Ad Widget

ನೆಟ್ಟಣ ಬೈಲು: ಆನೆ ದಾಳಿಯಿಂದ ಕೃಷಿ ನಾಶ ; ಕೃಷಿಕರಿಗೆ ಸಂಕಷ್ಟ

ಸುಬ್ರಹ್ಮಣ್ಯ : ನೆಟ್ಟಣ ಬೈಲು, ಕೊಂಬಾರು, ಸಿರಿಬಾಗಿಲು ಮೊದಲಾದ ಕಡೆ ಮಂಗಳವಾರ ರಾತ್ರಿ ಕೃಷಿಕರ ತೋಟಗಳಿಗೆ ಆನೆ ದಾಳಿ ಮಾಡಿದೆ. ಇದರಿಂದಾಗಿ ಕೃಷಿಕರ ತೋಟವು ಹಾನಿಗೊಳಗಾಗಿದೆ. ನಿರಂತರ ಆನೆ ದಾಳಿಯಿಂದ ಕೃಷಿಕರು ಹೈರಾಣಾಗಿದ್ದು, ಸಂಕಷ್ಟ ಎದುರಿಸುತ್ತಿದ್ದಾರೆ. ಮಂಗಳವಾರ ರಾತ್ರಿ ನೆಟ್ಟಣ ಬೈಲು, ಕೊಂಬಾರು, ಸಿರಿಬಾಗಿಲು ಪ್ರದೇಶದ ಅನೇಕ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಯು ತೋಟದಲ್ಲಿದ್ದ ಫಲಭರಿತ ಅಡಿಕೆ ಮರ, ತೆಂಗಿನಮರಗಳನ್ನು ಉರುಳಿಸಿದೆ. ಅಲ್ಲದೆ ಆನೆಯು ತೋಟದಲ್ಲಿದ್ದ ಬಾಳೆಗಿಡಗಳನ್ನು ತುಳಿದುನಾಶಪಡಿಸಿದೆ. ನೀರಾವರಿಗಾಗಿ ಅಳವಡಿಸಿದ್ದ ಸ್ಪಿಂಕ್ಲರ್ ಮತ್ತು ಪೈಪ್ ಲೈನ್ ಗಳು ಆನೆಯ ತುಳಿತದಿಂದ ದ್ವಂಸವಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಶಾಶ್ವತ ಪರಿಹಾರ ಅಗತ್ಯ : ನಿರಂತರವಾಗಿ ಆನೆ ದಾಳಿ ಮಾಡುವ ಕಾರಣ ಅದಕ್ಕೆ ಶಾಶ್ವತ ಪರಿಹಾರ ಒದಗಿಸಿ ಕೃಷಿಕರನ್ನು ಸಂಕಷ್ಟದಿಂದ ಪಾರುಮಾಡಬೇಕಾಗಿ ರೈತರು ವಿನಂತಿಸಿದ್ದಾರೆ. ಆನೆ ಕಂದಕ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿ ಕೃಷಿಕರನ್ನು ಸಂಕಷ್ಟದಿಂದ ಪಾರು ಮಾಡುವುದು ಅತ್ಯಗತ್ಯವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading