Ad Widget

ಕವನ : ಆಹಾರವ ಅರಸುತ್ತಾ – ಉಸಿರಾಟವ ಹುಡುಕುತ್ತಾ…

ಆಹಾರವ ಅರಸುತ್ತಾ ಕಾಡುಪ್ರಾಣಿಗಳು ಇಂದು ನುಗ್ಗುತ್ತಿವೆ ನಾಡಿನ ಕಡೆಗೆ, ಅವುಗಳನ್ನು ಬೆದರಿಸಿ ಅಟ್ಟುವೆವು ನಾವು ಮರಳಿ ಕಾಡಿನೆಡೆಗೆ, ನೆನಪಿರಲಿ ಅವುಗಳು ಆಹಾರವ ಅರಸಿ ಬರುತ್ತಿರುವುದು ಅವುಗಳ ಹೊಟ್ಟೆಪಾಡಿಗೆ…
ಕಾಡಿನಲ್ಲೇ ಸಿಗುತ್ತಿತ್ತು ಈ ಹಿಂದೆ ಅವುಗಳಿಗೆ ಬೇಕಾದಷ್ಟು ಆಹಾರ, ಆದರೆ ಅಲ್ಲಿಗೂ ತಲುಪಿತ್ತು ಮನುಷ್ಯರು ಎನಿಸಿಕೊಂಡ ನಮ್ಮ ಸ್ವಾರ್ಥಸಾಧನೆಯ ಅಧಿಕಾರ, ಕಾಡುಗಳ ನಾಶಗೈಯುತ್ತಾ ಸಾಗಿದೆವು ನಾವು ತೋರದೇ ಯಾವ ಪ್ರಾಣಿ-ಪಕ್ಷಿಗಳ ಮೇಲೂ ಮಮಕಾರ…
ಮರ-ಗಿಡಗಳ ಮೆಟ್ಟುತ್ತಾ-ಕಟ್ಟಡಗಳ ಕಟ್ಟುತ್ತಾ ಸಾಗಿದೆವು ನಾವು ಪೇಟೆ-ಪಟ್ಟಣಗಳ ನಿರ್ಮಿಸುತ್ತಾ, ಹೆಚ್ಚು ಹೆಚ್ಚು ಹಣ ಸಂಪಾದನೆಯ ದಾರಿಯನ್ನು ಹುಡುಕುತ್ತಾ, ನಮ್ಮೊಳಗಿನ ಸ್ವಾರ್ಥಕ್ಕೆ ಕಾಡು-ಮೇಡುಗಳ ನಾಶಪಡಿಸುತ್ತಾ, ಮುಗ್ಧ ಪ್ರಾಣಿ-ಪಕ್ಷಿಗಳ ಬದುಕನ್ನೂ ಮೃತ್ಯುಕೂಪಕ್ಕೆ ತಳ್ಳುತ್ತಾ…
ಪ್ರತಿಯೊಂದು ತಪ್ಪುಗಳಿಗೂ ಶಿಕ್ಷೆ ನೀಡುವುದು ಕರ್ಮದ ತತ್ವ, ಮನುಷ್ಯರ ಪಾಪದ ಕೊಡವದು ಬರುತ್ತಿದೆ ತುಂಬುತ್ತಾ, ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ನಾವು ಉಸಿರಾಡುವ ಗಾಳಿಗೂ ಪಾವತಿಸಬೇಕಾಗಬಹುದು ಮೊತ್ತ… ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading