Ad Widget

ಕುಕ್ಕುಜಡ್ಕ : ಅಮರ ಸಂಘಟನಾ  ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ

ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಚೊಕ್ಕಾಡಿ ಎಜ್ಯುಕೇಶನ್ ಸೊಸೖಟಿ(ರಿ.) ಕುಕ್ಕುಜಡ್ಕ ಇದರ ವಿದ್ಯಾಸಂಸ್ಥೆಯಾದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮಜೂನ್ 15ರಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿ ನೆರವೇರಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕುಸುಮಾಧರ ಮುಕ್ಕೂರು ಅಧ್ಯಕ್ಷರು ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇವರು ವಹಿಸಿದ್ದರು,...

ಧ್ವನಿಮಾಯೆ ಕಲಾವಿದೆ ಸುಳ್ಯದ ಸಾಯಿಶ್ರುತಿ ಪಿಲಿಕಜೆ ಝೀ ಕನ್ನಡ ವಾಹಿನಿಯ “ಮಹಾನಟಿ ರಿಯಾಲಿಟಿ ಶೋ” ಗೆ ಆಯ್ಕೆ

ಧ್ವನಿಮಾಯೆ ಕಲಾವಿದೆ, ಬಹುಮುಖ ಪ್ರತಿಭೆ ಸುಳ್ಯ ತಾಲೂಕು ಕುಕ್ಕುಜಡ್ಕದ ಸಾಯಿಶ್ರುತಿ ಪಿಲಿಕಜೆ ರವರು ಝೀ ಕನ್ನಡ ವಾಹಿನಿಯ “ಮಹಾನಟಿ ರಿಯಾಲಿಟಿ ಶೋ ಸೀಸನ್-2” ಕ್ಕೆ ಆಯ್ಕೆಯಾಗಿದ್ದು, ಗೋಲ್ಡನ್ ಟಿಕೆಟ್ ಪಡೆದುಕೊಂಡಿದ್ದಾರೆ.ಪ್ರತೀ ಶನಿವಾರ ಹಾಗೂ ಭಾನುವಾರ ರಾತ್ರಿ 7:30ಕ್ಕೆ ಈ ರಿಯಾಲಿಟಿ ಶೋ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.ಅಮರಮುಡ್ನೂರು ಗ್ರಾಮದ ಶಿವಸಾಯಿ ಭಟ್ ಮತ್ತು ದಿ.ಸುಜ್ಯೋತಿ ದಂಪತಿಯ...
Ad Widget

ಚಿದಾನಂದ ಮಲ್ಲಾಜೆ ನಿಧನ

ಕೊಲ್ಲಮೊಗ್ರು ಗ್ರಾಮದ ಚಿದಾನಂದ ಮಲ್ಲಾಜೆ ಜೂ.16ರಂದು ಸ್ವಗೃಹದಲ್ಲಿ ನಿಧನರಾದರು.ಇವರು ಕೆಲ ಸಮಯಗಳಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು.ಮೃತರಿಗೆ 65 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮೀನಾಕ್ಷಿ, ಪುತ್ರಿ ಶ್ರೀಮತಿ ಸಂಧ್ಯಾ ಶ್ರೀಧರ್ ಮೆಟ್ಟಿನಡ್ಕ, ಪುತ್ರ ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಅಕ್ಷಯ್, ಸಹೋದರರಾದ ಗೋಪಾಲಕೃಷ್ಣ, ಅಶೋಕ್, ಸಹೋದರಿ ಶ್ರೀಮತಿ ರತ್ನಾವತಿ ಐನೆಕಿದು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ದ.ಕ. ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಮಳೆ – ಇಂದು (ಜೂ.17) ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ

ದ.ಕ.ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು ರೆಡ್ ಅಲರ್ಟ್ ಇರುವ ಹಿನ್ನೆಲೆಯಲ್ಲಿ ಜೂ.17 ರಂದು ಸುಳ್ಯ ತಾಲೂಕಿನ ಪ್ರಾಥಮಿಕ, ಪ್ರೌಢ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್  ಆದೇಶಿಸಿದ್ದಾರೆ.

ಸುಳ್ಯ : ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ

ದ. ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಇದರ ವತಿಯಿಂದ ಜೂ 15ರಂದು ಪರಿಶಿಷ್ಟ ಜಾತಿ ಸಮುದಾಯದ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ದ.ಕ. ಜಿಲ್ಲಾ ಕಾಂಗ್ರೆಸ್ ಪ.ಜಾ. ವಿಭಾಗದ ಅಧ್ಯಕ್ಷರಾದ ದಿನೇಶ್ ಮೂಳೂರು ರವರ ನೇತೃತ್ವದಲ್ಲಿ ಸುಳ್ಯ ಯುವಜನ...

ಪ್ರಣವ ಸೌಹಾರ್ದ ಸಹಕಾರಿ ಸಂಸ್ಥೆಯ 11ನೇ ವಾರ್ಷಿಕ ಮಹಾಸಭೆ 52.75 ಲಕ್ಷರೂ. ನಿವ್ವಳ ಲಾಭ : ಸದಸ್ಯರಿಗೆ ಶೇ. 10 ಲಾಭಾಂಶ ಹಂಚಿಕೆ

ಪ್ರಣವ ಸೌಹಾರ್ದ ಸಹಕಾರಿ ಸಂಸ್ಥೆಯ ಯಶಸ್ವಿ ದಶಕ ಪೂರ್ತಿಯ 11ನೆಯ ವಾರ್ಷಿಕ ಮಹಾಸಭೆ ಮಂಗಳೂರಿನ ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ರವಿವಾರ ನಡೆಯಿತು. ಅಧ್ಯಕ್ಷ ಜಿ.ಆರ್. ಪ್ರಸಾದ್ ಅವರು ಸಂಸ್ಥೆಯ ಕಳೆದ ಆರ್ಥಿಕ ವರ್ಷದ ಆರ್ಥಿಕ ವರದಿ ಮಂಡಿಸಿ, ಸಂಸ್ಥೆಗೆ ಕಳೆದ ಆರ್ಥಿಕ ವರ್ಷದಲ್ಲಿ 66.64 ಲಕ್ಷ ರೂ. ಒಟ್ಟಾರೆ ಲಾಭವಿದ್ದು, 52.75 ಲಕ್ಷ ರೂ. ನಿವ್ವಳ...

ನಾಳೆ (ಜೂ. 17) ಸುಳ್ಯದ ವಿವಿಧೆಡೆ ವಿದ್ಯುತ್ ವ್ಯತ್ಯಯ

110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ದಿನಾಂಕ: 17.06.2025 (ಮಂಗಳವಾರ) ಪೂರ್ವಾಹ್ನ 10:00 ರಿಂದ ಸಾಯಂಕಾಲ 3:00 ಗಂಟೆಯವರೆಗೆ 33ಕೆ.ವಿ ಮಾಡಾವು-ಬೆಳ್ಳಾರೆ, 33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು, 33ಕೆವಿ ಮಾಡಾವು-ಕಾವು ಮತ್ತು 33ಕೆವಿ ಮಾಡಾವು - ಸುಳ್ಯ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಮಾಡಾವು ಹಾಗೂ 33/11ಕೆವಿ ಬೆಳ್ಳಾರೆ, ಗುತ್ತಿಗಾರು,...

ಅಡ್ಡನಪಾರೆ : ಶ್ರೀ ಶಂಖಪಾಲ ಸ್ಪೋಟ್ಸ್ ಕ್ಲಬ್ ನ ನೂತನ ಕಟ್ಟಡ ಉದ್ಘಾಟನೆ

ಅಡ್ಡನಪಾರೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಶಂಖಪಾಲ ಸ್ಪೋಟ್ಸ್ ಕ್ಲಬ್ ಇದರ ನೂತನ ಕಟ್ಟಡ ಊರ ಹಾಗೂ ಪರವೂರ ದಾನಿಗಳ ಸಹಕಾರದಿಂದ ಸುಮಾರು 1.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಜೂ.15 ರಂದು ಲೋಕಾರ್ಪಣೆಗೊಂಡಿತು. ಬೆಳಗ್ಗೆ ಮಹಾಬಲೇಶ್ವರ ಭಟ್ ಗಣಪತಿ ನಡೆಸಿಕೊಟ್ಟರು. ಊರಿನ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ನೂರಕ್ಕೂ ಮಿಕ್ಕಿ ಜನ...

ಕುಕ್ಕೆ ಸುಬ್ರಹ್ಮಣ್ಯ : ಬೆಳ್ಳಿರಥ ನಿರ್ಮಾಣಕ್ಕೆ ಡಾ| ರೇಣುಕಾ ಪ್ರಸಾದ್ ಕುಟುಂಬದವರಿಂದ ವೀಳ್ಯ ನೀಡಿಕೆ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ| ಕೆ.ವಿ ರೇಣುಕಾ ಪ್ರಸಾದ್ ಮತ್ತು ಕುಟುಂಬದವರು ಬೆಳ್ಳಿ ರಥ ನೀಡಲಿದ್ದು, ಅದರ ಪೂರ್ವಭಾವಿಯಾಗಿ ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮವು ಜೂ.14 ರಂದು ನಡೆಯಿತು.ದೇವಾಲಯದಲ್ಲಿ ಶಾಸ್ತ್ರೋಕ್ತ ವಿಧಿಯೊಂದಿಗೆ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ...

ದ.ಕ. ಜಿಲ್ಲೆಯಾದ್ಯಂತ ರೆಡ್ ಅಲರ್ಟ್ – ಇಂದು (ಜೂ.16) ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ

ದ.ಕ.ಜಿಲ್ಲೆಯಾದ್ಯಂತ ಜೂ.16 ರಂದು ರೆಡ್ ಅಲರ್ಟ್ ಘೊಷಣೆಯಾಗಿದ್ದು ಅತಿಯಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರಾಥಮಿಕ,ಪ್ರೌಡ ಹಾಗೂ ಪದವಿಪೂರ್ವ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
Loading posts...

All posts loaded

No more posts

error: Content is protected !!