ಸೆ.05ರಂದು ದ.ಕ ಜಿಲ್ಲಾ ಬಂದೂಕು ಪರವಾನಗಿದಾರರ ಒಕ್ಕೂಟದ ವತಿಯಿಂದ ಪರವಾನಗಿ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಕೆ

ದಕ್ಷಿಣ ಕನ್ನಡ ಜಿಲ್ಲಾ ಬಂದೂಕು ಪರವಾನಗಿದಾರರ ಒಕ್ಕೂಟದ ವತಿಯಿಂದ ಬಂದೂಕು ಪರವಾನಗಿ ಸಮಸ್ಯೆಗಳ ಕುರಿತು ಸೆ.05ರಂದು ಪುತ್ತೂರಿನ ಪುರಭವನದಲ್ಲಿ ನಡೆಯಲಿರುವ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಅಮರ ಸುದ್ದಿಯೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಂದೂಕು ಪರವಾನಗಿದಾರರ ಒಕ್ಕೂಟದ ಸಂಚಾಲಕರಾದ ಜಯಪ್ರಸಾದ್ ಜೋಶಿ ಬೆಳ್ಳಾರೆ ರವರು “ನಮ್ಮ ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಿಂದಲೂ ಕೃಷಿ ಹಾಗೂ ಆತ್ಮರಕ್ಷಣೆಗಾಗಿ ಆಡಳಿತದಿಂದ ಸೂಕ್ತ ಪರವಾನಿಗೆ ಪಡೆದುಕೊಂಡು ಆಯುಧಗಳನ್ನು(ಕೋವಿ, ರಿವಾಲ್ವರ್ ಇತ್ಯಾದಿ) ಹೊಂದಿರುತ್ತಾರೆ. ಇದು ಕಾಲಕಾಲಕ್ಕೆ ಕ್ರಿಮಿನಲ್ ಕೇಸ್ ರಹಿತರಿಗೆ ಸುಗಮವಾಗಿ ನವೀಕರಣಗೊಳ್ಳುತ್ತಿತ್ತು. ಅಲ್ಲದೇ ಪರವಾನಿಗೆದಾರರಿಗೆ ವಯಸ್ಸಾದಲ್ಲಿ ಅಥವಾ ಅವರು ಮೃತಪಟ್ಟಲ್ಲಿ ಅವರ ವಾರಸುದಾರರು ಅರ್ಜಿ ಸಲ್ಲಿಸಿದಾಗ ಅವರಿಗೆ ವರ್ಗಾವಣೆ ಆಗುತ್ತಿತ್ತು. ಇನ್ನು ಕೆಲವರು ಹೊಸ ಪರವಾನಗಿಗೆ ಅರ್ಜಿ ಸಲ್ಲಿಸಿ ಮಂಜೂರಾಗಿ ಆಯುಧಗಳನ್ನು ಹೊಂದುತ್ತಿದ್ದರು. ಇಂತಹ ಸುಗಮವಾದ ವ್ಯವಸ್ಥೆ 2025 ಮೇ ತಿಂಗಳಿನವರೆಗೆ ರೂಢಿಯಿಂದ ನಡೆದು ಬರುತ್ತಿತ್ತು. ಆನಂತರ ಕಾನೂನು ಬದಲಾಗದಿದ್ದರೂ ಕೂಡ ನಂತರ ಬಂದ ಅಧಿಕಾರಿಗಳು ಲೈಸೆನ್ಸಿಂಗ್ ಹಾಗೂ ನವೀಕರಣ ಇತ್ಯಾದಿ ಅರ್ಜಿಗಳನ್ನು ತಿರಸ್ಕೃತಗೊಳಿಸುತ್ತಿದ್ದು, ಇದರಿಂದಾಗಿ ರೈತರು ಬೆಳೆ ಹಾನಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕುರಿತು ನೊಂದ ಆಯುಧ ಪರವಾನಗಿದಾರರ ಅಹವಾಲು ಆಲಿಸಿ ತನಿಖೆ ನಡೆಸಿ ತೀರ್ಮಾನಿಸಲು ನಿರ್ದೇಶನ ಮಾಡಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಸೆ.05ರಂದು ಪುರಭವನದಲ್ಲಿ ನಡೆಯಲಿರುವ ಪ್ರಜಾಸೇವೆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಂದೂಕು ಪರವಾನಗಿದಾರರು ಒಟ್ಟಾಗಿ ಅಹವಾಲು ಸಲ್ಲಿಕೆ ಮಾಡಲಿದ್ದೇವೆ” ಎಂದು ಹೇಳಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading