ರಾಷ್ಟ್ರೀಯ ವೈದ್ಯರ ದಿನಾಚರಣೆಯ ವಿಶೇಷ – “ಜೀವ ಉಳಿಸುವ ದೇವಮಾನವರು…” – ಬರಹ : ಉಲ್ಲಾಸ್ ಕಜ್ಜೋಡಿ

“ಶರೀರೇ ಜರ್ಝರೀಭೂತೇ ವ್ಯಾಧಿಗ್ರಸ್ಥೇ ಕಳೇಬರೇ ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ” ಅಂದರೆ ದೇಹವು ಜರ್ಜರಿತವಾದಾಗ, ರೋಗಗಳಿಂದ ಆವೃತ್ತವಾದಾಗ ದೇಹಕ್ಕೆ ಗಂಗಾ ನದಿಯ ನೀರೇ ಔಷಧ ಹಾಗೂ ವೈದ್ಯರೇ ಸಾಕ್ಷಾತ್ ಹರಿ ಅಥವಾ ನಾರಾಯಣ ದೇವರು ಎಂಬಂತೆ ಸ್ವತಃ ಭಗವಂತ ಅಥವಾ ಆ ದೇವರು ಮಾಡುವಂತಹ ಜೀವ ಉಳಿಸುವ ಕಾಯಕವನ್ನು ದಿನದ 24 ಗಂಟೆಯೂ ಕೂಡ ನಿರಂತರವಾಗಿ ಮಾಡುವ ವೈದ್ಯರು ನಿಜವಾಗಿಯೂ ದೇವರಿಗೆ ಸಮಾನರಾದವರು ಎಂಬುವುದನ್ನು ಈ ಶ್ಲೋಕ ನಮಗೆ ತಿಳಿಸುತ್ತದೆ. ನಮಗೆ ಯಾವುದೇ ರೀತಿಯ ಕಾಯಿಲೆಗಳು ಬಂದರೂ, ಆರೋಗ್ಯಕ್ಕೆ ಸಂಬಂಧಿಸಿದಂತೆ ಏನೇ ಹೆಚ್ಚು-ಕಡಿಮೆಯಾದರೂ ನಾವು ಮೊದಲು ತೆರಳುವುದು ವೈದ್ಯರ ಬಳಿ, ಏಕೆಂದರೆ ಅವರಿಗೆ ಮಾತ್ರ ನಮ್ಮನ್ನು ಗುಣಪಡಿಸುವ ಶಕ್ತಿ ಇರುವುದು ಎಂಬುವುದು ನಮಗೆ ತಿಳಿದಿದೆ. ಕೇವಲ ಮನುಷ್ಯರಿಗಷ್ಟೇ ಅಲ್ಲ ಪಶು-ಪಕ್ಷಿಗಳಿಗೂ ಅವುಗಳಿಗೆ ಬರುವ ಕಾಯಿಲೆಗಳನ್ನು ಅಥವಾ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಪಶುವೈದ್ಯರುಗಳಿದ್ದಾರೆ, ಅವರೂ ಕೂಡ ಮೂಕ ಪ್ರಾಣಿಗಳ ಜೀವ ಉಳಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗೆ ಪ್ರತಿಯೊಬ್ಬ ವೈದ್ಯರೂ ಕೂಡ ಬೇರೆ ಬೇರೆ ರೀತಿಯ ಕಾಯಿಲೆಗಳನ್ನು ಅಥವಾ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದಾರೆ. ಅವರು ಅದನ್ನು ಅಧ್ಯಯನ ಅಥವಾ ಕಲಿಕೆಯ ಮೂಲಕ ಕಲಿತು ವೈದ್ಯರಾದದ್ದು ನಿಜ, ಆದರೆ ಜೀವ ಉಳಿಸುವ ಆ ಪುಣ್ಯ ಕಾರ್ಯಕ್ಕೆ ಅವರ ನಿಯೋಜನೆಯನ್ನು ದೇವರು ಅವರ ಹಣೆಯಲ್ಲಿ ಮೊದಲೇ ಬರೆದಿರುತ್ತಾರೆ ಎಂದೆನಿಸುತ್ತದೆ, ಏಕೆಂದರೆ ವೈದ್ಯರು ಮಾಡುವ ಕೆಲಸವನ್ನು ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ, ಅದು ಅವರಿಂದ ಮಾತ್ರ ಸಾಧ್ಯ. ದೇವರು ಮೆಚ್ಚುವ ಇಂತಹ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಜಗತ್ತಿನ ಪ್ರತಿಯೊಬ್ಬ ವೈದ್ಯರುಗಳಿಗೂ ಕೂಡ ಹೃದಯಾಂತರಾಳದಿಂದ ಕೋಟಿ ಕೋಟಿ ಧನ್ಯವಾದಗಳನ್ನು ಸಲ್ಲಿಸುತ್ತಾ ಎಲ್ಲಾ ವೈದ್ಯರುಗಳಿಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ನನ್ನ ಈ ಬರಹಕ್ಕೆ ಪೂರ್ಣವಿರಾಮವನ್ನಿಡುತ್ತಿದ್ದೇನೆ… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading