Ad Widget

ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವಿ ಗೂನಡ್ಕ ಶಾಖೆ ವತಿಯಿಂದ ಪೇರಡ್ಕ ಮದ್ರಸಾದಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಗೂನಡ್ಕ: ಭಾರತದ ಅತಿ ದೊಡ್ಡ ವಿದ್ವಾಂಸ ಒಕ್ಕೂಟವಾದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ನೂರನೇ ಸ್ಥಾಪನಾ ದಿನದ ಪ್ರಯುಕ್ತ ಪೇರಡ್ಕ ಗೂನಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವಿ ಗೂನಡ್ಕ ಶಾಖೆ ವತಿಯಿಂದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಅಹ್ಮದ್ ನ‌ಈಂ ಫೈಝಿ ಅಲ್ ಮ‌ಅಬರಿಯವರು ಸಂದೇಶ ನೀಡಿ ಮಾತನಾಡಿ, “ಸಮಸ್ತವು ಕಳೆದ ನೂರು ವರ್ಷಗಳಿಂದ ಭಾರತೀಯ ಮುಸಲ್ಮಾನರ ಪರಂಪರಾಗತ ಆದರ್ಶ ಸರಣಿಯಾದ ಅಹ್ಲುಸ್ಸುನ್ನಃ ವಲ್ ಜಮಾಅಃದ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಅಪಾರ ಕೊಡುಗೆ ನೀಡಿದ ಸಾತ್ವಿಕರಾದ ವಿದ್ವಾಂಸರ ಒಕ್ಕೂಟವಾಗಿದೆ. ಸಮಸ್ತ ಮತ್ತು ಅದರ ಉಪ ಸಮಿತಿಗಳು ಮುಸ್ಲಿಂ ಸಮುದಾಯದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ‌ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ  ನೀಡಿದ ಸೀಮಾತೀತವಾಗಿದೆ” ಎಂದು ಹೇಳಿ ಸಮಸ್ತದ ಶತ ವರ್ಷದ ಪ್ರಯಾಣದಲ್ಲಿ ಸಮರ್ಥ ನಾಯಕತ್ವ ನೀಡಿದ ಸಾತ್ವಿಕರನ್ನು ಸಂಕ್ಷಿಪ್ತವಾಗಿ ಸ್ಮರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್, “ಸಮಸ್ತದ ಕಾರ್ಯ ಚಟುವಟಿಕೆಗಳ ಫಲವಾಗಿ ನಮ್ಮ ಪ್ರದೇಶಗಳಲ್ಲಿ ಇಂದು ಸಮೃದ್ಧವಾದ ಧಾರ್ಮಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಾಧ್ಯವಾಗಿದೆ. ಸಮಸ್ತದ ಚಟುವಟಿಕೆಗಳು ಇನ್ನೂ ತಲುಪದ ಪ್ರದೇಶಗಳಿಗೆ ಹೋಲಿಸಿದರೆ ಇದು ಮನದಟ್ಟಾಗುತ್ತದೆ. ಈ ವಿದ್ವಾಂಸ ಸಂಘಟನೆಯ ನೂರನೇ ವಾರ್ಷಿಕ ಅಂತಾರಾಷ್ಟ್ರೀಯ ಸಮಾವೇಶ ನಮ್ಮ ಸಮೀಪ ಜಿಲ್ಲೆಯಾದ ಕಾಸರಗೋಡಿನ ಕುನಿಯ ಎಂಬಲ್ಲಿ ನಡೆಯಲಿದ್ದು, ನಾವೆಲ್ಲರೂ ಅದರ ಯಶಸ್ಸಿಗೆ ನಮ್ಮಿಂದಾಗುವ ಸೇವೆ ಸಲ್ಲಿಸೋಣ” ಎಂದು ಕರೆನೀಡಿದರು. ಎಂ.ಆರ್.ಡಿ.ಎ ಪೇರಡ್ಕ ಇದರ ಅಧ್ಯಕ್ಷರಾದ ಜನಾಬ್ ಜಿ.ಕೆ ಹಮೀದ್ ಗೂನಡ್ಕ ಶುಭಹಾರೈಸಿ ಮಾತನಾಡಿ, “ಸಮಸ್ತದ ಸೇವೆಗಳನ್ನು ವರ್ಣಿಸಲಸಾಧ್ಯ. ಸಮಸ್ತ ಮತ್ತು ಎಸ್.ಕೆ.ಎಸ್‌.ಎಸ್.ಎಫ್ ನಂತಹ ಸಂಘಟನೆಗಳು ಸಮಾಜದ ತಳಮಟ್ಟದಲ್ಲಿರುವ ವ್ಯಕ್ತಿಗಳನ್ನೂ ಪರಿಗಣಿಸಿ ಸರ್ವ ರೀತಿಯ ಸೇವೆಗಳನ್ನು ನೀಡುತ್ತಿವೆ” ಎಂದು ಪ್ರಶಂಸಿಸಿದರು. ಮದ್ರಸಾ ಅಧ್ಯಾಪಕರಾದ ಹಾರಿಸ್ ಕಾಮಿಲ್ ಅಝ್ಹರಿ, ಶಾಕಿರ್ ಮುಸ್ಲಿಯಾರ್, ಜಮಾಅತ್ ಉಪಾಧ್ಯಕ್ಷರಾದ ಹನೀಫ್ ಟಿ.ಬಿ , ಪ್ರಧಾನ ಕಾರ್ಯದರ್ಶಿ ಉಮರ್ ಪಿ.ಕೆ, ಜಮಾಅತ್ ಸದಸ್ಯರಾದ ಅಲ್ತಾಫ್ ಗೂನಡ್ಕ, ಅಶ್ರಫ್ ಪೇರಡ್ಕ ಮುಂತಾದವರು ಉಪಸ್ಥಿತರಿದ್ದರು. ಎಸ್.ಕೆ.ಎಸ್‌.ಎಸ್.ಎಫ್ ಗೂನಡ್ಕ ಶಾಖೆ ಪ್ರಧಾನ ಕಾರ್ಯದರ್ಶಿ ಹನೀಫ್ ಮೊಟ್ಟೆಂಗಾರ್ ಸ್ವಾಗತಿಸಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading