Ad Widget

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ – ಪ್ರಶಸ್ತಿ ಸ್ವೀಕರಿಸಿದ ಮೋಹನ್ ಎ., ಶ್ರೀಧರ್ ಗೌಡ ಕೆ. ಹಾಗೂ ಲಲಿತ ಕುಮಾರಿ

ಶ್ರಮ, ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಸಂದ ಗೌರವ, ಶಿಕ್ಷಕರೇ ಶಿಕ್ಷಣದ ಆಸ್ತಿ – ಎಸ್.ಎಲ್. ಭೋಜೇಗೌಡ

. . . . . . . . .

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಬೆಳ್ತಂಗಡಿ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೆಳ್ತಂಗಡಿ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನೋತ್ಸವದ ನೆನಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯು ಸೆ.5ರಂದು ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಜರುಗಿತು.

. . . . . . .

2025-26ನೇ ಸಾಲಿನ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವಿಭಾಗಗಳಿಂದ ಆಯ್ಕೆಯಾದ ಜಿಲ್ಲೆಯ ಎಲ್ಲಾ ತಾಲೂಕಿನ ಆಯ್ದ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ನಡೆಯಿತು.
ಸುಳ್ಯ ತಾಲೂಕಿನಿಂದ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಎಣ್ಮೂರು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಮೋಹನ್, ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ್ ಗೌಡ ಕೆರೆಮೂಲೆ, ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಶಾಲೆಯ ಮುಖ್ಯ ಶಿಕ್ಷಕಿ ಲಲಿತ ಕುಮಾರಿ ಅವರು ಪ್ರಶಸ್ತಿ ಸ್ವೀಕರಿಸಿದರು.

ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇ ಗೌಡ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಮಾಜವನ್ನು ತಿದ್ದುವ ಮೂಲಕ ಕೊಡುಗೆಯನ್ನು ನೀಡುವವರು ಶಿಕ್ಷಕರು. ಸರಕಾರಿ ಶಾಲಾ ಶಿಕ್ಷಕರು ಎಷ್ಟೇ ನೋವುಗಳು ಇದ್ದರು, ಉತ್ತಮ ಶಿಕ್ಷಣ ನೀಡುವಲ್ಲಿ ವಿಫಲರಾಗಿಲ್ಲ. “ಉತ್ತಮ ಶಿಕ್ಷಕ ಪ್ರಶಸ್ತಿ” ನಿಮ್ಮ ಶ್ರಮ, ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಸಂದ ಗೌರವವಾಗಿದ್ದು ನಮ್ಮ ಶಿಕ್ಷಕರೇ ಶಿಕ್ಷಣದ ಆಸ್ತಿ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್‌, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬೆಳ್ತಂಗಡಿ ತಾಲೂಕು ಪಂ. ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಭುವನೇಶ್, ಬಸವ ಲಿಂಗಪ್ಪ, ರಾಜೇಂದ್ರ ಕೃಷ್ಣ ಸುಜಯ, ರಾಜೇಶ್ವರಿ, ಜಯಾನಂದ ಸುವರ್ಣ, ಜ್ಞಾನೇಶ್, ಮನೋರಮ, ಜಯರಾಜ್ ಜೈನ್, ಸದಾನಂದ ಪೂಂಜ, ಮಹಮ್ಮದ್ ರಿಯಾಜ್, ಗುರುಪ್ರಸಾದ್‌ ಶೆಟ್ಟಿ, ಲಕ್ಷ್ಮೀ ನಾರಾಯಣ, ವಿಮಲ್ ನೆಲ್ಯಾಡಿ, ಪಿಲ್ಲಿ ಪಾಯಸ್, ನಿಂಗರಾಜು, ಬಾಲಕೃಷ್ಣ, ದಿಲೀಪ್ ಕುಮಾರ್, ಮಾರ್ಕ್, ಸುಜಯ, ರವಿರಾಜ್, ರಾಜಶೇಖರ್ ಅಜಿ, ಕರುಣಾಕರ ಸೋಮಶೇಖ‌ರ್ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷದಲ್ಲಿ ವೃತ್ತಿಯಲ್ಲಿದ್ದುಕೊಂಡು ಅಗಲಿದ ಜಿಲ್ಲೆಯ ಶಿಕ್ಷಕ ಬಂಧುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ದ.ಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಸ್. ಶಶಿಧರ್ ಪ್ರಸ್ತಾವಿಸಿ ಸ್ವಾಗತಿಸಿದರು. ಅನುಸೂಯ ಪಾಟಕ್ ಮತ್ತು ಬಳಗದವರು ನಾಡಗೀತೆಯನ್ನು ಹಾಡಿದರು. ದ.ಕ ಜಿಲ್ಲಾ ಶಿಕ್ಷಕರ ದಿನಾಚರಣೆ ಸಮಿತಿ ನೋಡೆಲ್ ಅಧಿಕಾರಿ ಸಂದೇಶ ವಾಚನ ನೆರವೇರಿಸಿದರು. ಅಜಿತ್ ಕುಮಾರ್ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading