Ad Widget

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ ನಾಳೆ(ಜೂ.30) ನಿವೃತ್ತಿ

(ವರದಿ : ಉಲ್ಲಾಸ್ ಕಜ್ಜೋಡಿ)
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ ರವರು ನಾಳೆ(ಜೂ.30) ನಿವೃತ್ತಿ ಹೊಂದುತ್ತಿದ್ದು, 1985 ಜನವರಿ 01 ರಲ್ಲಿ ಹಂಗಾಮಿ ಗುಮಾಸ್ತರಾಗಿ ಕರ್ತವ್ಯಕ್ಕೆ ಸೇರಿದ ಇವರು ಆರು ತಿಂಗಳುಗಳ ನಂತರ ಕಾಯಂ ನೌಕರರಾದರು. ಬಾಳುಗೋಡು, ಹರಿಹರ ಪಳ್ಳತ್ತಡ್ಕ, ಕಲ್ಮಕಾರು ಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ರೇಷನ್, ದಿನಸಿ ಹಾಗೂ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡಿದ್ದರು. 2015 ಜನವರಿ 01 ರಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿಗೊಂಡ ಇವರು ಕೊಲ್ಲಮೊಗ್ರು ಶಾಖೆಯ ಬ್ರ್ಯಾಂಚ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 2022 ಜೂನ್ 01 ರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸುಧೀರ್ಘ 40 ವರ್ಷ 6 ತಿಂಗಳುಗಳ ಕಾಲ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರು ತಮ್ಮ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ವಳಲಂಬೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 5 ರಿಂದ 10ನೇ ತರಗತಿಯವರೆಗೆ ಗುತ್ತಿಗಾರಿನಲ್ಲಿ ವ್ಯಾಸಂಗ ಮಾಡಿ ಪದವಿಪೂರ್ವ ಶಿಕ್ಷಣವನ್ನು ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಪಡೆದು, ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪ್ರಥಮ ಕಲಾ ಪದವಿಯನ್ನು ಪಡೆದರು. ಹಾಗೂ ಅದೇ ವರ್ಷ ಎರಡು ತಿಂಗಳುಗಳ ಕಾಲ ಇದೇ ಸಂಸ್ಥೆಯಲ್ಲಿ ಸಾಲದ ಅರ್ಜಿ ಬರೆಯುವ ಕೆಲಸವನ್ನು ಮಾಡಿದ್ದರು.
ಕೊಲ್ಲಮೊಗ್ರು ಗ್ರಾಮದ ನಿವಾಸಿಯಾಗಿರುವ ಇವರು ಮೂಲತಃ ಗುತ್ತಿಗಾರು ಗ್ರಾಮದ ಮಣಿಯಾನಮನೆ ದಿ| ವೆಂಕಪ್ಪ ಮತ್ತು ದಿ| ಲಕ್ಷ್ಮೀ ದಂಪತಿಗಳ ಪುತ್ರರಾದ ಇವರ ತಂದೆ ವೆಂಕಪ್ಪ ಗೌಡ ರವರು ಮಂಡಲ ಪಂಚಾಯತ್ ಸದಸ್ಯರಾಗಿದ್ದವರು. ಅನಂತರಾಮ ರವರ ಪತ್ನಿ ಶ್ರೀಮತಿ ಉಷಾ ಗೃಹಿಣಿಯಾಗಿದ್ದಾರೆ. ಪುತ್ರ ಸೃಜನ್.ಎಂ.ಎ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮತ್ತೊರ್ವ ಪುತ್ರ ಕೀರ್ತನ್.ಎಂ.ಎ ರವರು ಎಂ.ಕಾಂ ಪದವಿಧರರಾಗಿದ್ದಾರೆ.
ಕರ್ತವ್ಯದೊಂದಿಗೆ ವಿವಿಧ ಸಂಘ-ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ನೌಕರರ ಸಂಘದ ನಿರ್ದೇಶಕರಾಗಿ, ಮಹಾತ್ಮ ಯುವಕ ಮಂಡಲ ಕೊಲ್ಲಮೊಗ್ರು ಇದರ ಕಾರ್ಯದರ್ಶಿಯಾಗಿ, ಮಯೂರ ಕಲಾಮಂದಿರ ಇದರ ಸ್ಥಾಪಕ ಕಾರ್ಯದರ್ಶಿಯಾಗಿ, ತಂಬಿನಡ್ಕ ಗೆಳೆಯರ ಬಳಗ ಇದರ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಕೊಲ್ಲಮೊಗ್ರು ಗೌಡ ಗ್ರಾಮ ಸಮಿತಿಯ ಸಂಚಾಲಕರಾಗಿ, ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಗುಳಿಗರಾಜ ಸೇವಾ ಸಮಿತಿ ಕಟ್ಟ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading