Ad Widget

ಹರಿಹರ ಪಲ್ಲತ್ತಡ್ಕ : ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ.) ಸುಳ್ಯ ತಾಲೂಕು, ಜನ ಜಾಗೃತಿ ವೇದಿಕೆ ಸುಬ್ರಹ್ಮಣ್ಯ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವು ಹರಿಹರ ಪಲ್ಲತ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಹರ್ಷ ಗೌಡರವರ ಅಧ್ಯಕ್ಷತೆಯಲ್ಲಿ ಜೂ.22ರಂದು ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ವಲಯ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳರವರು ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟಿಸಿ, “ಎಲ್ಲರೂ ಕೂಡ ತಂಬಾಕು ಸೇವನೆಯಂತಹ ದುಶ್ಚಟಗಳಿಂದ ದೂರ ಇದ್ದು, ತಮ್ಮ ತಮ್ಮ ಅರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ” ಎಂದು ಶುಭಹಾರೈಸಿದರು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಕೊಲ್ಲಮೊಗ್ರ, ಗುತ್ತಿಗಾರು ಸರಕಾರಿ ಅರೋಗ್ಯ ಕೇಂದ್ರದ ನೀರೀಕ್ಷಣಾಧಿಕಾರಿಗಳಾದ ಗುರುಪ್ರಸಾದ್ ರವರು ಮಾತನಾಡುತ್ತ “ಬೀಡಿ, ಸಿಗರೇಟ್, ಗುಟ್ಕ, ಡ್ರಗ್ಸ್, ತಂಬಾಕು ಸೇವನೆಯಿಂದ ಬರುವ ವಿವಿಧ ಖಾಯಿಲೆಗಳ ಬಗ್ಗೆ ವಿವರಿಸಿ ತಂಬಾಕುಗಳಿಂದ ಕೂಡಿದ ವಸ್ತುಗಳು ಮನುಷ್ಯನ ದೇಹವನ್ನು ಯಾವ ರೀತಿಯಲ್ಲಿ ಹದಗೆಡಿಸುತ್ತದೆ ಎಂದು ವಿವರಿಸಿ ಹೇಳುವುದರೊಂದಿಗೆ ಇಂತಹ ದುಶ್ಚಟದಿಂದ ದೂರ ಇದ್ದು ತಮ್ಮೆಲ್ಲರ ಅರೋಗ್ಯವನ್ನು ಕಾಪಾಡಿಕೊಳ್ಳಿ, ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಎಲ್ಲಿಯೂ ಕೂಡ ನೀರು ನಿಲ್ಲದೆ ಹಾಗೆ ನೋಡಿಕೊಳ್ಳಿ, ಒಂದು ವೇಳೆ ಮನೆಯ ಸುತ್ತಮುತ್ತಲಿನಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳದಿದ್ದರೆ ನೀರು ನಿಂತ ಜಾಗಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ವಿವಿಧ ರೀತಿಯ ರೋಗಗಳು ಹರಡಿ ನಮ್ಮ ಅರೋಗ್ಯವನ್ನು ನಾವೇ ಕೆಡಿಸಿ ಕೊಳ್ಳಬೇಕಾಗುತ್ತದೆ. ಆದ್ದರಿಂದ ಎಲ್ಲರು ಕೂಡ ತಂಬಾಕುವಿನಂತಹ ಸೇವನೆಗಳಿಂದ ದೂರ ಇದ್ದು, ಮನೆಯ ಸುತ್ತಲಿನ ಪರಿಸರವನ್ನು ಶುಚ್ಚಿಯಾಗಿಟ್ಟುಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ” ಎಂದು ಹೇಳಿದರು.
ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ.ಕೆ ರವರು ಪಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಒಕ್ಕೂಟದ ಪದಾಧಿಕಾರಿಗಳಾದ ಮೋಹನದಾಸ್, ಗಿರೀಶ್ ಎಂ.ಟಿ, ದಿನೇಶ್ ಟಿ, ಗೀತಾರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಉಪಸಮಿತಿ ಸದಸ್ಯರು, ದಾಖಲಾತಿ ಸಮಿತಿ ಸದಸ್ಯರು ಭಾಗವಹಿಸಿದ್ದರು.
ನೇತ್ರಾವತಿ ಸಂಘದ ಸದಸ್ಯರಾದ ಪುಷ್ಪಾವತಿಯವರು ಸ್ವಾಗತಿಸಿದರು. ಹರಿಹರ ಪಲ್ಲತ್ತಡ್ಕದ ಸೇವಾಪ್ರತಿನಿಧಿಯವರಾದ ಶ್ರೀಮತಿ ನಾಗವೇಣಿರವರು ಕಾರ್ಯಕ್ರಮ ನಿರೂಪಿಸಿದರು. ನೇತ್ರಾವತಿ ಸಂಘದ ಸದಸ್ಯರಾದ ಜಾನಕಿ ಎಂ.ಯು ರವರು ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading