Ad Widget

ಶ್ರೀ.ಕ್ಷೇ.ಧ.ಯೋಜನೆ ಸುಳ್ಯ ವಲಯದ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್(ರಿ.) ಸುಳ್ಯ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯು ಜೂ.29 ರಂದು ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಯೋಜನೆಯ ಫಲಾನುಭವಿಗಳ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಪಿಯುಸಿ ವಿಭಾಗದಲ್ಲಿ
ಶ್ರೀ ಮಂಜು ಸಂಘದ ಸದಸ್ಯರಾದ ವಸಂತಿ ರವರ ಮಗ ಕೌಶಿಕ್(548), ಶ್ರೀದೇವಿ ಸಂಘದ ಸದಸ್ಯರಾದ ಬಾಲಕೃಷ್ಣರವರ ಮಗಳು ಹರ್ಷಿತ(591), ಸಿದ್ಧಿವಿನಾಯಕ ಸಂಘದ ಸದಸ್ಯರಾದ ಲೋಕೇಶ್ವರಿ ರವರ ಮಗಳು ನವೀನ(516)
ಎಸ್ ಎಸ್ ಎಲ್ ಸಿ ವಿಭಾಗದಲ್ಲಿ
ಸುರಭಿ ಸಂಘದ ಸದಸ್ಯರಾದ ಯಶೋಧರವರ ಮಗಳು ದೀಪಶ್ರೀ(612), ಮಲ್ಲಿಕಾರ್ಜುನ ಸಂಘದ ಸದಸ್ಯರಾದ ರಾಜೇಂದ್ರ ರವರ ಮಗ ಅನುಷ್(505), ಸದಾಶಿವ ಸಂಘದ ಸದಸ್ಯರಾದ ಲಕ್ಷ್ಮಿ ರವರ ಮಗ ಅಭಿಷೇಕ್(535) ಇವರುಗಳನ್ನು ಗೌರವಿಸಲಾಯಿತು.
ಮಕ್ಕಳನ್ನು ಗೌರವಿಸಿದ ಮಾನ್ಯ ಯೋಜನಾಧಿಕಾರಿಯವರು ಮಾತನಾಡಿ “ಮಕ್ಕಳ ಏಳಿಗೆಯಲ್ಲಿ ತಂದೆ ಮತ್ತು ತಾಯಿಯ ಪಾತ್ರದ ಬಗ್ಗೆ ತಿಳಿಸಿದರು, ವೃತ್ತಿಪರ ವಿದ್ಯಾಭ್ಯಾಸಕ್ಕಾಗಿ ಯೋಜನೆಯಲ್ಲಿ ಸುಜ್ಞಾನ ನಿಧಿ ಕಾರ್ಯಕ್ರಮ ಇದೆ. ಅದನ್ನು ಬಳಸಿಕೊಳ್ಳಿ. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಹೆಚ್ಚಾಗಿ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಆದರೆ ಈ ಮಕ್ಕಳ ಸಾಧನೆ ಈ ಸಮಾಜಕ್ಕೆ ಮಾದರಿಯಾಗಲಿ” ಎಂದು ಹೇಳಿದರು. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಸಂಘದ ವಾರದ ಸಭೆಯ ನಿರ್ವಹಣೆಯ ಬಗ್ಗೆ ಮಾತನಾಡಿ “ಅಚ್ಚುಕಟ್ಟಾಗಿ ನಡೆಸಿಕೊಂಡು ಹೋದಲ್ಲಿ ನಿಮ್ಮ ಎಲ್ಲಾ ವ್ಯವಹಾರಗಳು ಉತ್ತಮವಾಗಿರುತ್ತದೆ, ಪಡೆದುಕೊಂಡ ಪ್ರಗತಿ ನಿಧಿಯನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಂಡು ಕುಟುಂಬ ಅಭಿವೃದ್ಧಿಯತ್ತ ಸಾಗಲಿ ಸಂಘದ ಸದಸ್ಯರ ಕಂತು ಬಾಕಿ ಆದಲ್ಲಿ ಎಲ್ಲಾ ಸದಸ್ಯರು ಒಟ್ಟಾಗಿ ಸಮಸ್ಯೆಯನ್ನು ಪರಿಹರಿಸಿಕೊಂಡು ಹೋದಲ್ಲಿ ಉತ್ತಮವಾಗಿರುತ್ತದೆ. ಒಂದು ವೇಳೆ ಕಂತು ಬಾಕಿಯಾಗಿ ಸಿಬಿಲ್ ಸ್ಕೋರ್ ಎಂಟ್ರಿ ಆದಲ್ಲಿ ಮುಂದಿನ ನಿಮ್ಮ ವ್ಯವಹಾರಕ್ಕೆ ಸಮಸ್ಯೆಯಾಗಬಹುದು ಆದುದರಿಂದ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಿ” ಎಂದು ತಿಳಿಸಿದರು. ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಸೌಲಭ್ಯ ಮತ್ತು ಆಸ್ಪತ್ರೆಗಳ ರೀತಿ ನೀತಿಯನ್ನು ವಿವರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮೇಲ್ವಿಚಾರಕರು ಮಾತನಾಡಿ “ಸಂಘವನ್ನು ನಡೆಸಿಕೊಂಡು ಹೋಗುವ ರೀತಿ ನೀತಿ ಮತ್ತು ವಾರದ ಸಭೆಯ ಬಗ್ಗೆ ತಿಳಿಸುತ್ತಾ ವಿನಿಯೋಗದಾರರ ಬದಲಾವಣೆ ಪ್ರಕ್ರಿಯೆ ಇವಾಗ ನಡೆಯುತ್ತಿರುವ ಕಾರಣ ಯಾವುದೇ ರೀತಿಯ ಬದಲಾವಣೆ ಇದ್ದಲ್ಲಿ ಆದಷ್ಟು ಬೇಗ ತಿಳಿಸಿ ಪರಿಹರಿಸಿಕೊಳ್ಳಬೇಕು. ಪ್ರಗತಿ ನಿಧಿ ಸಾಲ ಪಡೆಕೊಂಡ ಸದಸ್ಯನ ಕಂತು ಬಾಕಿ ಆದಲ್ಲಿ ಸಂಘದ ಗ್ರೇಡ್ ಮತ್ತು ಮುಂದಿನ ದಿನಗಳಲ್ಲಿ ವ್ಯವಹಾರಕ್ಕೆ ಸಮಸ್ಯೆ ಆಗುವ ಬಗ್ಗೆ” ತಿಳಿಸಿದರು.
ತ್ರೈಮಾಸಿಕ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಮನೋಹರ್ ರವರು ಮಾತನಾಡಿ “ವಾರದ ಸಭೆಯ ನಿರ್ವಹಣೆಯಲ್ಲಿ ಸದಸ್ಯರ ಪಾತ್ರ ಮತ್ತು ಮನೆ ಭೇಟಿ ಮಾಡಿದಾಗ ಆಗುವ ವಿಚಾರಗಳನ್ನು” ವಿವರವಾಗಿ ತಿಳಿಸಿದರು. ಮತ್ತು ಒಕ್ಕೂಟದ ಕಾರ್ಯವೈಖರಿಯನ್ನು ಉತ್ತಮವಾಗಿರಿಸಲು ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ, ಸುಳ್ಯ ವಲಯ ಮೇಲ್ವಿಚಾರಕರಾದ ದಿನೇಶ್.ಡಿ, ಸೇವಾ ಪ್ರತಿನಿಧಿ ಸೌಜನ್ಯ, ಒಕ್ಕೂಟದ ಅಧ್ಯಕ್ಷರಾದ ಮನೋಹರ್ ಕೆ, ಉಪಾಧ್ಯಕ್ಷರಾದ ಮೋಹನ್ ರೈ ಮತ್ತು ಇಂದಿರಾ, ದಾಖಲಾತಿ ಸಮಿತಿ ಸದಸ್ಯರು, ಕಾರ್ಯಕ್ಷೇತ್ರದ ಎಲ್ಲಾ ಸಂಘದ ಪ್ರಬಂಧಕರು, ಸಂಯೋಜಕರು, ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ತ್ರೈಮಾಸಿಕ ಸಭೆಯಲ್ಲಿ ಒಟ್ಟು 180 ಜನ ಸದಸ್ಯರು ಪಾಲ್ಗೊಂಡಿದ್ದರು.
ಶಿವ ಕೃಪಾ ತಂಡದ ಅನಿತಾರವರು ಸ್ವಾಗತಿಸಿದರು, ದತ್ತಗುರು ಸಂಘದ ಪ್ರೇಮಾರವರು ಎಲ್ಲರನ್ನು ವಂದಿಸಿದರು, ದತ್ತಗುರು ಸಂಘದ ರಂಜಿನಿ ಕೆ ಎಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading