Ad Widget

ಕುಕ್ಕುಜಡ್ಕ : ಅಮರ ಸಂಘಟನಾ  ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ

ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಚೊಕ್ಕಾಡಿ ಎಜ್ಯುಕೇಶನ್ ಸೊಸೖಟಿ(ರಿ.) ಕುಕ್ಕುಜಡ್ಕ ಇದರ ವಿದ್ಯಾಸಂಸ್ಥೆಯಾದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮ
ಜೂನ್ 15ರಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕುಸುಮಾಧರ ಮುಕ್ಕೂರು ಅಧ್ಯಕ್ಷರು ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇವರು ವಹಿಸಿದ್ದರು, ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು| ಭಾಗಿರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೖಸಿದರು, ವೇದಿಕೆಯಲ್ಲಿ ಶ್ರೀ ಈರಯ್ಯ ದೂಂತೂರು ಉಪನಿರೀಕ್ಷಕರು ಆರಕ್ಷಕ ಠಾಣೆ ಬೆಳ್ಳಾರೆ, ಶ್ರೀ ರಾಧಕೃಷ್ಣ ಬೊಳ್ಳೂರು ಸಂಚಾಲಕರು, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಶ್ರೀಮತಿ ಜಾನಕಿ ಕಂದಡ್ಕ ಅಧ್ಯಕ್ಷರು ಗ್ರಾಮ ಪಂಚಾಯತ್ ಅಮರ ಮುಡ್ನೂರು, ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಿಶ್ವನಾಥ ಮೂಕಮಲೆ, ಶ್ರೀ ಸಂಕೀರ್ಣ ಚೊಕ್ಕಾಡಿ ಮುಖ್ಯೋಪಾಧ್ಯರು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಹಾಗೂ ಹಳೆ ವಿದ್ಯಾರ್ಥಿ ಸಂಘಧ ಅಧ್ಯಕ್ಷರಾದ ಶ್ರೀ ತೇಜಸ್ವಿ ಕಡಪಳ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿಯಾದ ಜಯಪ್ರಸಾದ್ ಸಂಕೇಶ ಸ್ವಾಗತಿಸಿ, ಕೀರ್ತನ್ ಪಾರೆ ವಂದಿಸಿದರು, ನಿರ್ದೇಶಕ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು 39000/- ಮೊತ್ತದ ವೆಚ್ಚದಲ್ಲಿ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading