Ad Widget

ಕಿರು ಲೇಖನ : ಅನುಪಸ್ಥಿತಿ

ಬದುಕಿನ ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಜೊತೆಯಲ್ಲಿ ಇರುವ ನೂರು ಜನರ ಉಪಸ್ಥಿತಿಗಿಂತ ನಮ್ಮ ಜೊತೆಯಲ್ಲಿ ಇಲ್ಲದೇ ಇರುವ ಒಬ್ಬ ವ್ಯಕ್ತಿಯ ಅನುಪಸ್ಥಿತಿ ನಮ್ಮನ್ನು ಹೆಚ್ಚು ಕಾಡುತ್ತದೆ. ಅದೆಷ್ಟು ಕಾಡುತ್ತದೆ ಎಂದರೆ ನಮ್ಮ ಜೊತೆಗಿರುವ ಆ ನೂರು ಜನರ ಮಧ್ಯೆ ನಾವೂ ಕೂಡ ಖುಷಿಯಿಂದ ಬೆರೆಯಬೇಕು ಎಂದರೆ ಅದೂ ಕೂಡ ನಮ್ಮಿಂದ ಸಾಧ್ಯವಾಗುವುದಿಲ್ಲ. ಏಕೆಂದರೆ ನಾವು ದೈಹಿಕವಾಗಿ ಇಲ್ಲಿ ಎಲ್ಲರೊಂದಿಗೆ ಇದ್ದರೂ ಕೂಡ ನಮ್ಮ ಮನಸ್ಸು ಮಾತ್ರ ಸದಾ ಆ ಅನುಪಸ್ಥಿತ ವ್ಯಕ್ತಿಯ ಬಗ್ಗೆಯೇ ಯೋಚಿಸುತ್ತಿರುತ್ತದೆ. ಆ ಅನುಪಸ್ಥಿತ ವ್ಯಕ್ತಿ ಈ ಭೂಮಿಯ ಮೇಲೆ ಇರಬಹುದು ಅಥವಾ ಇಲ್ಲದೇ ಇರಬಹುದು, ಆದರೆ ಅವರು ಈ ಕ್ಷಣ ನಮ್ಮೊಂದಿಗಿಲ್ಲ ಎನ್ನುವ ಭಾವನೆ ಮಾತ್ರ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಏಕೆಂದರೆ ನಮ್ಮ ಜೀವನದಲ್ಲಿ ಕೆಲವೊಂದು ವ್ಯಕ್ತಿಗಳು ಅದೆಷ್ಟು ವಿಶೇಷವಾಗಿರುತ್ತಾರೆ ಎಂದರೆ ದೈಹಿಕವಾಗಿ ಅವರು ನಮ್ಮಿಂದ ಈ ಕ್ಷಣ ದೂರವಿದ್ದರೂ ಅಥವಾ ಶಾಶ್ವತವಾಗಿ ದೂರವಾಗಿದ್ದರೂ ಕೂಡ ಅವರು ನಮ್ಮ ಮನಸ್ಸಿಗೆ ಮಾತ್ರ ಸದಾ ಹತ್ತಿರವಾಗಿರುತ್ತಾರೆ, ಹಾಗೂ ಅವರು ನಮ್ಮೊಂದಿಗಿಲ್ಲ ಎನ್ನುವ ಸತ್ಯವನ್ನು ನಮ್ಮ ಮನಸ್ಸು ಅರಿತಿದ್ದರೂ ಕೂಡ ಸದಾ ಅವರ ಉಪಸ್ಥಿತಿಯನ್ನೇ ಬಯಸುತ್ತದೆ, ಅವರ ಪ್ರೀತಿಗಾಗಿ ನಮ್ಮ ಮನಸ್ಸು ಸದಾ ಹಾತೊರೆಯುತ್ತಲೇ ಇರುತ್ತದೆ… ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading