Ad Widget

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರವಾಗಿ ಸಾಗುತ್ತಿರುವ  ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಜೂನ್ 29 : ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಗೂ ಡಾ.ರವಿ ಕಕ್ಕೆಪದವು ಸಮಾಜ ಸೇವ ಟ್ರಸ್ಟ್ ವತಿಯಿಂದ ಪ್ರತಿ ರವಿವಾರ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದು, ಜೂ.29 ರಂದು ನಡೆದ ಸ್ವಚ್ಛತಾ ಅಭಿಯಾನದಲ್ಲಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ನ ಸುಮಾರು ಮೂವತ್ತಕ್ಕೂ ಹೆಚ್ಚು ಸ್ವಯಂಸೇವಕರು ಕುಮಾರಧಾರ ಸೇತುವೆಯ ಮೇಲೆ ಇದ್ದಂತಹ ಕಸ-ಕಡ್ಡಿಗಳು,ಮಣ್ಣು ಹಾಗೂ ಕೊಚ್ಚೆ ವಸ್ತುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.
ಅದರೊಂದಿಗೆ ಕುಮಾರಧಾರ ಸ್ನಾನಘಟ್ಟ ಪರಿಸರದಲ್ಲಿಯೂ ಇದ್ದ ಕಸ-ಕಡ್ಡಿಗಳು, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಾಟಲ್ ಗಳು ಹಾಗೂ ಕೊಚ್ಚೆ ವಸ್ತುಗಳನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ವೆಂಕಟೇಶ್.ಎಚ್.ಎಲ್ “ಕುಕ್ಕೆ ಸುಬ್ರಹ್ಮಣ್ಯ ಪವಿತ್ರ ಕ್ಷೇತ್ರಕ್ಕೆ ದೇಶಾದ್ಯಂತ ಸಾವಿರಾರು ಭಕ್ತಾದಿಗಳು ದಿನಂಪ್ರತಿ ಆಗಮಿಸುವ ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಸ್ವಚ್ಛತೆಗೆ ವಿಶೇಷವಾದ ಗಮನವನ್ನು ಹರಿಸಲೇಬೇಕು. ಕ್ಷೇತ್ರದ ಎಲ್ಲಾ ಕಡೆ ಸ್ವಚ್ಛ ಇದ್ದಲ್ಲಿ ಭಕ್ತಾದಿಗಳು ಸ್ವಚ್ಛ  ಮನಸ್ಸಿನೊಂದಿಗೆ ದೇವರ ಸಾನಿಧ್ಯದಲ್ಲಿ ದೇವರ ದರ್ಶನವನ್ನು ಮಾಡಿ ಸಂಪ್ರೀತಗೊಳ್ಳುತ್ತಾರೆ” ಎಂದರು.

. . . . . . . . .

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ ನ ಸಂಸ್ಥಾಪಕರಾದ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ ಕುಕ್ಕೆ ಶ್ರೀ  ಸೀನಿಯರ್ ಚೇಂಬರ್ ನ ಸ್ಥಾಪಕಾಧ್ಯಕ್ಷರಾದ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲು, ಸಮಾಜ ಸೇವಾ ಟ್ರಸ್ಟ್ ನ ಸ್ವಯಂಸೇವಕರು ಭಾಗವಹಿಸಿದ್ದರು.
ಶ್ರೀಮತಿ ಗೀತಾ ರವಿ ಕಕ್ಕೆಪದವು ಅವರಿಂದ ಎಲ್ಲಾ ಸ್ವಯಂಸೇವಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷ ಸೂಚನೆ : “ದೇಶಾದ್ಯಂತ ಹಾಗೂ ದೂರ ದೂರಗಳಿಂದ ಬರುವ ಭಕ್ತಾದಿಗಳು ಕ್ಷೇತ್ರ ಸಂದರ್ಶಿಸುವ ಸಮಯದಲ್ಲಿ ತಮ್ಮ ಬ್ಯಾಗ್ ಗಳಲ್ಲಿ ಯಾವುದೇ ಪ್ಲಾಸ್ಟಿಕ್ ಬಾಟಲ್ ಗಳು ಪ್ಲಾಸ್ಟಿಕ್ ವಸ್ತುಗಳನ್ನು ತರಬೇಡಿ, ಹಾಗೆ ಒಂದು ವೇಳೆ ತಂದಲ್ಲಿ ಅದೆಲ್ಲವನ್ನೂ ತಮ್ಮ ವಾಹನದಲ್ಲಿಯೇ ಇಟ್ಟು ವಾಪಸ್ ಊರಿಗೆ ಕೊಂಡುಹೋಗಬೇಕು” ಎಂಬ ವಿನಂತಿಯನ್ನು ಮಾಡಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading