ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಂಬೈ ಮಹಿಳಾ ಸಂಘದಿಂದ ಪುಸ್ತಕ ಕೊಡುಗೆ

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಸುಮಾರು 200 ವಿದ್ಯಾರ್ಥಿಗಳಿಗೆ ಪಂಜದ ಶ್ರೀ ದುರ್ಗಾ ಸೇವಾ ಸಂಘ ಕೇನ್ಯಾ ಇವರ ಆಶ್ರಯದಲ್ಲಿ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಮುಂಬೈ ಇವರ ವತಿಯಿಂದ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.

. . . . . . . . .

ಸಮಾರಂಭದ ಉದ್ಘಾಟನೆಯನ್ನು ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಮುಂಬೈ ಇದರ ಗೌರವಾಧ್ಯಕ್ಷೆ ಶ್ರೀಮತಿ ಚಿತ್ರ ರವಿರಾಜ ಶೆಟ್ಟಿ ನೆರವೇರಿಸಿದರು. ಅವರು ಮಾತನಾಡುತ್ತಾ “ಕನ್ನಡ ಶಾಲೆಗಳನ್ನು ಉಳಿಸಬೇಕು ಹಾಗೂ ಬೆಳೆಸಬೇಕಾಗಿದೆ. ಅದರಲ್ಲೂ ಇಂದು ಗ್ರಾಮಾಂತರದಲ್ಲಿರುವ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಮುಚ್ಚುವ ಸ್ಥಿತಿಯಲ್ಲಿರುವುದು ಶೋಚನೀಯ. ಇಂದು ರಾಜ್ಯ ಸರಕಾರ ಸರ್ಕಾರಿ ಶಾಲೆಗಳಿಗೆ ಬೇಕಾದಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಆದ್ದರಿಂದ ನಾವೆಲ್ಲರೂ ಸೇರಿ ಕನ್ನಡ ಶಾಲೆಯನ್ನ ಉಳಿಸೋಣ” ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಂಜ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಲಿಗೋದರ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ದುರ್ಗಾ ಸೇವಾ ಸಂಘ ಕೇಂದ್ರ ಅಧ್ಯಕ್ಷ ಪದ್ಮನಾಭ ರೈ, ಕಾರ್ಯದರ್ಶಿ ದೇವಿ ಪ್ರಸಾದ್ ರೈ, ನಿರ್ದೇಶಕರುಗಳಾದ ಬಾಲಕೃಷ್ಣ ರೈ ಬಿರ್ಕಿ, ಪ್ರಕಾಶ್ ಆಚಾರ್ಯ ಕೇನ್ಯಾ, ರಾಧಾಕೃಷ್ಣ ನಾದೂರು ಹಾಗೂ ಮುಂಬೈ ಓಂ ಶಕ್ತಿ ಮಹಿಳಾ ಸಂಸ್ಥೆ, ಕಲ್ಯಾಣ್ ಇದರ ಸದಸ್ಯರುಗಳಾದ ಶ್ರೀಮತಿ ಜಯಶ್ರೀ ಕೆ ಶೆಟ್ಟಿ, ಉಷಾ ಆನಂದ ಶೆಟ್ಟಿ, ಗ್ರೀಷ್ಮಾ.ಪಿ ಶೆಟ್ಟಿ, ಸವಿತಾ ಎಸ್ ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸೌಮ್ಯಶ್ರೀ, ಸದಸ್ಯರುಗಳಾದ ದಾಮೋದರ ನೆರಳ, ವೇದಾವತಿ, ಯಕ್ಷಿತ, ಧನ್ಯಶ್ರೀ ಉಪಸ್ಥಿತರಿದ್ದರು.

. . . . . . .

ಪಂಜ ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ.ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ ಮುಂಬೈ ಇದರ ಗೌರವಾಧ್ಯಕ್ಷೆ ಶ್ರೀಮತಿ ಚಿತ್ರ ರವಿರಾಜ್ ಶೆಟ್ಟಿ ಅವರನ್ನ ಶಾಲೆ ಹಾಗೂ ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ಮಂಜುಳಾ ಅಭಿನಂದನ ಪತ್ರ ವಾಚಿಸಿದರು. ಶಾಲಾ ಮೋಹನ್ ಪ್ರಸಾದ್, ಚೇತನ, ವಿನುತ, ಸುಮಿತ್ರ, ದಿವ್ಯಶ್ರೀ, ಸಹಾಯಕಿಯರಾದ ನಮಿತಾ, ಲಿಖಿತ, ಮಂಜುಳ ಹಾಜರಿದ್ದರು. ಶಿಕ್ಷಕ ಶಿವಾನಂದ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿ ನೇತ್ರ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading