Ad Widget

ಬಾಳಿಲ : ಯೋಗ ದಿನಾಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ 21 ಜೂನ್ 2025 ರಂದು ವಿಶ್ವ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ) ಬಾಳಿಲ ಇದರ ಅಧ್ಯಕ್ಷರಾದ ಯು ರಾಧಾಕೃಷ್ಣ ರಾವ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿ, ವಿದ್ಯಾರ್ಥಿಗಳೆಲ್ಲರೂ ಯೋಗ ಅಭ್ಯಾಸವನ್ನು ಮಾಡಿ ಜೀವನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿಕೊಂಡು ಓದಿನ ಕಡೆಗೆ ಮಹತ್ವ ಕೊಡಬೇಕು...

ಸೈಂಟ್ ಜೋಸೆಫ್ ಪ್ರೌಢ ಶಾಲೆಯ ನಾಯಕಿಯಾಗಿ ಅನಿಂದ್ರಿತ ಡಿ.ಎಸ್
ಉಪನಾಯಕನಾಗಿ ಕೌಶಿಕ್ ಕುಮಾರ್

ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸುಳ್ಯದ  ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಈ ಸಾಲಿನ  ಮಂತ್ರಿಮಂಡಲಕ್ಕೆ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಮತದಾನ ಪ್ರಕ್ರಿಯೆಯು ಜೂನ್ 18ರಂದು ನಡೆಯಿತು. ಶಾಲಾ ನಾಯಕಿಯಾಗಿ ಅನಿಂದ್ರಿತ ಡಿ ಎಸ್(10.ಬಿ), ಉಪನಾಯಕನಾಗಿ ಕೌಶಿಕ್ ಕುಮಾರ್ (10.ಬಿ), ವಿರೋಧ ಪಕ್ಷದ ನಾಯಕಿಯಾಗಿ ಚಿನ್ಮಯಿ ಶೆಟ್ಟಿ(10.ಎ), ಗವರ್ನರ್ ಮೌರ್ಯ (10.ಎ), ಸ್ಪೀಕರ್ ಆಕಾಶ್...
Ad Widget

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ವಿದ್ಯಾ ಸಂಸ್ಥೆಯ ಜೊತೆ ಕಾರ್ಯದರ್ಶಿ ರೆ. ಫಾ. ಆಲ್ವಿನ್ ಎಡ್ವರ್ಡ್ ಡಿ'ಕುನ್ನಾ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ದಿನನಿತ್ಯ ಯೋಗ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ಯೋಗ ಪಟು ಸಂತೋಷ್ ಮುಂಡಕಜೆ ಇವರು...

ಲೀಚ್ ಥೆರಪಿ

✍️ಡಾ|| ಮುರಲೀ ಮೋಹನ್ ಚೂಂತಾರುಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ...

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ – ಯೋಗ ಶಾರೀರಿಕ ,ಮಾನಸಿಕ ಸದೃಡತೆಯ ಕೊಂಡಿ : ಸದಾನಂದ ಮಾವಜಿ

ಯೋಗದಿಂದ ಶಾರೀರಿಕ, ಮಾನಸಿಕತೆ ಸದೃಡತೆಗೊಳ್ಳುತ್ತದೆ. ಇದು ಮನುಷ್ಯನ ಶಾರೀರಿಕ ಮತ್ತು ಮಾನಸಿಕತೆ ಕೊಂಡಿಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಹಾಗೂ ಪಯಸ್ವಿನಿ ಪ್ರೌಢಶಾಲಾ ಸಂಚಾಲಕ ಸದಾನಂದ ಮಾವಜಿ ಹೇಳಿದರು.ಅವರು ಸುಳ್ಯ ಕೆ. ವಿ ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಇದರ...

ಸುಳ್ಯ : ಬಿಜೆಪಿ ಸುಳ್ಯ ಮಂಡಲದ ನೇತೃತ್ವದಲ್ಲಿ ಯೋಗ ದಿನಾಚರಣೆ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಸುಳ್ಯದ ಕೇರ್ಪಳದಲ್ಲಿರುವ ಶ್ರೀ ದುರ್ಗಾ ಸಭಾಭವನದಲ್ಲಿ ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ಕಾರ್ಯಕ್ರಮ ನಡೆಯಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸುಳ್ಯ ಶಾಖೆಯ ನಿಶಿತಾ ನವೀನ್, ಸುಳ್ಯ ಬಂಟರ...

ಸುಳ್ಯ : ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ.ಸಾ.ಪ ವತಿಯಿಂದ ಗೌರವಾರ್ಪಣೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂ.21 ರಂದು ಸುಳ್ಯದ ಅಂಬಟಡ್ಕ ದಲ್ಲಿರುವ ಕನ್ನಡ ಭವನದಲ್ಲಿ 2024-25ನೇ ಸಾಲಿನ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ ಸುಳ್ಯ ತಾಲೂಕಿನ ಪ್ರೌಢಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಕಾರ್ಯಕ್ರಮದ...

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ  ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಶ್ವೇತಾ ಲಕ್ಷ್ಮಿ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು ಹಾಗೂ ಕೆಲವು ಯೋಗ ಮುದ್ರೆಗಳು ಹಾಗೂ ಪ್ರಾಣಾಯಾಮ ಮಾಡಿಸಿದರು. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕುಮಾರಿ ಮನ್ವಿತ ವಹಿಸಿದ್ದರು ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ...

ಬಿಳಿನೆಲೆ : ಶ್ರೀ ಗೋಪಾಲಕೃಷ್ಣ ವಿದ್ಯಾಲಯದ ವಿವಿಧ ಸಂಘಗಳ ಉದ್ಘಾಟನೆ

ದೇಶಪ್ರೇಮ ಬೆಳೆಸಲು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶಾಲಾ ಹಂತದಲ್ಲಿ ವಿವಿಧ ಸಂಘಗಳು ಸಹಕಾರಿಯಾಗಿವೆ ಎಂಬುದಾಗಿ ಕುಮಾರಸ್ವಾಮಿ ವಿದ್ಯಾಲಯದ ಗಣಿತ ಶಿಕ್ಷಕರಾದ ಆನಂದ ಸರ್ ಇವರು ನುಡಿದರು. ಅವರು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ವಿದ್ಯಾಲಯದ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಶಿಸ್ತು ಸಾಮಾಜಿಕ ಪ್ರಜ್ಞೆ, ಉತ್ತಮ ನಾಯಕತ್ವ ಬೆಳೆಸಲು ಸಂಘಗಳು ಸಹಾಯ ಮಾಡುತ್ತದೆ. ಇಂದು ವಿದ್ಯಾವಂತರಿಂದ ಸಮಾಜಘಾತುಕ...

ಪ.ಜಾತಿ ಮತ್ತು ಪ.ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ –  ಸಭೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಮಹೇಶ್ ಬೆಳ್ಳಾರ್ಕರ್ ಭಾಗಿ

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಇಂದು 20-06-2025 ರಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗಮದ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆದ ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಶ್ರೀ ದರ್ಶನ್ ಹೆಚ್. ವಿ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಲೆಮಾರಿ ಅಭಿವೃದ್ಧಿ...
Loading posts...

All posts loaded

No more posts

error: Content is protected !!