Ad Widget

ಸುಬ್ರಹ್ಮಣ್ಯ : ಮರ ಬಿದ್ದು ಹಾನಿಯಾಗಿದ್ದ ವಿದ್ಯುತ್ ಲೈನ್ ದುರಸ್ತಿ

ಮಳೆಯ ನಡುವೆಯೇ ವಿದ್ಯುತ್ ಲೈನ್ ದುರಸ್ತಿಗೊಳಿಸಿದ ಮೆಸ್ಕಾಂ ಸಿಬ್ಬಂದಿಗಳ ಶ್ರಮಕ್ಕೆ ಶ್ಲಾಘನೆ

ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಭಾನುವಾರ ಸಂಜೆ ಸಂಭವಿಸಿದ ಭಾರೀ ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ತೊಂದರೆಗೆ ಒಳಗಾದ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿಗಳು ಭಾರೀ ಮಳೆಯ ನಡುವೆಯೇ ಪರಿಶ್ರಮದೊಂದಿಗೆ 11 ಕೆ.ವಿ. ವಿದ್ಯುತ್ ಲೈನ್‌ನ್ನು ದುರಸ್ತಿಪಡಿಸಿ, ಕುಕ್ಕೆ ಸೇರಿದಂತೆ ಹಲವು ಗ್ರಾಮೀಣ ಭಾಗಗಳಿಗೆ ಮತ್ತೆ ವಿದ್ಯುತ್ ಪೂರೈಕೆ ಮಾಡಲು ಯಶಸ್ವಿಯಾಗಿದ್ದಾರೆ.ಆದಿತ್ಯವಾರ ಸಂಜೆ 4 ಗಂಟೆ ಸುಮಾರಿಗೆ...

ಬಾಳಿಲ: ಯಕ್ಷಧ್ರುವ ಯಕ್ಷ-ಶಿಕ್ಷಣ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿಯ ಸಭಾಂಗಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ)ಮಂಗಳೂರು ಇವರ ವತಿಯಿಂದ ನಡೆಸಲ್ಪಡುವ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ನಡೆಯಿತು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಬಾಳಿಲ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎನ್ ವೆಂಕಟರಮಣ ಭಟ್ ದೀಪ ಬೆಳಗಿಸಿ ತರಗತಿಯನ್ನು ಉದ್ಘಾಟಿಸಿ,ಯಕ್ಷ ಶಿಕ್ಷಣದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂದು ಹಾರೈಸಿದರು....
Ad Widget

ಬಾಳಿಲ: ಸಂಸ್ಥಾಪಕರ ಸ್ಮೃತಿ ದಿನಾಚರಣೆ

ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಗಳ ಸ್ಥಾಪಕರಾದ ಸ್ವರ್ಗೀಯ ನೆಟ್ಟಾರು ವೆಂಕಟಸುಬ್ಬರಾವ್ ಇವರ ಸ್ಮೃತಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಶ್ರೀ ನಾರಾಯಣ ಭಟ್ ಕೆ ಇವರು ಭಾಗವಹಿಸಿ ವೆಂಕಟಸುಬ್ಬರಾವ್ ಇವರ ಗುಣಗಾನವನ್ನು ಮಾಡಿದರು, ಅಲ್ಲದೆ ಶ್ರೀಯುತರ ಜೊತೆಗಿನ ಬಾಂಧವ್ಯವನ್ನು ನೆನಪಿಸಿದರು. ಶಾಲೆಯನ್ನು ಸ್ಥಾಪಿಸಿ ಬೆಳೆಸುವಲ್ಲಿ ಅವರು ತೊಡಗಿಕೊಂಡ ರೀತಿಯನ್ನು ತಿಳಿಸಿದರು. ವಿದ್ಯಾಬೋಧಿನೀ...

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ ವನಮಹೋತ್ಸವ ಹಾಗೂ ಸ್ವಚ್ಛತಾ ಅಭಿಯಾನ

ಮಾತೃಭೂಮಿ ಯುವ ವೇದಿಕೆ(ರಿ.) ಮಾಣಿಲ ಸಂಘದ ವತಿಯಿಂದ ವನಮಹೋತ್ಸವ ಕಾರ್ಯಕ್ರಮದ ಜೊತೆಗೆ ಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಯಶಸ್ವಿಯಾಗಿ ನಡೆಯಿತು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳ ವಿತರಣೆ ಮತ್ತು ನೆಡುವಿಕೆ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪರಿಸರದ ಜೀವಿಗಳ ಬದುಕಿನ ಬಗ್ಗೆ ಅದರಲ್ಲೂ ಮುಖ್ಯವಾಗಿ ಉರಗಗಳ(ಹಾವುಗಳ) ಗುಣಲಕ್ಷಣಗಳ ಕುರಿತು ವಿಶೇಷವಾಗಿ...

ಅರಂತೋಡು ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ತೀರ್ಥರಾಮ ಆಡ್ಕಬಳೆ, ಕಾರ್ಯದರ್ಶಿಯಾಗಿ ಸುರೇಶ ಉಳುವಾರು

ದುರ್ಗಾ ಮಾತಾ ಭಜನಾ  ಮಂದಿರ, ಮಲ್ಲಿಕಾರ್ಜುನ ಭಜನಾ ಮಂಡಳಿ ಆರಂತೋಡು ಇದರ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಜು.06 ರಂದು ನಡೆಯಿತು. ಕೆ ಆರ್ ಪದ್ಮನಾಭ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಕೆ ಆರ್ ಪದ್ಮನಾಭ, ಅಧ್ಯಕ್ಷರಾಗಿ ತೀರ್ಥರಾಮ ಆಡ್ಕಬಳೆ, ಕಾರ್ಯದರ್ಶಿಯಾಗಿ ಸುರೇಶ ಉಳುವಾರು, ಉಪಾಧ್ಯಕ್ಷರಾಗಿ...

ಬೆಳ್ಳಾರೆ : ಮೂರ್ತೆದಾರರ ಸೇವಾ ಸಹಕಾರಿ ಸಂಘದ ಚುನಾವಣೆ – ಅಧ್ಯಕ್ಷರಾಗಿ ಎನ್ ಎಸ್ ಡಿ ವಿಠಲದಾಸ್, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಕೊಲ್ಯ ಆಯ್ಕೆ

ಬೆಳ್ಳಾರೆಯ ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ 2025-30ನೇ ಸಾಲಿಗೆ ಆಡಳಿತ ಮಂಡಳಿಗೆ ಚುನಾವಣೆಯು ಜೂ.29ರಂದು ನಡೆಯಿತು. ನೂತನ ಅಧ್ಯಕ್ಷರಾಗಿ ಎನ್ ಎಸ್ ಡಿ ವಿಠಲದಾಸ್, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಕೊಲ್ಯ ಪೆರುವಾಜೆ, ನಿರ್ದೇಶಕರುಗಳಾಗಿ ಸೇಸಪ್ಪ ಪೂಜಾರಿ, ನಾಗೇಶ್ ಕೊಲ್ಯ, ಬಿ ಕೆ ಧರ್ಮಪಾಲ ಶೇಣಿ, ಅಣ್ಣಿ ಪೂಜಾರಿ, ಮೋಹನ್ ಸಾಲಿಯಾನ್ ಸಾರಕೆರೆ, ದೇರಣ್ಣ ಪೂಜಾರಿ ಆಯ್ಕೆಯಾಗಿದ್ದಾರೆ....

ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ರವರಿಗೆ ಸನ್ಮಾನ

ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ(ರಿ.) ಬೆಂಗಳೂರು ಸುಳ್ಯ ತಾಲೂಕು ಇದರ ವತಿಯಿಂದ ಜು.05 ರಂದು ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಸುಮಾರು 31 ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ, ಅಂತಿಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ...

ಪುತ್ತೂರು-ಪೆರ್ಲಂಪಾಡಿ-ಪೈಲಾರು ಬಸ್ಸಿನ ಮಾರ್ಗದ ವಿಸ್ತರಣೆ

ಎಲಿಮಲೆ : ಪೈಲಾರಿನಿಂದ ಪೆರ್ಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಧರ್ಮಸ್ಥಳ ಡಿಪೋದ ಬಸ್ಸು ಈವರೆಗೆ ಪೈಲಾರಿನಲ್ಲಿ ರಾತ್ರಿ ತಂಗುತ್ತಿತ್ತು. ಪೈಲಾರು-ಎಲಿಮಲೆ ಮಧ್ಯೆ ಸೀಮಿತ ಸಾರಿಗೆ ವ್ಯವಸ್ಥೆ ಇರುವುದನ್ನು ಮನಗಂಡಂತಹ ಚೈತನ್ಯ ದೀಕ್ಷಿತ್ ಕೆಳಪಾರೆ ಮತ್ತು ಬೆಟ್ಟ ಜಯರಾಮ್ ಭಟ್ ಇವರುಗಳು ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಬಸ್ ಸಂಚಾರದ ವಿಸ್ತರಣೆಯನ್ನು ಮಾಡಿಸಿರುತ್ತಾರೆ. ಜುಲೈ 2ರಂದು ಬಂದಂತಹ ಬಸ್ಸನ್ನು...

ಸುಬ್ರಹ್ಮಣ್ಯ : ಮರ ಬಿದ್ದು ನೆಲಕ್ಕುರುಳಿದ 11 ಕೆ.ವಿ ವಿದ್ಯುತ್ ಕಂಬಗಳು

ಸುಬ್ರಹ್ಮಣ್ಯ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಕಲ್ಮಕಾರು ಭಾಗದಲ್ಲಿ ವಿದ್ಯುತ್ ವ್ಯತ್ಯಯ : ಮಾಹಿತಿ ನೀಡಿದ ಸುಬ್ರಹ್ಮಣ್ಯ ಮೆಸ್ಕಾಂ ಅಧಿಕಾರಿಗಳು

ಸುಬ್ರಹ್ಮಣ್ಯ ಕಾಶಿಕಟ್ಟೆ ಬಳಿಯಲ್ಲಿ ಇಂದು ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು, ಪರಿಣಾಮವಾಗಿ 11 ಕೆ.ವಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ನಡೆದಿದೆ.11 ಕೆ.ವಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಕಾರಣ ಸುಬ್ರಹ್ಮಣ್ಯ ಪೇಟೆ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಕಲ್ಮಕಾರು ಸೇರಿದಂತೆ ಹಾಲೆಮಜಲು ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸುಬ್ರಹ್ಮಣ್ಯ ಮೆಸ್ಕಾಂ ನ ಅಧಿಕಾರಿಗಳು...

ಪುಸ್ತಕ ಪರಿಚಯ : ಉಲ್ಲಾಸ್ ಕಜ್ಜೋಡಿ ಯವರ “ಜೀವನಯಾನ” ಕವನ ಸಂಕಲನ

“ಜೀವನಯಾನ” ಕವನ ಸಂಕಲನದ ಮೂಲಕ ಸಾರಸ್ವತ ಲೋಕಕ್ಕೆ ಬರುತ್ತಿರುವ ‘ಉಲ್ಲಾಸ್ ಕಜ್ಜೋಡಿ’ ತುಂಬು ಜೀವನೋತ್ಸಾಹದ ಯುವಕ. ದಿವ್ಯಾಂಗಚೇತನರಾದ ಉಲ್ಲಾಸ್ ಈಗ ನಮಗೆಲ್ಲಾ ಆದರ್ಶವಾಗಿ ತಮ್ಮ ಸಂವೇದನಾಶೀಲ ಕವಿತೆಗಳ ಮೂಲಕ ಎಲ್ಲರನ್ನೂ ಎದುರಾಗಿದ್ದಾರೆ. “ಜೀವನಯಾನ” ಎಂಬ ಶೀರ್ಷಿಕೆಗೆ ತಕ್ಕಂತೆ ತನ್ನ ಜೀವನಪಯಣದ ತಲ್ಲಣಗಳನ್ನೇ ಕವಿತೆಗಳನ್ನಾಗಿಸಿ ನಮ್ಮನ್ನೆಲ್ಲ ಬೆರಗುಗೊಳಿಸಿದ್ದಾರೆ. “ಕ್ಷಣಿಕ ಬದುಕುವ ಹೂವಿಗಿರದ ಸ್ವಾರ್ಥ ಅದೆಷ್ಟೋ ವರ್ಷ ಬದುಕುವ...
Loading posts...

All posts loaded

No more posts

error: Content is protected !!