Ad Widget

ಜು.13 : ಬೆಳ್ಳಿಪ್ಪಾಡಿಯಲ್ಲಿ ಕೆಸರ್ ಡೊಂಜಿ ದಿನ

ಶಕ್ತಿ ಯುವಕ ಮಂಡಲ (ರಿ) ಬೆಳ್ಳಿಪ್ಪಾಡಿ ಹಾಗೂ ಊರಿನ ಎಲ್ಲ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಇದೇ ಬರುವ ದಿನಾಂಕ 13 – 07- 2025 ನೇ ಭಾನುವಾರ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದಿಂದ 150 ಮೀಟರ್ ದೂರದಲ್ಲಿರುವ ಶ್ರೀ ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಇವರ ಗದ್ದೆಯಲ್ಲಿ ಕೆಸರಗದ್ದೆ ಕ್ರೀಡಾಕೂಟ ನಡೆಯಲಿದೆ.
ಬೆಳಗ್ಗೆ ಗಂಟೆ 9:00 ರಿಂದ ಸಂಜೆವರೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು.
ಶ್ರೀ ಜಯರಾಜ್ ಬಿ.ಎಚ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕೆ. ಜನಾರ್ದನ್ ನಾಯಕ್ ಕೋಟಿಗದ್ದೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸುವವರಿದ್ದಾರೆ. ವಿಶೇಷ ಆಕರ್ಷಣೆ ಎಂಬಂತೆ ಧರ್ಮ ಚಾವಡಿ ಚಿತ್ರತಂಡವು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೇರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading