Ad Widget

ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ – ವೆಂಕಟ್ ವಳಲಂಬೆ ಅಸಮಾಧಾನ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ರಾಜ್ಯದ ಮಾನ್ಯ ಮುಜರಾಯಿ ಮಂತ್ರಿ ರಾಮಲಿಂಗ ರೆಡ್ಡಿಯವರು ನೂತನ ಆಶ್ಲೇಷ ಮಂದಿರಕ್ಕೆ ಶಂಕುಸ್ಥಾಪನ ನೆರವೇರಿಸಲಿದ್ದಾರೆ. ಈ ಹಿಂದೆ ಮೋಹನ್ ರಾಮ್ ಸುಳ್ಳಿ ಆಡಳಿತ ಅವಧಿಯಲ್ಲಿ ದಾನಿಯಾದ ಮಾಲೂರು ಕೃಷ್ಣಯ್ಹ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದ್ದು ಕಾಮಗಾರಿ ಅನೇಕ ಕಾರಣಗಳಿಂದ ನಿಂತು ಹೋಗಿತ್ತು ಇದೀಗ ಮತ್ತೆ ಅದಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಈ ವಿಚಾರವಾಗಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಯಸ್.  ಯಡಿಯೂರಪ್ಪ ಮುತುವರ್ಜಿ ಯಿಂದ 180 ಕೋಟಿ ಮಾಸ್ಟರ್ ಪ್ಲಾನ್ ಯೋಜನೆ ಪರಿಣಾಮ ಕ್ಷೇತ್ರ ಅಭಿವೃದ್ಧಿಯಾಗಿದೆ. ಆ ಯೋಜನೆಯ ಅನುಷ್ಠಾನ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಗಬೇಕಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ತೆರಳುತ್ತಾರೆ ಆದರೆ ಇಂತಹ ನಂಬಿಕೆ,ಶ್ರದ್ಧೆಯ ಕೇಂದ್ರದಲ್ಲಿ ಯಾರು ರಾಜಕೀಯ ಮಾಡಬಾರದು ಆದರೆ ಶಂಕುಸ್ಥಾಪನೆ ವಿಚಾರವಾಗಿ ಈ ಹಿಂದಿನ ಸಮಿತಿ ಕಾಲದಲ್ಲಿ ಜ್ಯೋತಿಷ್ಯರ ಚಿಂತನೆ ಮೂಲಕ ದಿನನಿತ್ಯ ನಡೆಯುವ ಪೂಜೆ ದೇವಾಲಯದ ಪರಿಧಿಯಿಂದ ಬೇರೆ ಕಡೆ ಹೋಗದೆ ದೇವಾಲಯ ಅನ್ನಛತ್ರ ಹಿಂಭಾಗ ಅಗಬಹುದೆಂದಿದ್ದರು ಇದೀಗ ಮತ್ತೆ ಬೇರೆ ಕಡೆ ಶಂಕುಸ್ಥಾಪನೆ ನಡೆಸುತ್ತಿರುವ ಅಗತ್ಯವಿತ್ತೆ? ಪ್ರಶ್ನಿಸಿದ್ದಾರೆ  ದೇವಸ್ಥಾನ ವಿಚಾರದಲ್ಲಿ ರಾಜಕೀಯ ನಡೆಸುವುದನ್ನು ಬಿಜೆಪಿ ಯಾವ ಕಾರಣಕ್ಕೂ ಸಹಿಸುವುದಿಲ್ಲ, ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ನಾಯಕರನ್ನು ಸಂತೋಷಪಡಿಸಲು ಮಾಜಿ ಸಚಿವರೊಬ್ಬರನ್ನು ನಮೂದಿಸಿರುವುದು ಸರಿಯಲ್ಲವೆಂದು ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading