Ad Widget

ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ರಾಜ್ಯಾದ್ಯಂತ ಗ್ರಾ.ಪಂ ಕಛೇರಿಗಳ ಎದುರು ಬಿಜೆಪಿ ಪ್ರತಿಭಟನೆ

ಕೊಲ್ಲಮೊಗ್ರು ಗ್ರಾ.ಪಂ ಕಛೇರಿ ಎದುರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

9/11 ನಿವೇಶನಗಳ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ, ಅಕ್ರಮ-ಸಕ್ರಮ ತಿರಸ್ಕರಿಸಿರುವುದನ್ನು ಖಂಡಿಸಿ, ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೆ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೆ ಒತ್ತಾಯಿಸಿ, ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜ.23 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಛೇರಿಯ ಮುಂದೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಧವ ಚಾಂತಾಳ ರವರು “ರಾಜ್ಯ ಸರ್ಕಾರ ಯಾವುದೇ ಅನುದಾನಗಳನ್ನು ಗ್ರಾಮ ಪಂಚಾಯತ್ ಗಳಿಗೆ ನೀಡದೇ ಜನರಿಗೆ ಮೋಸ ಮಾಡಿದೆ. ಮುಂದಿನ ದಿನಗಳಲ್ಲಿ ಅನುದಾನ ನೀಡದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾದೀತು” ಎಂದು ಹೇಳಿದರು.
ಸತೀಶ್.ಟಿ.ಎನ್, ಬಾಲಸುಬ್ರಹ್ಮಣ್ಯ ಭಟ್, ಮೋಹಿನಿ ಕಟ್ಟ ಮೊದಲಾದವರು ಮಾತನಾಡಿ “ರಾಜ್ಯದಲ್ಲಿ ನಮ್ಮ ಕಾರ್ಯಕರ್ತರುಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಸರಿಯಲ್ಲ, ಹಿಂದೂ ಕಾರ್ಯಕರ್ತರುಗಳ ಮನೆಗೆ ರಾತ್ರಿ ದಾಳಿ ನಡೆಸಿ ಕೇಸ್ ದಾಖಲಿಸುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಹಾಗೂ ಮುಂದೆ ಬರುವಂತಹ ಎಲ್ಲಾ ಅನುದಾನಗಳನ್ನು ಪಂಚಾಯತ್ ಗೆ ಸರಿಯಾಗಿ ನೀಡಬೇಕು” ಎಂದರು.
ಈ ಸಂದರ್ಭದಲ್ಲಿ ಕಮಲಾಕ್ಷ ಮುಳ್ಳುಬಾಗಿಲು, ಜಯರಾಮ್ ಗೋಳ್ಯಾಡಿ, ಹೂವಪ್ಪ ಸಂಪ್ಯಾಡಿ, ತಾರಾನಾಥ್ ಕಟ್ಟ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರಾದ ಡ್ಯಾನಿ ಯಳದಾಳು, ವೇದಾವತಿ ಮುಳ್ಳುಬಾಗಿಲು, ಹಿರಿಯರಾದ ಶಿವರಾಮ ಮಾಸ್ತರ್ ಕುಂಞೇಟಿ, ಶೇಖರ್ ಕೊಂದಾಳ, ನೇಮಿಚಂದ್ರ ಬಳ್ಳಡ್ಕ, ಪಂಚಾಯತ್ ಸದಸ್ಯರಾದ ಅಶ್ವಥ್ ಯಳದಾಳು, ಕಾರ್ಯಕರ್ತರಾದ ಶಿವಕುಮಾರ್, ಕುಮಾರ ಶಿರೂರು, ಉದಯ ಶಿವಾಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹರೀಶ್ ಬಳ್ಳಡ್ಕ ಸ್ವಾಗತಿಸಿ ಜಯರಾಮ್ ಗೋಳ್ಯಾಡಿ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading