಡಾಕೂಟ

ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನ.06 ರಂದು ನಡೆಯಿತು. ಸಮಾರಂಭದ ಅಧ್ಯಕ್ಷರಾದ ಎಓಎಲ್ಇ(ರಿ.) ಉಪಾಧ್ಯಕ್ಷೆ ಶೋಭಾ ಚಿದಾನಂದ ಅವರು ಧ್ವಜಾರೋಹಣ ನೆರವೇರಿಸಿದರು.

. . . . . . . . .

ಮುಖ್ಯ ಅತಿಥಿಗಳಾದ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ದೀಪ ಪ್ರಜ್ವಲನಗೈದರು. ಪದವಿ ವಿಭಾಗದ ಪ್ರಾಚಾರ್ಯರಾದ ಡಾ. ರುದ್ರ ಕುಮಾರ್ ಎಂ.ಎಂ ಅವರು ಮೀಟ್ ಡಿಕ್ಲೆರ್ ಮಾಡಿದರು, ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಎನ್ನೆಂಸಿಯ ದೈ.ಶಿ. ನಿರ್ದೇಶಕರಾದ ಕ್ಯಾಪ್ಟನ್ ಸೀತಾರಾಮ ಎಂ ಡಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದೈ ಶಿ ನಿರ್ದೇಶಕ ಮಿಥುನ್, ಸಂಸ್ಥೆಯ ಕಬಡ್ಡಿ ಕೋಚ್ ನಾಗರಾಜ್ ನಾಯ್ಕ್ ಭಟ್ಕಳ ಕ್ರೀಡಾಕೂಟದಲ್ಲಿ ಸಹಕರಿಸಿದರು.

ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಮತ್ತು ಬಳಗದವರು ಪ್ರಾರ್ಥಿಸಿದರು. ಕ್ರೀಡಾ ಕಾರ್ಯದರ್ಶಿ ಶೇಕ್ ಅರ್ಮನ್ ನೂರುದ್ದಿನ್ ಪ್ರತಿಜ್ಞಾ ವಿಧಿ ಬೋಧಿಸಿದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ.ಸ್ವಾಗತಿಸಿ,ನಿರೂಪಿಸಿದರು. ಕ್ರೀಡಾ ಸಂಯೋಜಕ ವಿನಯ್ ನಿಡ್ಯಮಲೆ ಸಹಕರಿಸಿದರು.

ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಹೇಮಂತ್, ಪ್ರಮೋದ್, ಯೋಗೇಶ್, ಪ್ರೀತಮ್, ರೋಹಿತ್, ರವಿಕಿರಣ, ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಾದ ಸಂತೋಷ್, ಜೀವನ್, ಕರಾಟೆ ಸ್ಪರ್ಧೆ ವಿಜೇತ ಲೇಖನ್ ಗೌಡ, ವಾಲಿಬಾಲ್ ಜಿಲ್ಲಾ ತಂಡದ ಆಟಗಾರ್ತಿ ಶ್ರಾವ್ಯ, ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ಉಸಿಕ್ತ ಜಗದೀಶ್ ಕ್ರೀಡಾ ಜ್ಯೋತಿ ತಂಡದಲ್ಲಿದ್ದರು. ವಿದ್ಯಾರ್ಥಿನಿಯರಾದ ವೈಷ್ಣವಿ ಬಳಗದವರು ವಾರ್ಮ್ ಅಪ್ ಸೆಷನ್ ನಡೆಸಿಕೊಟ್ಟರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading