Ad Widget

ಸುಳ್ಯ : ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಪ್ರಭು ಗ್ರೌಂಡ್ಸ್ ನಲ್ಲಿ ಪ್ರಥಮ ವರ್ಷದ ಆಯುಧ ಪೂಜಾ ಕಾರ್ಯಕ್ರಮ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದಿಂದ ಪ್ರಭು ಗ್ರೌಂಡ್ಸ್ ನಲ್ಲಿ ಪ್ರಥಮ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಬಹಳ ವಿಜ್ರಂಭಣೆಯಿಂದ ನೆರವೇರಿತು. ವಲಯದ ಎಲ್ಲಾ ಸದಸ್ಯರು ಕುಟುಂಬ ಸಮೇತ ರಾಗಿ ಆಗಮಿಸಿ ಆಯುಧ ಪೂಜೆಯನ್ನು ವಿಶೇಷವಾಗಿ ತಮ್ಮ ವಾಹನಗಳನ್ನು ಸಿಂಗರಿಸಿ ಆಚರಿಸಿದರು. ಪುರೋಹಿತ ಶ್ರೀ ನಟರಾಜ ಶರ್ಮಾ ಅವರು, ದೀರ್ಘಕಾಲದ ಸಂಪ್ರದಾಯ ಹಾಗೂ ದುರ್ಗಾದೇವಿಯ ವಿಜಯೋತ್ಸವವನ್ನು ಸಂಕೇತಿಸುವ ಈ ದಿನವನ್ನು ತಮ್ಮ ವಿಶೇಷ ಪೂಜಾ ಕೈಂಕರ್ಯದ ಮೂಲಕ ನೆರವೇರಿಸಿ ಕೊಟ್ಟರು.
ವಲಯದ ಅಧ್ಯಕ್ಷರಾದ ಶಶಿ ಗೌಡ, ಸ್ಥಾಪಕ ಅಧ್ಯಕ್ಷ  ಗೋಪಾಲಕೃಷ್ಣ, ಕಾರ್ಯದರ್ಶಿ ಸತೀಶ್ ಕೆ ಜಿ, ಉಪಾಧ್ಯಕ್ಷ ಪ್ರಶಾಂತ್ ಶ್ರೇಣಿ, ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಕೋಶಾಧಿಕಾರಿ ಶ್ರೀಮತಿ ವಸಂತಿ ಹರೀಶ್ ರಾವ್, ಛಾಯಾ ಕಾರ್ಯದರ್ಶಿ ಕೀರ್ತನ್, ಸಂಘಟನಾ ಕಾರ್ಯದರ್ಶಿ ಸುಮಂತ್, ಪರಮ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading