Ad Widget

ಕವನ : ಬದುಕೆಂಬ ಶಿಕ್ಷಕ…

✍️ಉಲ್ಲಾಸ್ ಕಜ್ಜೋಡಿ

ನಗುವಾಗಲೇ ಅಳುವನ್ನು ನೀಡುವುದು ಬದುಕು, ಅಳುವಿನಿಂದಲೇ ನಗುವಿನ ಬೆಲೆಯನ್ನು ತಿಳಿಸುವುದು ಬದುಕು…
ಖುಷಿಯ ಕ್ಷಣದಲ್ಲೇ ದುಃಖವನ್ನು ನೀಡುವುದು ಬದುಕು, ದುಃಖದಿಂದಲೇ ಸಂತೋಷದ ಬೆಲೆಯನ್ನು ಕಲಿಸುವುದು ಬದುಕು…
ಜೊತೆಗಿದ್ದಾಗಲೇ ನಮ್ಮವರನ್ನು ನಮ್ಮಿಂದ ದೂರ ಮಾಡುವುದು ಬದುಕು, ಮತ್ತೆ ಮರಳಿ ಅವರಿಗೆ ಪ್ರೀತಿಯನ್ನು ನೀಡಬೇಕೆಂದರೂ-ಅವರಿಂದ ಪ್ರೀತಿಯನ್ನು ಪಡೆಯಬೇಕೆಂದರೂ ಅವರು ಮತ್ತೆ ಎಂದೂ ನಮ್ಮ ಬಳಿ ಹಿಂತಿರುಗಿ ಬಾರದಂತೆ ಮಾಡುವುದು ಬದುಕು, ಇಲ್ಲಿ ಪ್ರೀತಿಯ ಮೌಲ್ಯವನ್ನು ನಮಗೆ ಕಲಿಸುವುದು ಬದುಕು…
ನಮ್ಮವರು-ನಮ್ಮನ್ನು ಅತೀಹೆಚ್ಚು ಪ್ರೀತಿಸುವವರು ನಮ್ಮೊಂದಿಗಿದ್ದಾಗ ಅವರೊಂದಿಗೆ ಕಳೆಯಲು ಕಿಂಚಿತ್ತು ಸಮಯವೂ ಇರುವುದಿಲ್ಲ ನಮ್ಮಲ್ಲಿ, ಪ್ರತೀದಿನವೂ ನಮ್ಮ ಬದುಕಿನ ಜಂಜಾಟದಲ್ಲಿ ಕೊಳೆಯುತ್ತಾ ಬಿದ್ದಿರುವೆವು ನಾವಲ್ಲಿ, ಕೊನೆಗೊಂದು ದಿನ ಅವರು ನಮ್ಮಿಂದ ದೂರವಾದಾಗ ಕಳೆದ ದಿನಗಳ ನೆನೆದು ಕ್ಷಣ-ಕ್ಷಣವೂ ನೋವು ಅನುಭವಿಸುವೆವು ನಾವಿಲ್ಲಿ, ಇಲ್ಲಿ ಸಮಯದ ಮಹತ್ವವನ್ನು-ಸಂಬಂಧಗಳಿಗೆ ನಾವು ನೀಡಬೇಕಾದ ಬೆಲೆಯನ್ನು ನಮಗೆ ಕಲಿಸುವುದು ಬದುಕು…
“ಜೊತೆಗಿರುವಾಗಲೇ ನಮ್ಮವರಿಗೆ ನಾವು ಪ್ರೀತಿಯನ್ನು ನೀಡೋಣ, ಅವರ ಪ್ರೀತಿಯನ್ನು ನಾವು ಪ್ರೀತಿಯಿಂದ ಸ್ವೀಕರಿಸೋಣ.. ಈ ಕ್ಷಣದ ಬದುಕಿಗೆ ಬೆಲೆಯನ್ನು ನೀಡೋಣ.. ಪ್ರತಿಕ್ಷಣವೂ ಬದುಕಿನಲ್ಲಿ ಖುಷಿಯನ್ನು ಹಂಚೋಣ, ಕೊನೆಗೊಮ್ಮೆ ಬದುಕಿನ ಕೊನೆಗಾಲದಲ್ಲಿ ನಮ್ಮ ಬದುಕಿನ ದಾರಿಯನ್ನು ನಾವು ಹಿಂತಿರುಗಿ ನೋಡಿದಾಗ ನಮ್ಮ ಮನಸ್ಸಿನಲ್ಲಿ ಸಾರ್ಥಕತೆಯ ಭಾವ ಮೂಡುವಂತೆ ಬದುಕೋಣ, ಕಣ್ಣಲ್ಲಿ ಆನಂದಭಾಷ್ಪ ಸುರಿಯುವಂತೆ ಬದುಕೋಣ.. ಇರುವುದೊಂದೇ ಬದುಕು, ಇರುವಷ್ಟು ದಿವಸ ನಮ್ಮವರೊಂದಿಗೆ ನಗು-ನಗುತ್ತಾ ಬದುಕೋಣ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading