Ad Widget

ಗುತ್ತಿಗಾರು :-ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಗುತ್ತಿಗಾರು ವಲಯ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗುತ್ತಿಗಾರು ವಲಯದ ಕಮಿಲ – ಮೊಗ್ರ -ಬಳ್ಳಕ್ಕ ಒಕ್ಕೂಟದಲ್ಲಿ ಶ್ರೀ ಲೋಕೇಶ ಪೀರನಮನೆಯವರು ಮಾದಕ ವಸ್ತುಗಳ ಸೇವನೆ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಅತಿಯಾದ ಮೊಬೈಲು ಬಳಕೆಯಿಂದ ಹಾಗೂ ಮಾದಕ ವ್ಯಸನದಿಂದ ಮುಕ್ತವಾದ ಸಮಾಜವನ್ನು ನಿರ್ಮಿಸುವುದು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಮಾಹಿತಿ ಮಾಗ೯ದರ್ಶನ ನೀಡಿ ನಮ್ಮ ಕುಟುಂಬದಲ್ಲಿ ಅಂತಹ ವ್ಯಕ್ತಿಗಳು ಅಥವಾ ನಮ್ಮ ಸುತ್ತಮುತ್ತ ಇರುವ ಒಬ್ಬ ವ್ಯಕ್ತಿಯನ್ನು ಇಂತಹ ದುಶ್ಚಟದಿಂದ ಮುಕ್ತವಾಗಿಸುವುದೇ ಈ ದಿನಾಚರಣೆಯ ಗುರಿಯಾಗಿದೆ ಎಂದು ತಿಳಿಸಿದರು
ಜನ ಜಾಗೃತಿ ಗುತ್ತಿಗಾರು ವಲಯದ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿಯವರು ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಮುಖಾಂತರ ವ್ಯಸನ ಮುಕ್ತ ಸಮಾಜ ನಿರ್ಮಾಣ ಮದ್ಯವರ್ಜನ ಶಿಬಿರದೊಂದಿಗೆ ಇಂತಹ ಧಾರ್ಮಿಕ ಮತ್ತು ಸೇವಾ ಸಂಘಟನೆಗಳ ಸಹಯೋಗದೊಂದಿಗೆ ಮಾದಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಪ್ರತಿಯೊಬ್ಬ ಸಂಘದ ಸದಸ್ಯನು ಕೈಜೋಡಿಸಿ ಇಂತಹ ಕುಟುಂಬವನ್ನು ಹಾಳು ಮಾಡುವಂತಹ ಸನ್ನಿವೇಶದಿಂದ ಹೊರಬರಲು ಸಾಧ್ಯ ಹಾಗೂ ಇಂತಹ ಮಾಹಿತಿ ಕಾರ್ಯಕ್ರಮಗಳು ಶ್ರೀ ದೇವರ ಕೃಪೆಯಿಂದ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ವಲಯದ ಮೇಲ್ವಿಚಾರಕರಾದ ರಾಜೇಶ್ ರವರು ಪ್ರತಿ ವರ್ಷ ಜೂನ್ 26 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಾದಕ ದ್ರವ್ಯಗಳ ದುರ್ಬಳಕೆ ಮಾದಕ ವಸ್ತುಗಳ ಸೇವನೆ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಾದಕ ವ್ಯಸನದಿಂದ ಮುಕ್ತವಾದ ಸಮಾಜವನ್ನು ನಿರ್ಮಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು
ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಮಧುಕರ ಮುಳುಬಾಗಿಲು ರವರು ಒಕ್ಕೂಟದ ಸಭೆಯಲ್ಲಿ ಇಂತಹ ಮಾಹಿತಿಯನ್ನು ನೀಡಿದಾಗ ನಮ್ಮ ಸಂಘದ ಸದಸ್ಯರ ಕುಟುಂಬ ಮತ್ತು ವೈಯಕ್ತಿಕವಾಗಿ ತನ್ನ ಆರೋಗ್ಯ ಕಾಪಾಡಲು ಸಾಧ್ಯ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮೊಗ್ರ ಕಾರ್ಯ ಕೇತ್ರದ ಸೇವಾಪ್ರತಿನಿಧಿ ಅಶ್ವಿನಿ ಮತ್ತು ಒಕ್ಕೂಟದ ಪಧಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಗುತ್ತಿಗಾರು ಒಕ್ಕೂಟದ ಸೇವಾ ಪ್ರತಿನಿಧಿಯಾದ ಲೋಕೇಶ್ವರ ಡಿ.ಆರ್ ರವರು ಕಾರ್ಯ ಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading