

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಜೂ.14 ಶನಿವಾರದಂದು ವಿದ್ಯಾರ್ಥಿ ಮುಖಂಡರ ಚುನಾವಣೆ ನಡೆಯಿತು. ಚುನಾವಣೆ ದಿನಾಂಕ ಪ್ರಕಟಿಸುವುದರೊಂದಿಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ಮುಂದೆ ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಕೆ,ನಾಮಪತ್ರ ಹಿಂತೆಗೆತ,ಚಿಹ್ನೆಗಳ ಹಂಚಿಕೆ ನಡೆದಿದ್ದು ಬಹಿರಂಗ ಪ್ರಚಾರ,ಅಭ್ಯರ್ಥಿಗಳೊಂದಿಗೆ ಮುಖಾಮುಖಿಗೆ ಅವಕಾಶ ಮಾಡಿಕೊಡಲಾಯಿತು.
SPL ಸ್ಥಾನಗಳಿಗೆ ದೀಪ್ತಿ ಎಂ.ಆರ್ (10 ಬಿ) ಮನಸ್ವಿ ಎನ್ (10 ಬಿ) ಪ್ರೀತಂ.ಪಿ (10 ಬಿ) ಸ್ಪರ್ಧಿಸಿದ್ದರು.
ASPL ಹುಡುಗರ ಸ್ಥಾನಕ್ಕೆ – ಕೌಶಿಕ್ ಎನ್ (9 ಬಿ) ನಿತೇಶ್ ಬಿ (9 ಬಿ ) ಸ್ಪರ್ಧಿಸಿದ್ದರು.
ASPL ಹುಡುಗಿಯರ ಸ್ಥಾನಕ್ಕೆ ಲಿಪಿಕಾ ಸಿ ಯು (9ಬಿ), ದೀಕ್ಷಾ ಪಿ (9 ಎ) ಸ್ಪರ್ಧಿಸಿದ್ದರು.
ಮತದಾನದ ದಿನದಂದು ಪೂರ್ವ ಮತಗಟ್ಟೆ ಮತ್ತು ಪಶ್ಚಿಮ ಮತಗಟ್ಟೆ ಎಂದು ಎರಡು ವಿಭಾಗ ಮಾಡಲಾಯಿತು. ಶಿಕ್ಷಕರು ಅಧ್ಯಕ್ಷಾಧಿಕಾರಿ ಮತ್ತು ಚುನಾವಣಾ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿದರು. ಮತದಾರರನ್ನು ಗುರುತಿಸುವಿಗೆ, ಅಳಿಸಲಾಗದ ಶಾಯಿ ಬಳಕೆ,ಮತಪತ್ರ ನೀಡಿಕೆ ಮುಂತಾದ ಪ್ರಕ್ರಿಯೆಗಳು ಜರುಗಿದವು. ಮತದಾರರು ಮತಪೆಟ್ಟಿಗೆಯಲ್ಲಿ ತಮ್ಮ ಅಮೂಲ್ಯ ಮತಗಳನ್ನು ಹಾಕಿದರು. ಮುಂದೆ ಎಲ್ಲರ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಐದು ಸುತ್ತಿನ ಎಣಿಕೆಯು ನಡೆದಿತ್ತು. ಪ್ರತಿ ಅಭ್ಯರ್ಥಿ ಗಳಿಸಿದ ಮತಗಳನ್ನು ಕರಿಹಲಗೆಯಲ್ಲಿ ದಾಖಲು ಮಾಡುವ ವ್ಯವಸ್ಥೆ ಇತ್ತು. ಅಂತಿಮ ಫಲಿತಾಂಶ ಬಂದಾಗ SPL ಪ್ರೀತಂ ಪಿ (10 ಬಿ), ASPL (B) – ಕೌಶಿಕ್ ಎನ್ (9 ಬಿ), ASPL (G) – ದೀಕ್ಷಾ ಪಿ (9 ಎ ) ಬಹುಮತದಿಂದ ಆಯ್ಕೆಯಾದರು. ನಂತರ ಮುಖ್ಯ ಚುನಾವಣಾಧಿಕಾರಿಯಾಗಿರುವ ಮುಖ್ಯೋಪಾಧ್ಯಾಯರಾದ ಉದಯಕುಮಾರ್ ರೈ ಎಸ್ ಪ್ರಮಾಣ ಪತ್ರ ನೀಡಿ ನೂತನ ನಾಯಕರಿಗೆ ಶುಭವನ್ನು ಹಾರೈಸುತ್ತಾ, ಕರ್ತವ್ಯವನ್ನು ನೆನಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು.