Ad Widget

ಮಂಜುನಾಥೇಶ್ವರ ಭಜನಾ ಪರಿಷತ್ತಿನ ಪಂಜ ವಲಯದ ಸಭೆ – ಅಧ್ಯಕ್ಷರಾಗಿ ಪ್ರಕಾಶ್ ನರಿಯಂಗ, ಕಾರ್ಯದರ್ಶಿ ನಿರ್ಮಲ ಪಲ್ಲೋಡಿ



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಪಂಜ ವಲಯದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಭೆಯು ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ಎಲ್ಯಣ್ಣ ಗೌಡ ಕಟ್ಟ ಇವರ ಅಧ್ಯಕ್ಷತೆಯಲ್ಲಿ ಶಾರದಾ ಭಜನಾ ಮಂದಿರ ಪಂಜದಲ್ಲಿ ನಡೆಸಲಾಯಿತು.
ತಾಲ್ಲೂಕು ಭಜನಾ ಪರಿಷತ್ ನ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ರೈ ಅರ್ಗುಡಿ ಹಾಗೂ ರಾಜ್ಯ ಭಜನಾ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪತ್ಯ ರವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಈ ಸಭೆಯಲ್ಲಿ ಸುಳ್ಯ ತಾಲೂಕಿನ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಸೋಮಶೇಖರ ಪೈಕ ಮತ್ತು ಕಾರ್ಯದರ್ಶಿ ಗಳಾದ ಟಿ ನ್ ಸತೀಶ್ ತಾಲ್ಲೂಕು ಭಜನಾ ಕಾರ್ಯಕ್ರಮ ಬಗ್ಗೆ ತಿಳಿಸಿದರು ಹಾಗೂ ಉತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮ ಮಾಡುವಲ್ಲಿ ಸಹಕಾರ ಕೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ ) ಬಿ ಸಿ ಟ್ರಸ್ಟ್ ಸುಳ್ಯ ತಾಲ್ಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಾಲೂಕು ಭಜನಾ ಪರಿಷತ್ತಿನ ಕಾರ್ಯವೈಖರಿ ಹಾಗೂ ಭಜನೆಯಿಂದ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಮಕ್ಕಳಿಗೆ ಸಂಸ್ಕಾರ ಕಳಿಸುವಂತಹ ಪುಣ್ಯದ ಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸಬೇಕು. ಒಂದು ಉತ್ತಮ ಸಂಘಟನೆಯನ್ನು ನಿರ್ಮಾಣ ಮಾಡಲು ಭಜನಾ ಮಂಡಳಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು. ಹಾಗೂ ಈ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ವಲಯದಲ್ಲಿ ನಡೆಸುವುದಾಗಿ ತಿಳಿಸಿದರು.ರಾಜ್ಯ ಭಜನಾ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪುತ್ಯ ರವರು ಮನೆ ಮನೆಯಲ್ಲಿ, ಹಳ್ಳಿ ಹಳ್ಳಿಯಲ್ಲಿ ಭಜನೆ ಆಗುವಂತೆ ಮಾಡುವ ಎಂದು ತಿಳಿಸಿದರು. ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ರೈ ಅರ್ಗುಡಿರವರು ಭಜನಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಮಾಡುವ ಎಂದು ತಿಳಿಸಿದರು. ಸಮಾಜಕ್ಕೆ ಉತ್ತಮ ಸಂಸ್ಕಾರ, ಸಂಪ್ರದಾಯ ಗಳನ್ನು ಬೆಳೆಸುವಲ್ಲಿ ಇಂತಹ ಸಂಸ್ಥೆ ಗಳೊಂದಿಗೆ ಜನರು ಸಹಕಾರ ನೀಡುವ ಅಗತ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ವಲಯ ಸಮಿತಿ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಪ್ರಕಾಶ್ ನರಿಯಂಗ, ಉಪಾಧ್ಯಕ್ಷರಾಗಿ ಲಕ್ಷ್ಮಣ ಸಂಕಡ್ಕ, ಕಾರ್ಯದರ್ಶಿ ನಿರ್ಮಲ ಪಲ್ಲೋಡಿ, ಜೊತೆ ಕಾರ್ಯದರ್ಶಿ ಯತೀಶ್ ಕಟ್ಟೆಮನೆ, ಕೋಶಾಧಿಕಾರಿ – ನಾಗಪ್ಪ ಗೌಡ ಪಂಜದ ಬೈಲು, ಸಮಿತಿಯ ಸದಸ್ಯರನ್ನಾಗಿ ಎಲ್ಯಣ್ಯ ಗೌಡ ಕಟ್ಟ, ಶ್ರೀಮತಿ ಸರಿತಾ, ಆದರ್ಶ ಬನ, ಗಣೇಶ್ ಬೋಳ್ಮಲೆ, ನಾರಾಯಣ ಸಿರಾಜೆ ಅವರನ್ನು ಆಯ್ಕೆ ಮಾಡಲಾಯಿತು. ವಲಯದ ಭಜನಾ ಪರಿಷತ್ತಿನ ನಿರ್ದೇಶಕರು ಚಂದ್ರಕಾಂತ ಬಳ್ಪ, ಸ್ವಸಹಾಯ ಸಂಘಗಳ ಒಕ್ಕೂಟದ ವಲಯದ ಅಧ್ಯಕ್ಷರಾದ ಧರ್ಮಪಾಲ ಕಣ್ಕಲ್ ಹಾಗೂ ಪಂಜ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪಂಜ ವಲಯದಲ್ಲಿ 10ಭಜನಾ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು. ವಿಶ್ವನಾಥ ರೈ ಅರ್ಗುಡಿ ಪ್ರಾರ್ಥಿಸಿದರು. ಕೇನ್ಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ವೀಣಾ ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ರೋಹಿಣಿ ನಿರೂಪಣೆ ಮತ್ತು ಕೂತ್ಕುಂಜ ಸೇವಾಪ್ರತಿನಿಧಿ ಕವಿತಾ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading