ಸುಳ್ಯ : ಅರಂಬೂರು ಸಿ.ಎಸ್.ಸಿ ಕೇಂದ್ರದಲ್ಲಿ ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ವಲಯದ ಅರಂಬೂರು ಸಿ.ಎಸ್.ಸಿ ಕೇಂದ್ರದಲ್ಲಿ ಡಿಜಿ ಪೇ ಕಾರ್ಯಕ್ರಮಕ್ಕೆ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷರಾದ ಪರಮೇಶ್ವರ ನೆಡ್ಚಿಲ್ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು, ಹಾಗೂ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಿ.ಎಸ್.ಸಿ ನೋಡೆಲ್ ಅಧಿಕಾರಿಯಾದ ಹೇಮಂತ್ ಸರ್ ರವರು ಡಿಜಿ ಪೇ ಯ ಬಗ್ಗೆ ಮಾಹಿತಿ ನೀಡಿದರು.

. . . . . . . . .

ಅರಂಬೂರು ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ ನೆಡ್ಚಿಲು ಹಾಗೂ ಅರಂಬೂರು ನೂತನ ಒಕ್ಕೂಟ ಅಧ್ಯಕ್ಷರಾದ ಅಶೋಕ್ ಪೀಚೆ, ಪರಿವಾರಕಾನ ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಹಲ್ದಡ್ಕ, ನೂತನ ಒಕ್ಕೂಟ ಅಧ್ಯಕ್ಷರಾದ ರತ್ನಾಕರ ರೈ ಅರಂಬೂರು, ವಲಯ ಮೇಲ್ವಿಚಾರಕರಾದ ದಿನೇಶ್, ಸಿ.ಎಸ್.ಸಿ ನೋಡಲ್ ಅಧಿಕಾರಿಯದ ಹೇಮಂತ್, ಸಿ.ಎಸ್.ಸಿ ಸೇವಾದಾರರಾದ ದೀಕ್ಷಾ, ಕಚೇರಿ ಸಹಾಯಕರಾದ ಶೀಮತಿ ವಿಜಯಶ್ರೀ, ಪರಿವಾರಕಾನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ, ಅರಂಬೂರು ಕಾರ್ಯಕ್ಷೇತ್ರದ ಸೇವಪ್ರತಿನಿಧಿ ವಿಜಯಶ್ರೀ, ಸುವಿಧಾ ಸಹಾಯಕರಾದ ಭವಾನಿ, ಶೌರ್ಯ ವಿಪತ್ತು ಘಟಕದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರತೀಶನ್, ಸಂಘದ ಸದಸ್ಯರು ಉಪಸ್ಥಿತರಿದ್ದರು.  ಒಕ್ಕೂಟದ ಅಧ್ಯಕ್ಷರು ಎಟಿಎಂ ಕಾರ್ಡ್ ಮೂಲಕ 1 ಸಾವಿರ ರೂಪಾಯಿ ವಿತ್ ಡ್ರಾ ಮಾಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುರೇಶ್ ಸ್ವಾಗತಿಸಿ ವಲಯ ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿ ದೀಕ್ಷಾ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading