Ad Widget

ಕುಕ್ಕೆ ಸುಬ್ರಹ್ಮಣ್ಯ : ಬೆಳ್ಳಿರಥ ನಿರ್ಮಾಣಕ್ಕೆ ಡಾ| ರೇಣುಕಾ ಪ್ರಸಾದ್ ಕುಟುಂಬದವರಿಂದ ವೀಳ್ಯ ನೀಡಿಕೆ

. . . . . . . . .

. . . . . . .

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ| ಕೆ.ವಿ ರೇಣುಕಾ ಪ್ರಸಾದ್ ಮತ್ತು ಕುಟುಂಬದವರು ಬೆಳ್ಳಿ ರಥ ನೀಡಲಿದ್ದು, ಅದರ ಪೂರ್ವಭಾವಿಯಾಗಿ ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮವು ಜೂ.14 ರಂದು ನಡೆಯಿತು.
ದೇವಾಲಯದಲ್ಲಿ ಶಾಸ್ತ್ರೋಕ್ತ ವಿಧಿಯೊಂದಿಗೆ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರಿದ್ದು, ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ಸೇರಿದಂತೆ ಮುಂತಾದವರು ಅನುಮತಿ ಪತ್ರವನ್ನು ಹಸ್ತಾಂತರಿಸಿದರು. ನಂತರ ವೀಳ್ಯ ನೀಡಿಕೆ ನಡೆಯಿತು.
ಇನ್ನು ರಥ ನಿರ್ಮಾಣಕ್ಕೆ ಸಾಂಕೇತಿಕವಾಗಿ ಬೆಳ್ಳಿ ಮತ್ತು ಮರ ಹಸ್ತಾಂತರ ನಡೆಯಲಿದೆ.
ಈ ಸಂದರ್ಭದಲ್ಲಿ ಭರತ್ ಮುಂಡೋಡಿ, ನಿತ್ಯಾನಂದ ಮುಂಡೋಡಿ, ಮೋಹನ್ ರಾಮ್ ಸುಳ್ಳಿ, ರಥ ಶಿಲ್ಪಿ ರಾಜಗೋಪಾಲ್ ಆಚಾರ್ಯ, ಡಾ| ರೇಣುಕಾ ಪ್ರಸಾದ್, ಡಾ| ಜ್ಯೋತಿ.ಆರ್ ಪ್ರಸಾದ್, ಮೌರ್ಯ, ಡಾ| ಅಭಿಜ್ಞಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ| ರಘು, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಪ್ರವೀಣಾ ರೈ, ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರಾದ ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಪವನ್.ಎಂ.ಡಿ, ಅಚ್ಯುತ ಆಲ್ಕಬೆ, ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ, ವಿಧಾನಪರಿಷತ್ ಸದಸ್ಯರಾದ ಜಿ.ಕೃಷ್ಣಪ್ಪ, ಪಿ.ಸಿ ಜಯರಾಮ್, ಎಸ್.ಎನ್ ಮನ್ಮಥ, ವೆಂಕಟ್ ದಂಬೆಕೋಡಿ, ಎನ್.ಎ ರಾಮಚಂದ್ರ, ಚಂದ್ರಾ ಕೋಲ್ಚಾರು, ಹರೀಶ್ ಕಂಜಿಪಿಲಿ, ಭರತ್ ನೆಕ್ರಾಜೆ, ಸಂತೋಷ್ ಜಾಕೆ, ದಯಾನಂದ ಕುರುಂಜಿ, ಕೃಷ್ಣಮೂರ್ತಿ ಭಟ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading