ಬೆಳ್ಳಾರೆ: ಬೂಡಿನಲ್ಲಿ ಪ. ಜಾತಿ ಮತ್ತು ಪ. ಪಂಗಡದವರ ಕುಂದು ಕೊರತೆ ಸಭೆ

ಬೆಳ್ಳಾರೆ ಗ್ರಾಮದ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ವಠಾರದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆ ವತಿಯಿಂದ ಎಸ್. ಸಿ, ಎಸ್. ಟಿ. ಕುಂದು ಕೊರತೆ ಸಭೆ ಜು. 4ರಂದು ನಡೆಯಿತು.
ಬೆಳ್ಳಾರೆ ಠಾಣೆಯ ಎ.ಎಸ್.ಐ. ಕುಂಞ ಅವರು ಅಹವಾಲು ಆಲಿಸಿದರು. ಅವರು ಅಮಲು ಪದಾರ್ಥ ಸೇವನೆ ವಿರುದ್ಧ ಕೇಸಿನ ಟೆನ್-51,ಅಮಲು ಪದಾರ್ಥ ಸೇವಿಸುವವರನ್ನು ಸರಿದಾರಿಗೆ ತರುವ ಟೆನ್-52, ಕಾಣೆಯಾದವರನ್ನು ಪತ್ತೆ ಹಚ್ಚುವ ಟೆನ್-53, ಗ್ರಾಮದ ಮನೆಗಳಲ್ಲಿ ಒಂಟಿ ಪುರುಷ, ಮಹಿಳೆಯರ ಬಗ್ಗೆ ಕಾಳಜಿ ವಹಿಸುವ ಟೇನ್-54 ಮುಂತಾದ ಸರ್ಕಾರಿ ಆದೇಶಗಳ ಸಂಖ್ಯಾ ಕ್ರಮಗಳನ್ನು ತಿಳಿಸಿದರು. ಸಂಬಂಧಪಟ್ಟವರು ಪ್ರಶ್ನೆಗಳನ್ನು ಕೇಳಿದರು.
ಬೆಳ್ಳಾರೆ ಬೀಟ್ ಪೊಲೀಸ್ ಮನು ಗೌಡ ಹಾಗೂ ರಮೇಶ್ ಸೇರಿದವರ ಸಮಸ್ಯೆಗಳಿಗೆ ಸ್ಪಂದನೆಯ ಪ್ರಯತ್ನ ಮಾಡಿದರು. ದಿನದ 24 ಘಂಟೆಯೂ ತೊಂದರೆಗಳಾದರೆ ಸಹಾಯವಾಣಿ ಸಂಖ್ಯೆಯಾದ 112 ಸಂಪರ್ಕಿಸುವಂತೆ ಅವರು ತಿಳಿ ಹೇಳಿದರು. ಕಾನೂನಿನ ಮುಖಾಂತರ ಪರಿಹರಿಸಬಹುದಾದ ಯಾವುದೇ ಸಮಸ್ಯೆಗಳ ಬಗ್ಗೆ ದೂರು ಕೊಡಬಹುದು ಎಂದು ತಿಳಿಸಿದರು.
ಸಭಾ ಸಮಯದಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಉಸ್ತುವಾರಿ ಸಮಿತಿ ಅಧ್ಯಕ್ಷ ಪ್ರಸಾದ್ ಬೂಡು, ಪದಾಧಿಕಾರಿ ವಿಶ್ವನಾಥ್ ಬೂಡು, ದಿನೇಶ್ ಬೂಡು, ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಅರ್ಚಕ ಚೋಮ ಪಾಠಾಜೆ, ಈ ಗರಡಿಯ ಆಡಳಿತ ಸಮಿತಿ ಖಜಾಂಜಿ ಸಂಜೀವ ಕಲಾಯಿ, ಸಾನಿಧ್ಯ ಸಹವರ್ತಿ ವಿಜಯ ಪಾಠಾಜೆ, ಮಹೇಶ್ ಪುಡ್ಕಜೆ ಉಪಸ್ಥಿತರಿದ್ದರು.
ಸಾನಿಧ್ಯ ಸಹವರ್ತಿ ಮಹೇಶ್ ಪುಡ್ಕಜೆ ವಂದಿಸಿದರು.

. . . . . . . . .

ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading