Ad Widget

ಕವನ : ಸೃಷ್ಟಿಗೊಂದು ಕಾರಣ…

ಸುರಿದ ಮಳೆ ಹನಿಗೂ ತಿಳಿಯಲಾಗಲಿಲ್ಲ ತಾನೇಕೆ ಆಗಸವ ಬಿಟ್ಟು ಭೂಮಿಗೆ ಬಂದೆ ಎಂದು, ಮಣ್ಣಿಗೆ ಸೇರಿದೆ ಎಂದು, ಅರಿಯುವಷ್ಟರಲ್ಲಿ ಆರಿ ಹೋಯಿತು ಇಂಗಿ ಮಣ್ಣ ಸೇರಿತು ಇಂದು, ಆದರೂ ಅದು ಮಣ್ಣಲ್ಲಿ ಸೇರಲು ಕಾರಣವೂ ಇತ್ತು ಒಂದು, ಆ ಕಾರಣವು ಅದಕ್ಕರಿವಿಲ್ಲದೇ ಪೂರ್ಣವಾಯಿತು ಇಂದು…
ಹಾರಿದ ದೂಳಿನ ಕಣಕ್ಕೂ ಅರಿಯಲಾಗಲಿಲ್ಲ ತಾನೇಕೆ ಹಾರಿದೆ ಎಂದು, ಭುವಿಯ ಬಿಟ್ಟು ಆಗಸದ ಕಡೆಗೆ ಸಾಗಿದೆ ಎಂದು, ಅರಿಯುವಷ್ಟರಲ್ಲಿ ಅದು ಗಾಳಿಯ ಸೇರಿ ಲೀನವಾಯಿತು ಇಂದು, ಆದರೂ ಅದು ಗಾಳಿಯಲ್ಲಿ ಸೇರಲು ಕಾರಣವೂ ಇತ್ತು ಒಂದು, ಆ ಕಾರಣವು ಅದರ ಅರಿವಿಗೆ ಬಾರದೇ ಪೂರ್ಣವಾಯಿತು ಇಂದು…
ಹಾಗೆಯೇ ಈ ಭೂಮಿಯಲ್ಲಿ ಪ್ರತಿ ಮನುಷ್ಯನ ಸೃಷ್ಟಿಗೂ ಕೂಡ ಕಾರಣಗಳು ಇಹುದು ನೂರೊಂದು, ಆತನ ಬದುಕಿನ ಪಯಣದಲ್ಲಿ-ಆತನು ಸಾಗುವ ದಾರಿಯಲ್ಲಿ ಆತನಿಗರಿವಿಲ್ಲದೇ ಆ ಎಲ್ಲಾ ಕಾರಣಗಳು ಪೂರ್ಣಗೊಳ್ಳುವವು ಒಂದೊಂದು…
ಕೊನೆಗೊಮ್ಮೆ ಆತನಿಗರಿವಿಲ್ಲದಂತೆಯೇ ಆತನ ದೇಹ ಮಣ್ಣಿಗೆ ಸೇರುವ ಕ್ಷಣವು-ಆತನಾತ್ಮ ಗಾಳಿಯೊಂದಿಗೆ ಲೀನವಾಗುವ ದಿನವು ಬರುವುದು ಮುಂದೊಂದು, ಭೂಮಿಯ ಮೇಲಿನ ಪ್ರತಿ ಜೀವಿಯ ಬದುಕೂ ನಡೆಯುವುದು ಹೀಗೆಯೇ ಎಂದೆಂದೂ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading