Ad Widget

ಗುತ್ತಿಗಾರು : ಅಮರ ನಾಟ್ಯ ತರಬೇತಿ ಕೇಂದ್ರ ಉದ್ಘಾಟನೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಚುರುಕುತನದ ಯಶಸ್ಸು, ಮೊಬೈಲ್ ಬಳಕೆಯಿಂದ ದೂರವಿರಿಸುವಿಕೆಯ ಪರಿಕಲ್ಪನೆಯೊಂದಿಗೆ “ಅಮರ ನಾಟ್ಯ” ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಜೂ.29 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗುತ್ತಿಗಾರು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಸ್ಥಾಪಕಾ ಧ್ಯಕ್ಷರಾದ ಸುರೇಶ್ ಕಂದ್ರಪ್ಪಾಡಿ, ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಗುತ್ತಿಗಾರು ಇದರ ಮಾಲಕರಾದ ಸಾಥ್ವಿಕ್ ಕನ್ನಡ್ಕ, ಅಮರ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ, ಟಿ.ಎ.ಪಿ.ಸಿ.ಯಂ.ಯಸ್ ಸುಳ್ಯ ಇದರ ನಿರ್ದೇಶಕರಾದ ಚಂಚಲಾ ಸನತ್, ಪಿ.ಎ.ಸಿ.ಎಸ್ ಬ್ಯಾಂಕ್ ಗುತ್ತಿಗಾರು ಇದರ ನಿರ್ದೇಶಕರಾದ ಶ್ರೀ ವಿನುತಾ ಪ್ರಶಾಂತ್ ಜಾಕೆ, ನಾಟ್ಯ ಪ್ರವೀಣೆ ಪ್ರಣಮ್ಯ ಸುಬ್ರಹ್ಮಣ್ಯ, ಶ್ಯಾಮಲಾ ಬಾಲಗೋಪಾಲ್ ಸುಬ್ರಹ್ಮಣ್ಯ, ಶ್ರೀಮತಿ ಭಾರತಿಗೋಪಾಲ್ ಸಿಬ್ಬಂದಿಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮಾಜಿ ಪಂಚಾಯತ್ ಸದಸ್ಯರಾದ ಸುಬ್ರಹ್ಮಣ್ಯ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಇವರುಗಳು ಜೊತೆಯಾಗಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿ ಗ್ರಾಮೀಣ ಪ್ರದೇಶದ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ಸುಕುಮಾರ್ ಕೊಡೊoಬು, ನಿರಂತ್ ದೇವಸ್ಯ, ಸುಕೇಶ್ ನಡುಗಲ್ಲು, ರಾಜೇಶ್ ಉತ್ರಂಬೆ, ವಾಣಿ ದಿನೇಶ್ ಕೊಡೊಂಬು, ಶೀನಪ್ಪ ಗೌಡ ಕೆದ್ಕರ್, ಬೇಬಿ ಗುತ್ತಿಗಾರು, ಮಣಿಕಂಠ, ಗಾಂಗೆಯ ಸುಬ್ರಹ್ಮಣ್ಯ, ಮನೋಜ್ ಕೊತ್ನಡ್ಕ ಸೇರಿದಂತೆ ಪುಟಾಣಿಗಳು ಉಪಸ್ಥಿತರಿದ್ದರು.
ಪ್ರತಿ ಆದಿತ್ಯವಾರ ಗುತ್ತಿಗಾರಿನ ಪ.ವರ್ಗದ ಸಭಾಭವನದಲ್ಲಿ ಬೆಳಿಗ್ಗೆ 10.30ರಿಂದ ಮದ್ಯಾಹ್ನ 1:00 ರವರೆಗೆ ನಾಟ್ಯ ತರಬೇತಿ ನಡೆಯಲಿದೆ. ಇಲ್ಲಿ ಸೆಮಿ ಕ್ಲಾಸಿಕಲ್, ಫ್ರಿಸ್ಟ್ರೈಲ್, ಕಂಟೆಂಪರರಿ, ಬಾಲಿವುಡ್, ಜಾನಪದ, ಬಿ-ಬೋಯಿಂಗ್ ಫಿಲ್ಮಿ, ಲಿರಿಕಲ್, ಕ್ಲಾಸಿಕಲ್ ಸೇರಿದಂತೆ ವಿವಿಧ ನಾಟ್ಯ ಪ್ರಕಾರಗಳ ತರಬೇತಿಯನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಸಂಘಟಕರು ತಿಳಿಸಿರುತ್ತಾರೆ
ಆಸಕ್ತಿಯುಳ್ಳ ವಿದ್ಯಾರ್ಥಿಗಳ ಪೋಷಕರು 6361935860 , 9686987113 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading